Bhavya Gowda: ಒಮ್ಮೆ ಬಳಸಿದ ಬಟ್ಟೆ ಮತ್ತೆ ಬಳಸೋದಿಲ್ವಂತೆ ನಟಿ ಭವ್ಯ ಗೌಡ !
ಭವ್ಯ ಗೌಡ ಮಂಡ್ಯದ ನಾಗಮಂಗಲದವರು. ಇವರು ಆರಂಭದಲ್ಲಿ ಟಿಕ್ ಟಾಕ್ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಇವರ ಟಿಕ್ ಟಾಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಲಕ್ಷ ಗಟ್ಟಲೆ ವೀಕ್ಷಣೆ ಪಡೆದಿತ್ತು. ಗಗನ ಸಖಿ ಆಗಬೇಕೆಂಬ ಹಂಬಲ ಇಟ್ಟುಕೊಂಡಿದ್ದರು. ಆದರೆ, ಮನೆಯವರ ಒತ್ತಾಯಕ್ಕೆ ಮಣಿದು ನಟನಾ ಲೋಕಕ್ಕೆ ಕಾಲಿಟ್ಟರು. ಭವ್ಯ ತಂದೆ ತಾಯಿಗೆ ಮಗಳು ನಟನಾ ಲೋಕದಲ್ಲಿ ಮಿಂಚಬೇಕು ಎನ್ನುವ ಆಸೆಯಿತ್ತು. ಈ ಕಾರಣಕ್ಕೆ ತಂದೆ ತಾಯಿ ಆಸೆಯಂತೆ ಸಂಪೂರ್ಣವಾಗಿ ನಟನೆಯತ್ತ ವಾಲಿದರು.
ಹೀರೊಯಿನ್‌ಗಳಿಗೆ ಕಿರುತೆರೆಯಲ್ಲಿ ನಟಿಸುತ್ತಿರುವಾಗ ಬೆಳ್ಳಿ ಪರದೆಯಲ್ಲಿ ನಟಿಸೋಕೆ ಆಫರ್ ಬರೋದು ಕಾಮನ್. ಕಿರುತೆರೆಯಿಂದ ಹಿರಿತೆರೆಗೆ ಬಂದು ಮಿಂಚಿದ ಅನೇಕ ಕಲಾವಿದರಿದ್ದಾರೆ. ಈ ಸಾಲಿಗೆ 'ಗೀತಾ' ಧಾರಾವಾಹಿ ಮೂಲಕ ಮನೆ ಮಾತಾಗಿರುವ ಭವ್ಯ ಗೌಡ ಕೂಡ ಸೇರ್ಪಡೆ ಆಗಿದ್ದಾರೆ. ಭವ್ಯ ಗೌಡ ಸ್ಯಾಂಡಲ್‌ವುಡ್‌ಗೆ ಕಾಲಿಡೋಕೆ ಸಜ್ಜಾಗಿದ್ದಾರೆ. ವಿಸ್ಮಯಾ ಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಡಿಯರ್ ಕಣ್ಮಣಿ' ಚಿತ್ರಕ್ಕೆ ಭವ್ಯಾ ಗೌಡ ನಾಯಕಿಯಾಗಿ ಎಂಟ್ರಿಕೊಟ್ಟಿದ್ದಾರೆ. ಈ ಮೊದಲು ನಟಿ 'ಸಾತ್ವಿಕ' ಚಿತ್ರ ತಂಡ ಸೇರಿಕೊಂಡಿದ್ದರು. ಈಗ ಚಿತ್ರಕ್ಕೆ ಹೊಸ ಎಂಟ್ರಿಯಾಗಿ ಭವ್ಯಾ ಗೌಡ ಸೇರಿಕೊಂಡಿದ್ದಾರೆ.

