Sharmitha Gowda: ಸೀರಿಯಲ್ ವಿಲನ್ ಶರ್ಮಿತಾ ಗೌಡ ರಿಯಲ್ ಲೈಫ್ ಹೇಗಿದೆ ನೋಡಿ?
ಖಳ ನಾಯಕಿಯಾಗಿ ತಮ್ಮದೇ ಆದ ಟ್ರೆಂಡ್ ಸೆಟ್ ಮಾಡಿರುವ ನಟಿ ಶರ್ಮಿತಾ ಗೌಡ ಮಾರ್ಡನ್ ವಿಲನ್ ಎಂದರೆ ತಪ್ಪಾಗಲಾರದು. 'ಗೀತಾ' ಧಾರಾವಾಹಿಯಲ್ಲಿ ಮಲಮಗನನ್ನು ಅತಿಯಾಗಿ ಮುದ್ದಿಸುತ್ತಾ ಒಳಗೊಳಗೆ ದ್ವೇಷ ಸಾಧಿಸುವ ಭಾನುಮತಿ ಪಾತ್ರದಲ್ಲಿ ಶರ್ಮಿತಾ ಗೌಡ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಒಂದೆಡೆ ಪ್ರೀತಿ, ಮತ್ತೊಮ್ಮೆ ಸಿಡುಕು, ಕಿಡಿಕಾರುವ ಕಣ್ಣೋಟದಿಂದಲೇ ಅಭಿಮಾನಿಗಳ ಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ.
ಚಿಕ್ಕಮಗಳೂರಿನ ಬೆಡಗಿ ಶರ್ಮಿತಾ ಗೌಡ ಎಂಎಸ್ಸಿ ಬಯೋ ಕೆಮಿಸ್ಟ್ರಿ ಓದಿದ್ದಾರೆ. ನ್ಯೂಟ್ರಿಶಿಯನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಇವರು ಮಿಸೆಸ್ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ರನ್ನರ್ ಅಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಬಿಎಸ್ಸಿ ಹಾಗೂ ಎಂಎಸ್ಸಿ ಎರಡರಲ್ಲೂ ಶರ್ಮಿತಾ ಗೌಡ ಅಗ್ರಶ್ರೇಯಾಂಕ ಪಡೆದು ಗೋಲ್ಡ್ ಮೆಡಲ್ ತೆಗೆದುಕೊಂಡಿದ್ದಾರೆ.
ಶರ್ಮಿತಾ ಗೌಡ ಅಂದ-ಚೆಂದ, ಪ್ರತಿಭೆ ಬಗ್ಗೆ ತಿಳಿದಿದ್ದ ಸ್ನೇಹಿತರು ಸೌಂದರ್ಯ ಸ್ಫರ್ಧೆ ಹಾಗೂ ಅಭಿನಯ ಕ್ಷೇತ್ರಗಳಲ್ಲಿ ಭಾಗವಹಿಸುವಂತೆ ಒತ್ತಾಯ ಮಾಡಿದ್ದರು. ಈ ಮೂಲಕ ಶರ್ಮಿತಾ ಗೌಡ ಕಿರುತೆರೆಗೆ ಎಂಟ್ರಿ ಕೊಟ್ಟರು. ಶರ್ಮಿತಾ ಮೊದಲ ಧಾರಾವಾಹಿ 'ಜಾನಕಿ ರಾಘವ'. ಮೊದಲ ಧಾರಾವಾಹಿಯಲ್ಲೇ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡ ಶರ್ಮಿತಾ ಗೌಡಗೆ ಭಾರೀ ಜನಪ್ರಿಯತೆಯನ್ನು ತಂದುಕೊಟ್ಟಿತು.

