Jhanvi: ಕುದುರೆ ಜೊತೆ ಗಿಚ್ಚಿ ಗಿಲಿಗಿಲಿ ಜಾಹ್ನವಿ ಫೋಟೋಶೂಟ್, ಗುಳಿ ಕೆನ್ನೆ ಚೆಲುವೆಗೆ ಫಿದಾ ಆದ ನೆಟ್ಟಿಗರು
ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಿಂದ ಬಹಳ ಫೇಮಸ್ ಆದ ನಟಿ ಜಾಹ್ನವಿ. ಜಾಹ್ನವಿ ಮೊಟ್ಟ ಮೊದಲ ಬಾರಿಗೆ ನಮ್ಮಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ಕಾಣಿಸಿಕೊಂಡ ಬಳಿಕ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಯಿತು. ಆ ಬಳಿಕ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ರನ್ನರ್‌ರಪ್ ಸ್ಥಾನವನ್ನು ಪಡೆದುಕೊಂಡರು. ಜೀವನದಲ್ಲಿ ಯಾರ ಸಹಾಯವೂ ಇಲ್ಲದೆ ಒಂಟಿಯಾಗಿ ಜೀವನ ನಡೆಸಬಹುದು ಎಂದು ತೋರಿಸಿಕೊಟ್ಟಿದ್ದು ಜಾಹ್ನವಿ.
ಎಲ್ಲರ ಜೀವನದಲ್ಲೂ ಏಳು ಬೀಳುಗಳು ಸಹಜ ಹಾಗೆಯೇ ಜಾಹ್ನವಿ ಜೀವನದಲ್ಲಿ ಬಹಳ ದೊಡ್ಡ ಘಟನೆ ನಡೆದೆ ಹೋಯಿತು. ಇದಾದ ಬಳಿಕ ಮತ್ತೆ ಜೀವನ ಕಟ್ಟಿಕೊಳ್ಳುತ್ತಿರುವ ಜಾಹ್ನವಿ ಸಾಕಷ್ಟು ಫೋಟೋಶೂಟ್‌ಗಳನ್ನ ಮಾಡಿಸಿಕೊಂಡಿದ್ದಾರೆ.. ಈ ಬಾರಿ ಕುದುರೆಯ ಜೊತೆ ಫೋಟೋ ಶೂಟ್ ಮಾಡಿಸಿಕೊಂಡು ನೋಡುಗರಿಗೆ ಮಾತ್ರ ಅದ್ಭುತವಾಗಿ ಕಾಣಿಸಿದ್ದಾರೆ.

ಜಾಹ್ನವಿ ಕಾರ್ತಿಕ್ ವೈಟ್ ಹಾರ್ಸ್ ಜೊತೆ ವೈಟ್ ಡ್ರೆಸ್ನಲ್ಲಿ ಸಖತ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.. ಇದನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಜಾಹ್ನವಿ ನೋಟದಲ್ಲಿ ಬಹಳ ಸುಂದರಿ. ಆಕೆಯ ಮಾತಿನ ಮೋಡಿಗೆ ಹಲವಾರು ಜನ ಅಭಿಮಾನಿಗಳು ಆಗಿದ್ದಾರೆ. ಈ ನಟಿ ಎಲ್ಲರ ಮನ ಗೆದ್ದಿದ್ದಾರೆ.
ಬಿಳಿ ಬಣ್ಣದ ಬಟ್ಟೆ ತೊಟ್ಟ ಜಾಹ್ನವಿ
ಜಾಹ್ನವಿ ಇದೀಗ ಬಿಳಿ ಬಣ್ಣದ ಡ್ರೆಸ್ ಧರಿಸಿಕೊಂಡು ಬಹಳ ಸುಂದರವಾಗಿ ಹಸಿರಿನ ಮಧ್ಯೆ ಬಂಡೆಯೊಂದರ ಮೇಲೆ ಕುಳಿತಿದ್ದು ನೋಡಲು ಬಹಳ ಕ್ಯೂಟ್ ಆಗಿ ಕಾಣಿಸಿದ್ದಾರೆ. ವೈಟ್ & ಬ್ಲ್ಯಾಕ್ ನೇಲ್ ಪಾಲಿಶ್ ಹಚ್ಚಿದ್ದ ನಟಿ ಕ್ಯಾಮೆರಾ ಸ್ಮೈಲ್ ಕೊಟ್ಟಿದ್ದಾರೆ. ಸಿಂಗಲ್ ಶೋಲ್ಡರ್ ಡ್ರೆಸ್ನಲ್ಲಿ ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದು ಇವರ ನಗುವಿಗೆ ಹಲವಾರು ಜನ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಜಾಹ್ನವಿ ಫೋಟೋ ನೋಡಿದ ಅಭಿಮಾನಿಗಳು ಕ್ಲೀನ್ ಬೋಲ್ಡ್
ಜಾಹ್ನವಿ ಫೋಟೋ ನೋಡಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಜಾಹ್ನವಿ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಜೊತೆ ನಟನೆ ಮಾಡಲು ರೆಡಿ ಆಗಿದ್ದಾರೆ. ಸಿನಿಮಾಗೆ ಈಗಾಗಲೇ ಟೈಟಲ್ ಇಡಲಾಗಿದೆ. ಅಧಿಪತ್ರ ಎನ್ನುವ ಸಿನಿಮಾದಲ್ಲಿ ಜಾಹ್ನವಿ ಕಾಣಿಸಿಕೊಳ್ಳಲಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿರುವ ನಟಿ
ರೂಪೇಶ್ ಬರ್ತ್ಡೇ ಪ್ರಯುಕ್ತ ಸಿನಿಮಾದ ಟೈಟಲ್ ರಿವೀಲ್ ಮಾಡಲಾಗಿದೆ. ಇದೀಗ ಜಾಹ್ನವಿ ರೂಪೇಶ್‌ಗೆ ಜೋಡಿ ಆಗಿ ನಟನೆ ಮಾಡುತ್ತಿದ್ದಾರೆ. ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಚಯನ್ ಶೆಟ್ಟಿ ಎಂಬುವರು ಅಧಿಪತ್ರ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.. ಇನ್ನೂ ಜಾಹ್ನವಿ ಅಧಿಪತ್ರ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.


Click it and Unblock the Notifications