'ಡಿಯರ್ ಕಣ್ಮಣಿ'ಗೆ ಕಿಶನ್ ಬಿಳಗಲಿ ಮತ್ತು ಪ್ರವೀಣ್ ಹೀರೋ. ಹಾಗಾಗಿ ಈ ಸಿನಿಮಾದಲ್ಲಿ ಇಬ್ಬರು ಹೀರೋಯಿನ್ ಇದ್ದಾರೆ. 'ಸಾತ್ವಿಕಾ' ಮತ್ತು ಭವ್ಯ ಗೌಡ ಅವರನ್ನು ನಾಯಕಿಯಾಗಿ ಚಿತ್ರತಂಡ ಆಯ್ಕೆ ಮಾಡಿಕೊಂಡಿದೆ. 'ಗೀತಾ' ಧಾರಾವಾಹಿಯಲ್ಲಿ ಭವ್ಯಾ ಗೌಡ ಪಾತ್ರ ಭಿನ್ನವಾಗಿದೆ. ಕಾಲೇಜು ಹುಡುಗಿಯಾಗಿ ಭವ್ಯ ನಟಿಸುತ್ತಿದ್ದಾರೆ. ಆದರೆ, ಈ ಪಾತ್ರಕ್ಕಿಂತ ಡಿಯರ್ ಕಣ್ಮಣಿ ಸಿನಿಮಾದ ಪಾತ್ರ ಭಿನ್ನವಾಗಿರಲಿದೆಯಂತೆ. ಈ ಮೊದಲಿನಿಂದಲೂ ಭವ್ಯ ಸಿನಿಮಾ ಆಫರ್‌ಗಾಗಿ ಕಾದಿದ್ದರು. ಒಂದೊಳ್ಳೆಯ ಕಥೆ ಸಿಕ್ಕರೆ ನಟಿಸುವ ಆಲೋಚನೆ ಅವರದ್ದಾಗಿತ್ತು. ಕೊನೆಗೂ ಭವ್ಯ ಬೆಳ್ಳಿ ಪರದೆಗೆ ಕಾಲಿಡುತ್ತಿದ್ದಾರೆ ಎನ್ನುವ ವಿಚಾರ ಕೇಳಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ಖಾಸಗಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೀತಾ' ಧಾರಾವಾಹಿ ವೀಕ್ಷಕರ ಮನಸ್ಸಲ್ಲಿ ಮನೆ ಮಾಡಿದೆ. ಅದರಲ್ಲೂ ಪ್ರಮುಖ ಪಾತ್ರಧಾರಿ 'ಗೀತಾ' ಅಲಿಯಾಸ್ ಭವ್ಯ ಎಲ್ಲರಿಗೂ ಅಚ್ಚುಮೆಚ್ಚು. 'ಗೀತಾ' ಧಾರಾವಾಹಿಯಲ್ಲಿ ಭವ್ಯ ಒಂದು ದಿನ ಧರಿಸಿದ ಬಟ್ಟೆ ಮತ್ತೊಂದು ದಿನ ಹಾಕಲ್ವಂತೆ. ಈಗಾಗಲೇ 300 ಎಪಿಸೋಡ್ ಶೂಟಿಂಗ್ ಮಾಡಿದ್ದಾರೆ. ನನ್ನ ಬಳಿ ಈಗಾಗಲೇ ಮೂರು ಸಾವಿರ ಬಟ್ಟೆಗಳಿವೆ. ಮನೆ ತುಂಬಾ ಬರೀ ಬಟ್ಟೆಗಳೇ ಕಾಣಿಸುತ್ತವೆ ಎಂದು ಭವ್ಯ ಹೇಳಿದ್ದಾರೆ. ಗೀತಾ ಧಾರಾವಾಹಿಯಿಂದ ಅವರಿಗೆ ಉತ್ತಮ ಹೆಸರು ಕೂಡ ಸಿಕ್ಕಿದೆ. ಭವ್ಯ ಗೌಡ ಅವರ ಮುದ್ದಾದ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ.


Click it and Unblock the Notifications











