Sharmitha Gowda: ಮಲೆನಾಡ ಖಳನಟಿ ಮೈ ಮೇಲೆ ಹೆಬ್ಬಾವು!
ಸ್ಟೈಲಿಶ್ ವಿಲನ್ ಎನಿಸಿಕೊಂಡಿರುವ ನಟಿ ಶರ್ಮಿತಾ ಗೌಡ ಕಣ್ಣಿನಲ್ಲೇ ನಟನೆಯನ್ನು ಮಾಡುತ್ತಾರೆ. ಗೀತಾ ಧಾರಾವಾಹಿಯಲ್ಲಿ ಮಲತಾಯಿ ಪಾತ್ರದಲ್ಲಿ ಎಲ್ಲರ ಮನಗೆದ್ದಿರುವ ಶರ್ಮಿತಾ ಗೌಡ ಅವರ ಡ್ರೆಸ್ಸಿಂಗ್‌ಸೆನ್ಸ್ ಅನೇಕರಿಗೆ ಇಷ್ಟವಾಗಿದೆ. ಕೇವಲ ಧಾರಾವಾಹಿಯಷ್ಟೇ ಅಲ್ಲದೆ ಶರ್ಮಿತಾ ಅವರು ರಿಯಲ್ ಲೈಫ್‌ನಲ್ಲೂ ಫ್ಯಾಷನ್ ಕಡೆಗೆ ಹೆಚ್ಚು ಗಮನ ನೀಡುತ್ತಾರೆ. ಸದ್ಯ ಹೆಬ್ಬಾವು ಹಿಡಿದು ಆಕೆ ಪೋಸ್ ಕೊಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಶರ್ಮಿತಾ ಗೌಡ ಅವರ ಸ್ಟೈಲಿಷ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇತ್ತೀಚೆಗೆ ಆಕೆ ಶ್ರೀಲಂಕಾ, ವಿಯೆಟ್ನಾಂ ಟ್ರಿಪ್ ಹೋಗಿ ಎಂಜಾಯ್ ಮಾಡಿದ್ದು, ಬಿಕಿನಿ ಹಾಗೂ ಸ್ಟೈಲಿಶ್ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಕಿರುತೆರೆಯಲ್ಲಿ ಖಳನಟಿ ಆಗಿದ್ದರೂ ಶರ್ಮಿತಾ ಕೂಡ ತಮ್ಮದೇ ಆದ ಟ್ರೆಂಡ್ ಸೆಟ್ ಮಾಡಿದ್ದಾರೆ.

'ಗೀತಾ' ಧಾರಾವಾಹಿಲ್ಲಿ ಮಲ ತಾಯಿ ಆಗಿ ಮಗನನ್ನು ಅತಿಯಾಗಿ ಮುದ್ದಿಸುತ್ತಾ ಒಳಗೊಳಗೆ ದ್ವೇಷ ಸಾಧಿಸುವ ಭಾನುಮತಿ ಪಾತ್ರದಲ್ಲಿ ಶರ್ಮಿತಾ ವೀಕ್ಷಕರನ್ನು ರಂಜಿಸಿದ್ದಾರೆ. ಒಂದೆಡೆ ಪ್ರೀತಿ, ಮತ್ತೊಮ್ಮೆ ಸಿಡುಕು, ಕಿಡಿಕಾರುವ ಕಣ್ಣೋಟದಿಂದಲೇ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ. ಚಿಕ್ಕಮಗಳೂರಿನ ಬೆಡಗಿ ಶರ್ಮಿತಾ ಗೌಡ ಎಂಎಸ್ಸಿ ಬಯೋಕೆಮಿಸ್ಟ್ರಿ ಓದಿದ್ದಾರೆ. ಬಿಎಸ್ಸಿ ಹಾಗೂ ಎಂಎಸ್ಸಿ ಅಲ್ಲಿ ಗೋಲ್ಡ್ ಮೆಡಲ್ ಪಡೆದ ಬುದ್ಧಿವಂತೆ ಶರ್ಮಿತಾ.
ಕಣ್ಣೋಟದಲ್ಲೇ ನಟಿಸುವ ಬೆಡಗಿ
ನ್ಯೂಟ್ರಿಷಿಯನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಶರ್ಮಿತಾ ಗೌಡ ಮಿಸೆಸ್ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ರನ್ನರ್ ಅಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ನೇಹಿತರ ಸಲಹೆ ಮೇರೆಗೆ ಆಡಿಷನ್ ಗಳಲ್ಲಿ ಭಾಗವಹಿಸಿ ಈಗ ಮಾರ್ಡನ್ ವಿಲನ್, ಸ್ಟೈಲಿಶ್ ವಿಲನ್, ಯಂಗ್ ಮದರ್ ಎನ್ನುವ ಬಿರುದುಗಳನ್ನು ಪಡೆದುಕೊಂಡಿದ್ದಾರೆ. ಶರ್ಮಿತಾ ಅವರ ಮೊದಲ ಧಾರಾವಾಹಿ 'ಜಾನಕಿ ರಾಘವ'.
