Reels Reshma; ರೀಲ್ಸ್ ರೇಷ್ಮಾ ಆಂಟಿ ಬೀದಿಲಿ ನಿಂತು ಜಗಳ ಆಡಿದ್ದೇಕೆ ಗೊತ್ತಾ?
ರೀಲ್ಸ್ ರೇಷ್ಮಾ ಯಾರಿಗೆ ಗೊತ್ತಿಲ್ಲ ಹೇಳಿ. ಅದರಲ್ಲೂ ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ದಿನಕ್ಕೆ ಒಮ್ಮೆಯಾದರೂ ಇವರ ಮುಖ ಕಂಡಿರುತ್ತದೆ. ರೇಷ್ಮಾ ಅವರ ರೀಲ್ಸ್ ಅನ್ನು ಪದೇ ಪದೇ ನೋಡುವವರು ಇದ್ದಾರೆ. ಇತ್ತೀಚೆಗಂತು ಫುಲ್ ಮಾಡ್ರನ್ ಆಗಿ ಬಿಟ್ಟಿದ್ದಾರೆ. ಯುವತಿಯರು ನಾಚುವಂತ ಬಟ್ಟೆಗಳನ್ನ ಹಾಕಿಕೊಂಡು ರೀಲ್ಸ್ ಮಾಡುತ್ತಾರೆ. ಡ್ಯಾನ್ಸ್ ಬರಲಿ, ಬರದೆ ಇರಲಿ ಒಳ್ಳೆ ಸ್ಟೆಪ್ ಹಾಕುವ ಪ್ರಯತ್ನ ಮಾಡ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ರೇಷ್ಮಾ ಆಂಟಿ ಅಂತಾನೇ ಫೇಮಸ್. ಅವರಿಗೆ ನವೀನ್ ಎಂಬ ಯುವಕ ಬೇರೆ ಜೊತೆಯಾಗಿದ್ದಾರೆ. ಇಬ್ಬರು ಸೇರಿ ದಿನಕ್ಕೆ ಹಲವು ರೀಲ್ಸ್ ಶೇರ್ ಮಾಡ್ತಾ ಇರ್ತಾರೆ. ಕೆಲವರು ನೋಡಿ ಎಂಜಾಯ್ ಮಾಡಿದ್ರೆ, ಇನ್ನು ಕೆಲವರು ಏನ್ರೋ ಇವರ ಕಥೆ ಅಂದ್ಕೊಂಡು ಮುಂದಕ್ಕೆ ಹೋಗ್ತಾ ಇದಾರೆ. ರೀಲ್ಸ್‌ನಲ್ಲಿ ಕಿಚ್ಚು ಹೆಚ್ಚಿಸಿದ್ದ ರೇಷ್ಮಾ ಆಂಟಿ ಇದೀಗ ಬೀದಿಲಿ ನಿಂತು ಜಗಳ ಆಡ್ತಾ ಇದಾರೆ.

ಟ್ರೋಲರ್ಸ್‌ಗಂತು ಭರ್ಜರಿ ಭೋಜನ
ರೇಷ್ಮಾ ಹಾಗೂ ನವೀನ್ ಪ್ರತಿ ರೀಲ್ಸ್ ಹಾಕುತ್ತಾ ಇರುತ್ತಾರೆ. ರೀಲ್ಸ್ ಅಂದ್ರೆ ಸಾಮಾನ್ಯವಾಗಿ ಅವರವರಿಗೆ ಸ್ವಲ್ಪ ಹೊಂದಾಣಿಕೆಯೂ ಆಗುತ್ತದೆ. ಆದರೆ ಇವರಿಬ್ಬರು ಮಾಡುವ ರೀಲ್ಸ್ ಗಳಿಂದ ಕಣ್ಣು ತಪ್ಪಾಗೋದಲ್ಲ, ಇರುವ ನೀರು ಬತ್ತಿ ಹೋಗಬೇಕು. ಅಷ್ಟೊಳ್ಳೆ ಅದ್ಭುತವಾದ ರೀಲ್ಸ್ ಗಳನ್ನ ಮಾಡ್ತಾ ಇರ್ತಾರೆ. ಹೀಗಾಗಿ ಸಹಜವಾಗಿಯೇ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಈ ಕಣ್ಣಲ್ಲಿ ಇನ್ನು ಏನೇನೆಲ್ಲಾ ನೋಡ್ಬೇಕಪ್ಪ, ನಾವೇ ಬೆಳೆಸಿದ್ದು, ನಾವೇ ನೋಡಬೇಕು ಅಂತೆಲ್ಲಾ ಟ್ರೋಲ್ ಮಾಡ್ತಾ ಇರುತ್ತಾರೆ.
