ಗುಡ್ ನ್ಯೂಸ್ ಕೊಟ್ಟ ಗಿಚ್ಚಿ ಗಿಲಿಗಿಲಿಯ ಹಾಸ್ಯ ನಟ ರಾಘವೇಂದ್ರ ಅಲಿಯಾಸ್ ರಾಗಿಣಿ

By ಅನಿತಾ ಬನಾರಿ

ಹಾಸ್ಯ ನಟ ರಾಘವೇಂದ್ರ ಯಾರಿಗೆ ಗೊತ್ತಪ್ಪ ಅಂತ ಕೇಳುವ ಬದಲು 'ಗಿಚ್ಚಿ ಗಿಲಿ ಗಿಲಿ' ರಾಗಿಣಿ ಯಾರಿಗೆ ಗೊತ್ತು ಎಂದು ಕೇಳಿದರೆ ಕಿರುತೆರೆ ವೀಕ್ಷಕರು ಬೇಗ ಗುರುತಿಸಬಹುದು. 'ಮಜಾ ಭಾರತ' ಎಂಬ ರಿಯಾಲಿಟಿ ಶೋ ಮೂಲಕ ತಮ್ಮ ನಟನ ಸಾಮರ್ಥ್ಯವನ್ನು ಕರುನಾಡಿಗೆ ನಟ ರಾಘವೇಂದ್ರ ಪರಿಚಯಸಿದರು. ನಂತರ 'ಗಿಚ್ಚಿ ಗಿಲಿಗಿಲಿ' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಜನಪ್ರಿಯತೆ ಗಿಟ್ಟಿಸಿಕೊಂಡರು. ಹಾಸ್ಯ ನಟನಾಗಿ ಪ್ರತಿ ವೇದಿಕೆಯಲ್ಲಿ ಜನರನ್ನು ನಗಿಸುವ ಇವರು, ತಮ್ಮ ಸ್ತ್ರೀ ಪಾತ್ರಕ್ಕೆ ಸಖತ್ ಫೇಮಸ್.

ಅದರಲ್ಲೂ 'ಗಿಚ್ಚಿ ಗಿಲಿಗಿಲಿ' ಸೀಸನ್ ಒಂದು ಹಾಗೂ ಎರಡರಲ್ಲಿ ಬಹಳಷ್ಟು ಪಾಪ್ಯುಲಾರಿಟಿ ಪಡೆದಿರುವ ರಾಘವೇಂದ್ರ ನಾನಾ ರೀತಿಯ ಸ್ತ್ರೀ ಪಾತ್ರಗಳನ್ನು ತೊಟ್ಟು ಜನರ ಮನ ಗೆದ್ದರು. ಅಷ್ಟೇ ಅಲ್ಲದೆ ತಮ್ಮ ಇನ್‌ಸ್ಟಾಗ್ರಾಂನಲ್ಲಿಯೂ ಹಲವಾರು ರೀತಿಯ ಹಾಸ್ಯಾಸ್ಪದ ವಿಡಿಯೋಗಳನ್ನು ಮಾಡುವ ಮೂಲಕ ತಮ್ಮ ಫಾಲೋವರ್ಸ್ ಹಾಗೂ ಅಭಿಮಾನಿಗಳನ್ನು ಸದಾ ರಂಜಿಸುತ್ತಿರುತ್ತಾರೆ ನಟ ರಾಘವೇಂದ್ರ. ಮಜಾಭಾರತದಲ್ಲಿ ಇವರ ರಾಗಿಣಿ ಪಾತ್ರ ಅದೆಷ್ಟು ಫೇಮಸ್ ಆಯಿತು ಎಂದರೆ ಇವರಿಗೆ ರಾಗಿಣಿ ಎಂದೇ ಹೆಚ್ಚಿನ ಜನ ಗುರುತಿಸುವಂತಾಗಿದೆ.