ಮೊದಲ ಧಾರಾವಾಹಿಯಲ್ಲೇ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡ ಶರ್ಮಿತಾ ಗೌಡ ಅವರಿಗೆ ಭಾರೀ ಜನಪ್ರಿಯತೆಯನ್ನು ತಂದುಕೊಟ್ಟಿತು. ಆ ಬಳಿಕ ಸಾಲು ಸಾಲು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. 'ಮನೆಯೇ ಮಂತ್ರಾಲಯ', 'ನೀಲಾ', 'ಯಾರಿವಳು' ಧಾರಾವಾಹಿಗಳಲ್ಲಿ ನಟಿಸಿದ್ದು, ಸದ್ಯ ಕನ್ನಡದ 'ಗೀತಾ' ಹಾಗೂ ತೆಲುಗಿನ 'ಬ್ರಹ್ಮ ಮುಡಿ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.

ನ್ಯೂಟ್ರೀಷಿಯನಿಸ್ಟ್ ನಟಿ
ಶರ್ಮಿತಾ ಅವರು ಫಿಟ್ನೆಸ್ ಹಾಗೂ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಮೊದಲೇ ನ್ಯೂಟ್ರಿಷಿಯನಿಸ್ಟ್ ಆಗಿರುವ ಶರ್ಮಿತಾ ಸದಾ ನಿದ್ರೆ, ಪೌಷ್ಟಿಕ ಆಹಾರ ತೆಗೆದುಕೊಳ್ಳುತ್ತಾರೆ. ವ್ಯಾಯಾಮ, ಕಾರ್ಡಿಯೊ ಕೂಡ ಮಾಡುತ್ತಾರಂತೆ. ಇನ್ನು ಸಿನಿಮಾಗಳಲ್ಲೂ ನಟಿಸಿರುವ ಇವರು, 'ಫ್ಯಾಮಿಲಿ ಪ್ಯಾಕ್', 'ಆಮ್ಲೆಟ್', 'ಸೀತಾಯಣ' ಪ್ರೇಕ್ಷಕರ ಮುಂದೆ ಬಂದಿದ್ದರು. ನಿಜ ಜೀವನದಲ್ಲಿ ಸಾಫ್ಟ್ ಆಗಿರುವ ಶರ್ಮಿತಾ, ಧಾರಾವಾಹಿಗಳಲ್ಲಿ ನಟಿಸುವುದಕ್ಕಿಂತ ವಿಭಿನ್ನವಾಗಿದ್ದಾರೆ.
ಶರ್ಮಿತಾ ಮೈಮೇಲೆ ಹೆಬ್ಬಾವು
ಇನ್ನು ಶರ್ಮಿತಾ ಅವರಿಗೆ ಮದುವೆಯೂ ಆಗಿದ್ದು, ಅವರ ಪತಿ ನಟನೆಗೆ ಫುಲ್ ಸಪೋರ್ಟ್ ಮಾಡುತ್ತಾರಂತೆ. ಬಿಡುವಿನ ಸಮಯದಲ್ಲಿ ಭಾನುಮತಿ ಉರ್ಫ್ ಶರ್ಮಿತಾ ಅವರು ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಸದಾ ರೀಲ್ಸ್ ಕೂಡ ಮಾಡುತ್ತಿರುತ್ತಾರೆ. ಇತ್ತೀಚೆಗೆ ವಿಯೆಟ್ನಾಂ ಪ್ರವಾಸ ಹೋಗಿದ್ದ ಶರ್ಮಿತಾ ಅವರು ಅಲ್ಲಿ ತೆಗೆಸಿಕೊಂಡ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಕ್ಕೆ, ಅಭಿಮಾನಿಗಳು ಬೇಸರಗೊಂಡಿದ್ದರು. ಶರ್ಮಿತಾ ಅವರಿಗೆ ನಾಯಕಿಯ ಪಾತ್ರ ಸಿಗುತ್ತಿಲ್ಲ. ಯಾವ ಹೀರೋಯಿನ್‌ಗೂ ಕಡಿಮೆ ಇಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇದೀಗ ಶರ್ಮಿನಾ ನೀಲಿ ಬಣ್ಣದ ಬಾಡಿಕಾನ್ ಡ್ರೆಸ್‌ನಲ್ಲಿ ಹೆಬ್ಬಾವನ್ನು ಭುಜದ ಮೇಲೆ ಹೊತ್ತುಕೊಂಡಿರುವ ಫೋಟೊ ಹಂಚಿಕೊಂಡಿದ್ದಾರೆ. ಹಾವು ಅಂದ್ರೆ ಜನ ಹೆದರುತ್ತಾರೆ. ಇನ್ನು ಹಾವನ್ನು ನೋಡಿದರೆ ಓಡಿ ಹೋಗುತ್ತಾರೆ. ಅದರಲ್ಲೂ ಹೆಬ್ಬಾವನ್ನು ನಟಿ ಶರ್ಮಿತಾ ಹೊತ್ತುಕೊಂಡಿರುವುದು ನೋಡಿ ಕೆಲವರು ಹುಬ್ಬೇರಿಸಿದ್ದಾರೆ. ಅಭಿಮಾನಿಗಳು ಬಹಳ ನೀವು ಬೋಲ್ಡ್, ಗ್ರೇಟ್, ಹುಷಾರು ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