ಬೀದಿಲಿ ನಿಂತು ಜಗಳ
ಹಿಂಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ರೇಷ್ಮಾ ಅವರ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ಮೊದ್ಲು ನ್ಯಾಯವಾಗಿ ಮಾತಾಡಬೇಕು. ಅವಳು ಬೇಕು ಅಂದ್ರೆ ಬೇಕು ಬೇಕು ಅಂದ್ರೆ ಅನ್ನೋದಷ್ಟೇ ರೇಷ್ಮಾ ಮಾತು ಕೇಳಿಸ್ತಾ ಇದೆ. ರೇಷ್ಮಾ ಈ ರೀತಿ ಜಗಳ ಆಡುವಾಗ ಅದೇ ಜಾಗದಲ್ಲಿ ನವೀನ್ ಕೂಡ ಇದ್ದಾರೆ. ರೇಷ್ಮಾ ಜಗಳ ಆಡುವುದಕ್ಕೆ ಹೋದಾಗ ತಡೆಯುವ ಪ್ರಯತ್ನ ಮಾಡಿದ್ದಾರೆ ನವೀನ್.
ಕಮೆಂಟ್ ಬಾಕ್ಸ್‌ನಲ್ಲಿ ಬೆಂಬಲ
ಈ ವಿಡಿಯೋ ನಿಧಾನವಾಗಿ ಗಮನ ಹರಿಸಿದರೆ ಯಾರದ್ದೋ ಸಂಸಾರದ ನ್ಯಾಯ ತೀರ್ಮಾನ ಮಾಡಲು ಹೋದಂತೆ ಕಾಣಿಸುತ್ತಿದೆ. ಕಮೆಂಟ್ ಬಾಕ್ಸ್‌ನಲ್ಲಿಯೂ ಒಂದಷ್ಟು ಕಮೆಂಟ್ಸ್ ಬಂದಿವೆ. ನಿಮ್ಮ ಸಂಸಾರವೇ ಸರಿ ಇಲ್ಲ.. ಬೇರೆ ಸಂಸಾರದವರ ಬಗ್ಗೆ ನ್ಯಾಯ ಪಂಚಾಯ್ತಿ ಮಾಡಲು ಹೊರಟಿದ್ದಾರೆ ಎಂಬ ಕಮೆಂಟ್ಸ್ ಬಂದಿದೆ. ಜೊತೆಗೆ ಇನ್ನು ಹಲವರು ರೇಷ್ಮಾ ಪರವಾಗಿಯೂ ಮಾತನಾಡಿದ್ದಾರೆ.
ಗಿಚ್ಚಿಗಿಲಿಗಿಲಿಯಿಂದ ಫೇಮಸ್
ರೇಷ್ಮಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದರು. ಬಳಿಕ ಇವರನ್ನ ಗುರುತಿಸಿ ಕಲರ್ಸ್ ಕನ್ನಡದ ಗಿಚ್ಚಿ ಗಿಲಿಗಿಲಿ ಸೀಸನ್- 3ಕ್ಕೆ ಕರೆಸಲಾಗಿತ್ತು. ಆಮೇಲೆ ರೇಷ್ಮಾ ರೀತಿಯೇ ಬದಲಾಗಿ ಹೋಯ್ತು. ನವೀನ್ ಸಿಕ್ಕ ಮೇಲಂತು ರೊಮ್ಯಾಂಟಿಕ್ ರೀಲ್ಸ್‌ಗಳೇ ಹೆಚ್ಚು ಬರುವುದಕ್ಕೆ ಶುರುವಾಯ್ತು. ಕಲರ್ಸ್ ಕನ್ನಡದಲ್ಲಿ ಅರಳಿದ ಪ್ರತಿಭೆ. ಎಲ್ಲರ ಅಚ್ಚು ಮೆಚ್ಚಿನ ರೇಷ್ಮಾ ಆಂಟಿಯಾಗಿ ಬೆಳೆಯುತ್ತಿದ್ದಾರೆ. ಯಾರೂ ಏನೇ ಹೇಳಲಿ ನನ್ನ ಪಾಡು ನನ್ನದು ಎಂಬಂತೆ ವಿಡಿಯೋ ಮಾಡಿಕೊಂಡು ಲೈಫ್ ಲೀಡ್ ಮಾಡ್ತಾ ಇದಾರೆ.


Click it and Unblock the Notifications