Gicchi Gili Gili Comedy show Raghavendra alias Ragini gave good news

ಇತ್ತೀಚೆಗಷ್ಟೇ ಒಂದು ಕುಕಿಂಗ್ ಶೋನಲ್ಲಿ ಕಾಣಿಸಿಕೊಂಡ ಇವರು ಇನ್‌ಸ್ಟಾಗ್ರಾಂ ಕ್ವೀನ್ ರೇಷ್ಮಾ ಆಂಟಿ ಅವರೊಂದಿಗೆ ಫುಲ್ ಕಾಮಿಡಿ ಮಾಡಿ ವೈರಲ್ ಆದರು. ಇಷ್ಟೆಲ್ಲ ಆದರೂ 'ಗಿಚ್ಚಿ ಗಿಲಿ ಗಿಲಿ' ಸೀಸನ್ ಮೂರರಲ್ಲಿ ನಟ ರಾಘವೇಂದ್ರ ಅವರು ಕಾಣಿಸಿಕೊಳ್ಳಲಿಲ್ಲ. ಈ ಬಗ್ಗೆ ಅವರ ಅಭಿಮಾನಿಗಳಂತೂ ಬಹಳ ಬೇಸರ ವ್ಯಕ್ತಪಡಿಸಿದ್ದರು.

'ಗಿಚ್ಚಿ ಗಿಲಿಗಿಲಿ' ಸೀಸನ್ 3 ಆರಂಭವಾದರೂ ನಟ ರಾಘವೇಂದ್ರ ಅಲಿಯಾಸ್ ರಾಗಿಣಿ ಅವರು ಎಲ್ಲೂ ಕಾಣಿಸಿಕೊಳ್ಳದನ್ನು ಕಂಡವರ ಅಭಿಮಾನಿಗಳು ಅವರ ಇನ್‌ಸ್ಟಾಗ್ರಾಂ ಅಕೌಂಟಿನಲ್ಲಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಗುಡ್ ನ್ಯೂಸ್ ಕೊಟ್ಟಿರುವ ರಾಗಿಣಿ ಉರ್ಫ್ ರಾಘವೇಂದ್ರ ಅವರು 'ಗಿಚ್ಚಿ ಗಿಲಿಗಿಲಿ' ಸೀಸನ್ ಮೂರಕ್ಕೆ ಆಗಮಿಸಿದ್ದಾರೆ.

Gicchi Gili Gili Comedy show Raghavendra alias Ragini gave good news

ಈ ಬಗ್ಗೆ ಈಗಂತೂ ಸಖತ್ ಖುಷಿಯಾಗಿರುವ ಇವರ ಅಭಿಮಾನಿಗಳು ಹಾಗೂ ಫಾಲೋವರ್ಸ್, ಗಿಚ್ಚಿ ಗಿಲಿ ಗಿಲಿ ಸೀಸನ್ ಮೂರರಲ್ಲಿ ನಟ ರಾಘವೇಂದ್ರ ಅವರ ಆಗಮನವನ್ನು ಖುಷಿಯಿಂದ ಸಂಭ್ರಮಿಸಿದ್ದಾರೆ‌‌.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋನಲ್ಲಿ ನಟಿ ಶ್ರುತಿ, ನಟ ಕೋಮಲ್ ಹಾಗೂ ಹಿರಿಯ ಹಾಸ್ಯ ನಟ ಸಾಧುಕೋಕಿಲ ಅವರು ಜಡ್ಜ್ ಆಗಿದ್ದಾರೆ. ಇದೀಗ ಈ ಶೋನಲ್ಲಿ ಜನರನ್ನು ರಂಜಿಸಲು ರಾಘವೇಂದ್ರ ಅವರು ಸೇರಿಕೊಂಡಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ನಿರೂಪಕ ನಿರಂಜನ್ ದೇಶಪಾಂಡೆ ಅವರು 'ಗಿಚ್ಚಿ ಗಿಲಿ ಗಿಲಿ' ಸೀಸನ್ ಮೂರು ಶೋ ನಿರೂಪಿಸುತ್ತಿದ್ದಾರೆ.

More from Filmibeat

English summary
Raghavendra, who returned to television after small gap. He will entertain as Ragini.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X