Priyanka Kamath: ಕಟು ಸತ್ಯ ಬಿಚ್ಚಿಟ್ಟ ಪ್ರಿಯಾಂಕಾ ಕಾಮತ್ ಬಾಲಿಯಲ್ಲಿ ಏನ್ ಮಾಡುತ್ತಿದ್ದಾರೆ..?
ಕನ್ನಡ ಕಿರುತೆರೆಯ ಜನಪ್ರಿಯ ಕಾಮಿಡಿ ಶೋ ಮಜಾಭಾರತದ ಸ್ಪರ್ಧಿಯಾಗಿ ಕರ್ನಾಟಕದಾದ್ಯಂತ ಪಿಕೆ ಆಗಿ ಮನೆ ಮಾತಾಗಿರುವ ಪ್ರಿಯಾಂಕಾ ಕಾಮತ್ ಕೂಡಾ ಸಿಹಿ ಸುದ್ದಿ ನೀಡಿದ್ದಾರೆ. ಈ ವರ್ಷದ ಆರಂಭದಲ್ಲಿ ತಮ್ಮ ಬಹುಕಾಲದ ಗೆಳೆಯ ಅಮಿತ್ ನಾಯಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಶೀಘ್ರದಲ್ಲಿ ಹಸೆಮಣೆ ಏರಲಿದ್ದಾರೆ. ಜೊತೆಗೆ ನಿಶ್ಚಿತಾರ್ಥದ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಪ್ರಿಯಾಂಕಾ ಕಾಮತ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆ. ಆಕಸ್ಮಿಕವಾಗಿ ಸಿಕ್ಕಿದ ಅವಕಾಶದಿಂದ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡ ಆಕೆ ಕೇವಲ ಕಡಿಮೆ ಅವಧಿಯಲ್ಲಿಯೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಹೊಚ್ಚ ಹೊಸ ರಿಯಾಲಿಟಿ ಶೋ ಚಾಂಪಿಯನ್ ಆಡಿಶನ್‌ಗೆ ಪ್ರಿಯಾಂಕಾ ಕಾಮತ್ ಹೋಗಿದ್ದರು. ಮೊದಲ ಆಡಿಶನ್‌ನಲ್ಲಿಯೇ ಆಯ್ಕೆಯಾದ ಪಿಕೆ ಫೈನಲ್ ರೌಂಡ್‌ಗೂ ಸೆಲೆಕ್ಟ್ ಆಗಿದ್ದರು. ಪರೀಕ್ಷೆಯ ಸಮಯವಾದ ಕಾರಣ ಕೊನೆಯ ಸುತ್ತಿನ ಆಡಿಶನ್‌ನಲ್ಲಿ ಪ್ರಿಯಾಂಕಾಗೆ ಭಾಗವಹಿಸಲಾಗಲಿಲ್ಲ. ಪರೀಕ್ಷೆ ಇರುವ ಕಾರಣ ಭಾಗವಹಿಸಲು ಕಷ್ಟ ಎಂದು ತಿಳಿಸಿದ್ದರು. ಆದರೆ ಪರೀಕ್ಷೆ ಮುಗಿದ ನಂತರ ಆಡಿಶನ್‌ನಲ್ಲಿ ಭಾಗವಹಿಸಿ ಎಂದು ವಾಹಿನಿಯವರು ಹೇಳಿದರು. ಪರೀಕ್ಷೆ ನಂತರ ಚಾಂಪಿಯನ್ ಶೋ ಸ್ಪರ್ಧಿಯಾಗಿ ಕಾಣಿಸಿಕೊಂಡ ಪ್ರಿಯಾಂಕಾ ಮೂರು ತಿಂಗಳ ಕಾಲ ವೀಕ್ಷಕರನ್ನು ರಂಜಿಸಿದರು.
ಸಿನಿಮಾದಲ್ಲೂ ನಟನೆ
ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾಭಾರತದಲ್ಲಿ ಭಾಗವಹಿಸುವ ಅವಕಾಶ ದೊರಕಿತು. ಮಜಾಭಾರತದ 4 ಸೀಸನ್‌ಗಳಲ್ಲಿಯೂ ಸ್ಪರ್ಧಿಯಾಗಿ ಕಾಣಿಸಿಕೊಂಡು ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದರು. ಪ್ರಿಯಾಂಕಾ ಕಾಮತ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗಿಚ್ಚಿ ಗಿಲಿಗಿಲಿ' ಕಾರ್ಯಕ್ರಮದಲ್ಲಿಯೂ ಭಾಗವಹಿಸುವ ಅವಕಾಶವನ್ನು ಪಡೆದುಕೊಂಡರು. ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಸಿಂಗ' ಸಿನಿಮಾದಲ್ಲಿ ಅದಿತಿ ಪ್ರಭುದೇವ ಗೆಳತಿಯಾಗಿ ಪ್ರಿಯಾಂಕಾ ಬಣ್ಣ ಹಚ್ಚಿದ್ದಾರೆ.

