ಬರೋಬ್ಬರಿ ನಾಲ್ಕು ವರ್ಷಗಳ ಪಯಣದ ಬಳಿಕ 'ಗೀತಾ' ಸೀರಿಯಲ್‌ಗೆ ತೆರೆ; ನಾಯಕ ಹೇಳಿದ್ದೇನು?

By ಅನಿತಾ ಬನಾರಿ

ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೀತಾ' ಧಾರಾವಾಹಿ ಕಿರುತರೆ ಪ್ರೇಕ್ಷಕರ ಮನ ಗೆದ್ದಿತ್ತು. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಹೆಚ್ಚುಕಮ್ಮಿ 1107 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿದ ಹೆಗ್ಗಳಿಕೆಯ ಧಾರಾವಾಹಿ. ಹೀಗಿರುವಾಗ ಧಾರಾವಾಹಿಯು ಇದೀಗ ಮುಕ್ತಾಯಗೊಂಡಿದ್ದು ಹಲವು ಪ್ರೇಕ್ಷಕರು ಹಾಗೂ ಅಭಿಮಾನಿಗಳಿಗೆ ಬೇಸರ ತಂದಿದೆ. ಆದರೂ, ಧಾರಾವಾಹಿಯ ಕಥೆಗೆ ಒಂದೊಳ್ಳೆ ಕೊನೆಯನ್ನು ಕೊಟ್ಟಿರುವ ನಿರ್ದೇಶಕರ ಬಗ್ಗೆ ಖುಷಿಯೂ ಇದೆ.

ಕಳೆದ ವಾರವಷ್ಟೇ 'ಗೀತಾ' ಧಾರಾವಾಹಿಯು ತನ್ನ ಪಯಣವನ್ನು ನಿಲ್ಲಿಸಿದೆ. ಧಾರಾವಾಹಿಯಲ್ಲಿ ನಾಯಕ ವಿಜಯ್ ಆಗಿ ನಟಿಸಿರುವ ಧನುಷ್ ಗೌಡ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಧಾರಾವಾಹಿಯ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ. ಆ ಮೂಲಕ ತಮ್ಮ ನಾಲ್ಕು ವರ್ಷದ ಸುದೀರ್ಘ ಪಯಣದ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

Geetha serial has ended after a successful journey of four years

"ಗೀತಾ ಧಾರಾವಾಹಿ ಮುಕ್ತಾಯಗೊಂಡಿದೆ. ಇದು ನನ್ನ ಮೊದಲ ಪ್ರಾಜೆಕ್ಟ್. ನನ್ನ ನಟನೆಯ ಬಗ್ಗೆ ನಂಬಿಕೆ ಇಟ್ಟು ಈ ಅವಕಾಶವನ್ನು ಕಲ್ಪಿಸಿಕೊಟ್ಟ ಧಾರವಾಹಿ ನಿರ್ದೇಶಕ ರಾಮ್ ಜಿ ಅವರಿಗೆ ತುಂಬು ಹೃದಯದ ಧನ್ಯವಾದಗಳು ಹೇಳುತ್ತೇನೆ. ಅಂತೆಯೇ ಕಲರ್ಸ್ ಕನ್ನಡ ವಾಹಿನಿಗೂ ನಾನು ಸದಾ ಋಣಿ. ಈ ಧಾರಾವಾಹಿಯಲ್ಲಿ ನನ್ನ ಪ್ರತಿ ಹೆಜ್ಜೆಯಲ್ಲೂ ಜೊತೆಗಿದ್ದ ಎಲ್ಲಾ ಸಹನಟರಿಗೂ ಹಾಗೂ ಇತರೆ ಕಲಾವಿದರಿಗೂ ಹಾಗೂ ಎಲ್ಲಾ ಮಿತ್ರರಿಗೂ ಈ ಮೂಲಕ ಪ್ರೀತಿಯ ಧನ್ಯವಾದಗಳು ತಿಳಿಸುತ್ತೇನೆ" ಎಂದು ಭಾವಪೂರ್ವ ವಂದನೆ ಸಲ್ಲಿಸಿದ್ದಾರೆ.

ಅಂದ ಹಾಗೆ 2020ರಲ್ಲಿ ಆರಂಭವಾದ 'ಗೀತಾ' ಧಾರಾವಾಹಿ ಬಹಳಷ್ಟು ಟ್ವಿಸ್ಟ್ ಗಳೊಂದಿಗೆ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸಿತ್ತು. ಮಾತ್ರವಲ್ಲ ಹಲವಾರು ಸಂಭ್ರಮಗಳೊಂದಿಗೆ ಪ್ರೇಕ್ಷಕರನ್ನು ಸತತ ನಾಲ್ಕು ವರ್ಷಗಳ ಕಾಲ ಮನೋರಂಜಿಸಿದ ಹೆಗ್ಗಳಿಕೆ ಗೀತಾ ಧಾರಾವಾಹಿಯದು.

Geetha serial has ended after a successful journey of four years

ಇಂತಹ ಜನಪ್ರಿಯ 'ಗೀತಾ' ಧಾರಾವಾಹಿ ಈಗ ಮುಕ್ತಾಯಗೊಂಡಿದೆ. ಹೂ ಮಾರುವ ಹುಡುಗಿ ಗೀತಾ ಹಾಗೂ ಮಂತ್ರಿಯ ಮಗ ವಿಜಯ್ ಅವರ ನಡುವಿನ ಜಗಳದೊಂದಿಗೆ ಆರಂಭವಾದ ಈ ಧಾರಾವಾಹಿ ಕಥೆ ಕೊನೆಗೂ ಶುಭ ಅಂತ್ಯ ಕಂಡಿದೆ. ಇನ್ನು ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿದ್ದ ಧನುಷ್ ಗೌಡ ಇಂಜಿನಿಯರಿಂಗ್ ಪದವೀಧರ.

ಮೊದಲಿನಿಂದಲೂ ನಟನಾಗಬೇಕು ಎಂಬ ಕನಸು ಕಂಡಿದ್ದ ಈತ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾಗೆ ಸೇರಿದರು. ಅಲ್ಲಿ ನಟನೆಯ ರೀತಿ ನೀತಿಗಳನ್ನು ಕಲಿತ ಧನುಷ್ ವಿಜಯ್ ಆಗಿ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ವಿಜಯ್ ಆಗಿ ನಟಿಸುವಲ್ಲಿ ಯಶಸ್ವಿಯಾಗಿರುವ ಧನುಷ್ ಗೌಡ ಅನುಬಂಧ ಅವಾರ್ಡ್ಸ್‌ನಲ್ಲಿ "ಮನೆ ಮೆಚ್ಚಿದ ಅಳಿಯ" ಪ್ರಶಸ್ತಿ ಪಡೆದಿರುವ ಹ್ಯಾಂಡ್ ಸಮ್ ಹುಡುಗ. ಧನುಷ್ ಅವರು ಮುಂದೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾರಾ ಅಲ್ಲ ಹಿರಿತೆರೆಯಲ್ಲಿ ಮೋಡಿ ಮಾಡುತ್ತಾರಾ ಎಂದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.

More from Filmibeat

English summary
Do you know what Vijay actor Dhanush Gowda said about Geeta serial that ended
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X