ಕಿರುತೆರೆಯಲ್ಲಿ 'ಚಮಕ್' ಕೊಡಲು ಬರ್ತಿದ್ದಾರೆ ಗೋಲ್ಡನ್ ಸ್ಟಾರ್
Recommended Video

100 ದಿನ ಮುಗಿಸಿ ಈಗ ಕಿರುತೆರೆಗೆ ಕಾಲಿಡ್ತು ಚಮಕ್ ಸಿನಿಮಾ..!! | Filmibeat Kannada
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಚಮಕ್' ಮತ್ತೆ ಬರ್ತಿದೆ. ಮತ್ತೆ ಬರ್ತಿದೆ ಅಂದ್ರೆ ಬೆಳ್ಳಿತೆರೆಯಲ್ಲಲ್ಲ. ನಿಮ್ಮ ಮನೆಯ ಟಿವಿಯಲ್ಲಿ.
ಹೌದು, ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ 'ಚಮಕ್' ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಸಾರವಾಗ್ತಿದೆ.

ಸದ್ಯ ಪ್ರೋಮೋ ಮಾತ್ರ ಪ್ರಸಾರವಾಗ್ತಿದ್ದು, ಸದ್ಯದಲ್ಲೇ ಸಿನಿಮಾ ಮೂಡಿಬರಲಿದೆ. ಆದ್ರೆ, ದಿನಾಂಕ ಹಾಗೂ ಸಮಯ ಇನ್ನು ನಿಗದಿಯಾಗಿಲ್ಲ. ಡಿಸೆಂಬರ್ 29 ರಂದು ಬಿಡುಗಡೆಯಾಗಿದ್ದ 'ಚಮಕ್' ಶತದಿನೋತ್ಸವ ಆಚರಿಸಿಕೊಂಡಿತ್ತು.
ಸಿಂಪಲ್ ಸುನಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಪತಿ-ಪತ್ನಿಯಾಗಿ ಕಾಣಿಸಿಕೊಂಡಿದ್ದರು. ಇನ್ನುಳಿದಂತೆ ಜುಡಾ ಸ್ಯಾಂಡಿ ಸಂಗೀತ ನೀಡಿದ್ದು, ಸಾಧು ಕೋಕಿಲಾ, ಗೌರೀಶ್ ಶಿವಣ್ಣ, ಸಮಿತ್ರ, ರಘುರಾಮ್ ಸೇರಿದಂಮತೆ ಹಲವರು ಅಭಿನಯಿಸಿದ್ದರು.
More from Filmibeat
English summary
Get ready to watch blockbuster hit Chamak starring Golden Star Ganesh & the gorgeous Rashmika Mandanna. Coming up very soon only on Star Suvarna.


Click it and Unblock the Notifications