ಕಟು ಸತ್ಯ ಹೇಳಿದ ಹಾಸ್ಯ ನಟಿ
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸಂಡೇ ಬಜಾರ್‌ನ ನಿರೂಪಕಿಯಾಗಿ ಕಾಣಿಸಿಕೊಂಡಿರುವ ಪ್ರಿಯಾಂಕಾ ಕಾಮತ್ ಆಲಿಯಾಸ್ ಪಿಕೆ ಮುಂದೆ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾಸ್ಯೋತ್ಸವ ಕಾರ್ಯಕ್ರಮದ ನಿರೂಪಕಿಯಾಗಿಯೂ ಮಿಂಚಿದ ಪ್ರತಿಭೆ. ನಿಶ್ಚಿತಾರ್ಥ ಮಾಡಿಕೊಂಡ ಮೇಲೆ ಕೆಲ ಕಾಲ ಪ್ರಿಯಾಂಕಾ ಅವರು ಸೋಶಿಯಲ್ ಮೀಡಿಯಾದಿಂದಲೂ ದೂರ ಉಳಿದಿದ್ದರು. ಆದರೆ ಯಾಕೆ ಎಂಬ ಕಾರಣ ಯಾರಿಗೂ ಗೊತ್ತಿರಲಿಲ್ಲ. ಆದರೆ, ಇದೀಗ ಕಟು ಸತ್ಯವೊಂದನ್ನು ಪ್ರಿಯಾಂಕಾ ಕಾಮತ್ ಅವರು ಹೇಳಿದ್ದಾರೆ.
ಪ್ರಿಯಾಂಕಾ ಕೈ ಬಿಡದ ಅಮಿತ್
ಅಮಿತ್ ಜೊತೆಗೆ ಮದುವೆಯಾಗುವ ಸಂಭ್ರಮದಲ್ಲಿದ್ದ ಪ್ರಿಯಾಂಕಾ ಬಾಳಲ್ಲಿ ಕಹಿ ಘಟನೆಯೊಂದು ನಡೆದು ಹೋಯ್ತು. ಇದ್ದಕ್ಕಿದ್ದ ಹಾಗೆಯೇ ಕೂರಲು ಆಗದೇ ಎರಡು ಮೇಜರ್ ಸರ್ಜರಿ ಮಾಡಿಸಿಕೊಂಡರು. ಇದರಿಂದ ಪ್ರಿಯಾಂಕಾ ಅವರು 50% ಮಾತ್ರ ಬದುಕುವ ಚಾನ್ಸ್ ಇತ್ತು. ಅವರ ದೇಹಕ್ಕೆ ಸ್ಕ್ರೂ ಮತ್ತು ರಾಡ್ಸ್ ಹಾಕಬೇಕಾಯ್ತು.
ಜೋಡಿ ಬಾಲಿ ಪ್ರವಾಸ
ಪ್ರಿಯಾಂಕಾ ಅವರು ಅಮಿತ್ ಅವರಿಗೆ ಬೇರೆ ಮದುವೆಯಾಗುವಂತೆ ಹೇಳಿದರಂತೆ. ಆದರೆ, ಅಮಿತ್ ಅವರು ಇಲ್ಲವೇ ಇಲ್ಲ ಎಂದು ಹೇಳಿ, ಪ್ರಿಯಾಂಕರನ್ನು ಕೈ ಬಿಡಲಿಲ್ಲವಂತೆ. ಎಂಟು ತಿಂಗಳ ಕಾಲ ಅಮಿತ್ ಅವರು ಡ್ರೆಸ್ ಹಾಕಿಕೊಳ್ಳೋದರಿಂದ ಹಿಡಿದು, ಡೈಪರ್ ಪ್ಯಾಡ್ ಬದಲಾಯಿಸಲು ಸಹಾಯ ಮಾಡಿದ್ದಾರಂತೆ. ಇನ್ನು ಇದೀಗ ಇಬ್ಬರೂ ಬಾಲಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಈ ಜೋಡಿಗೆ ಶುಭ ಹಾರೈಸೋಣ.


Click it and Unblock the Notifications