'ಗೀತಾ' ಧಾರಾವಾಹಿಯಲ್ಲಿ ಮಲತಾಯಿ ಪಾತ್ರದಲ್ಲಿ ಎಲ್ಲರ ಮನಗೆದ್ದಿರುವ ಶರ್ಮಿತಾ ಗೌಡ ಡ್ರೆಸ್ಸಿಂಗ್ ಸೆನ್ಸ್ ಅನೇಕರಿಗೆ ಇಷ್ಟವಾಗಿದೆ. ಕೇವಲ ಧಾರಾವಾಹಿಯಷ್ಟೇ ಅಲ್ಲದೆ ಶರ್ಮಿತಾ ರಿಯಲ್ ಲೈಫ್‌ನಲ್ಲೂ ಫ್ಯಾಷನ್ ಕಡೆಗೆ ಹೆಚ್ಚು ಗಮನ ನೀಡುತ್ತಾರೆ. ಸದಾ ಆಕ್ಟೀವ್ ಆಗಿರುವ ಶರ್ಮಿತಾ ಅವರ ಸ್ಟೈಲಿಷ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಶರ್ಮಿತಾ ಗೌಡ ವಿಲನ್ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದಾರೆ. ಅತ್ಯುತ್ತಮ ಖಳನಾಯಕಿ ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.
ಶರ್ಮಿತಾ ಗೌಡಗೆ ತಾವು ಸೇವಿಸುವ ಆಹಾರ ಹಾಗೂ ತಮ್ಮ ಫಿಟ್‌ನೆಸ್ ಬಗ್ಗೆ ತುಂಬಾ ಕಾಳಜಿ ಹೊಂದಿದ್ದಾರೆ. ಮೊದಲೇ ನ್ಯೂಟ್ರಿಷಿಯನಿಸ್ಟ್ ಆಗಿರುವ ಶರ್ಮಿತಾ ಸದಾ ನಿದ್ರೆ, ಪೌಷ್ಟಿಕ ಆಹಾರ ತೆಗೆದುಕೊಳ್ಳುತ್ತಾರೆ. ಶೂಟಿಂಗ್ ಇದ್ದ ಸಮಯದಲ್ಲಿ ಶರ್ಮಿತಾ ಸರಳವಾದ ವ್ಯಾಯಾಮ, ಕಾರ್ಡಿಯೊ ಅಷ್ಟೇ ಮಾಡುತ್ತಾರಂತೆ. ಆಹಾರಪ್ರಿಯೆ ಆಗಿರುವ ಶರ್ಮಿತಾಗೆ ಪ್ರತಿದಿನ ಊಟಕ್ಕೆ ನಾನ್ ವೆಜ್ ಇರಬೇಕಂತೆ. ನಿತ್ಯ ಸಿಹಿಯನ್ನು ಕೂಡ ಸೇವಿಸುತ್ತಾರಂತೆ. ಕಟ್ಟು ನಿಟ್ಟಾಗಿ ಡಯಟ್ ಮಾಡದಿದ್ದರೂ, ತಿಂದಿದ್ದಕ್ಕೆ ತಕ್ಕಂತೆ ವರ್ಕೌಟ್ ಮಾಡಿ ಕ್ಯಾಲೊರಿ ಕರಗಿಸಿಕೊಳ್ಳುತ್ತಾರಂತೆ.

'ಜಾನಕಿ ರಾಘವ' ಧಾರಾವಾಹಿ ಮೂಲಕ ನಟನೆಗೆ ಬಂದ ಶರ್ಮಿತಾ, ನಂತರ 'ಮನೆಯೇ ಮಂತ್ರಾಲಯ', 'ನೀಲಾ, ಯಾರಿವಳು', 'ಗೀತಾ ಸೀರಿಯಲ್'ಗಳಲ್ಲಿ ನಟಿಸಿದ್ದಾರೆ. ಇನ್ನು ಸಿನಿಮಾಗಳಲ್ಲೂ ನಟಿಸಿರುವ ಇವರು, 'ಫ್ಯಾಮಿಲಿ ಪ್ಯಾಕ್', 'ಆಮ್ಲೆಟ್', 'ಸೀತಾಯಣ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಮತ್ತಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುವ ಆಸೆ ಇರುವ ಶರ್ಮಿತಾ ಖಳಾನಾಯಕಿ ಅಲ್ಲದೇ, ಶರ್ಮಿತಾ ವೈವಿಧ್ಯಮಯ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ.
ಆನ್ ಸ್ಕ್ರೀನ್ ಗೂ ಆಫ್ ಸ್ಕ್ರೀನ್‌ಗೂ ಬೇರೆಯದ್ದೇ ವ್ಯಕ್ತಿತ್ವವಿರುವ ಶರ್ಮಿತಾಗೆ ತಮ್ಮ ಪಾತ್ರ ನೋಡಿ ಹೀಗೂ ಜಗಳವಾಡುವ ಜನರಿದ್ದಾರಾ ಎನಿಸುತ್ತದಂತೆ. ಶರ್ಮಿತಾ ಸಿಟ್ಟು, ಜಗಳಗಳಿಂದ ತುಂಬಾ ದೂರ ಇದ್ದಾರಂತೆ. ಶರ್ಮಿತಾಗೆ ಈಗಾಗಲೇ ಮದುವೆಯಾಗಿದ್ದು, ಇವರ ಪತಿ ಉದ್ಯಮಿಯಾಗಿದ್ದಾರೆ. ಶರ್ಮಿತಾ ನಟನೆಗೆ ಅವರ ಪತಿ ಸಪೋರ್ಟ್ ಮಾಡುತ್ತಿದ್ದು, ಇವರಿಗೆ ಒಂದು ಗಂಡು ಮಗುವಿದೆ.
Recommended Video



Click it and Unblock the Notifications











