Yashaswini Deshpande: ಐಶ್ವರ್ಯಾ ರೈ ಹಾಕಿದ್ದ ಮೂಗುತ್ತಿಯನ್ನೇ ತಗೊಂಡಿದ್ದ ಯಶಸ್ವಿನಿ; ಚಿನ್ನ ಹಾಕೋಕೆ ಭಯ ಪಡೋದೇಕೆ?
ಯಶಸ್ವಿನಿ ದೇಶಪಾಂಡೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸೋಷಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ನಿರೂಪಕ ನಿರಂಜನ್ ದೇಶಪಾಂಡೆ ಹಾಗೂ ಯಶಸ್ವಿನಿ ದೇಶಪಾಂಡೆ ವಿಭಿನ್ನ ಕಂಟೆಂಟ್ ಹಾಕುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಕಲರ್ಸ್ ಕನ್ನಡದ 'ಗಿಚ್ಚಿಗಿಲಿಗಿಲಿ' ಮೂಲಕ ಫೇಮಸ್ ಆಗಿದ್ದವರು ಯಶಸ್ವಿನಿ.
ಯಶಸ್ವಿನಿ ಭರತನಾಟ್ಯ ಕಲಾವಿದೆ ಕೂಡ. ನಿರಂಜನ್ ಜೊತೆಗೆ ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆ ಎಂದರೆ ಎಲ್ಲರಿಗೂ ಸಾಮಾನ್ಯವಾಗಿ ಒಂದು ಕನಸಿರುತ್ತದೆ. ಇದೇ ಥರ ರೆಡಿಯಾಗಬೇಕು, ಇದೇ ಥರ ಕಾಣಬೇಕು, ಇದೇ ಥರದ ಜ್ಯುವೆಲ್ಲರಿಗಳನ್ನು ತೆಗೆದುಕೊಳ್ಳಬೇಕು ಅಂತ. ತಾವಿಷ್ಟಪಟ್ಟ ಹಾಗೇ ಜ್ಯುವೆಲ್ಲರಿ, ಸೀರೆಗಳನ್ನು ಸೆಲೆಕ್ಟ್ ಮಾಡುವ ಹೆಣ್ಣು ಮಕ್ಕಳು ಆದಷ್ಟು ಬಾಡಿಗೆಗೆ ಪಡೆಯಲು ಹೋಗ್ತಾರೆ.

ಯಶಸ್ವಿನಿ ತಮ್ಮ ಡ್ರೀಮ್ ಮ್ಯಾರೇಜ್ ಬಳಿಕ, ಎಲ್ಲ ವಸ್ತುವನ್ನೇ ತಮ್ಮಲ್ಲೇ ಉಳಿಯುವಂತೆ ಖರೀದಿಸಿದ್ದಾರೆ. ತಮ್ಮಲ್ಲಿರುವ ಜ್ಯುವೆಲ್ಲರಿಯನ್ನು ಪರಿಚಯಿಸಿದ್ದಾರೆ. ಅದನ್ನ ನೋಡ್ತಾ ಇದ್ರೆ ಖಂಡಿತ ಒಂದು ಅಂಗಡಿಯನ್ನೇ ಇಡಬಹುದು. ಆದರೆ ಚಿನ್ನ ಹಾಕುವುದಕ್ಕೆ ಭಯ ಪಡ್ತಾರೆ ಆಕೆ.
ಬಾಸಿಂಗ ಕೂಡ ಡಿಫ್ರೆಂಟ್
ಮದುವೆ ಬಗ್ಗೆ ಎಲ್ಲರಿಗೂ ಒಂದು ಕನಸಿರುತ್ತೆ. ಅದೇ ಥರ ಯಶಸ್ವಿನಿಗೂ ಕೂಡ. ತಮ್ಮ ಮದುವೆ ಎಲ್ಲಾ ಶಾಸ್ತ್ರಕ್ಕೂ ವಿಭಿನ್ನವಾದ ಜ್ಯುವೆಲ್ಲರಿಯನ್ನೇ ಖರೀದಿಸಿದ್ದಾರೆ. ಅದರಲ್ಲೂ ಮದುವೆಯಲ್ಲಿ ಮುಖ್ಯವಾಗಿ ಬೈತಲೆ ಬೊಟ್ಟು, ಮೂಗುತ್ತಿ, ಬಾಸಿಂಗವೇ ನವವಧುವಿನ ಕಳೆ ಹೆಚ್ಚಿಸುವುದು. ಅದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ. ಜೋಧಾ ಅಕ್ಬರ್ ಸಿನಿಮಾ ನೋಡಿ ಬೈತಲೆ ಬೊಟ್ಟು ತಗೊಂಡ್ರೆ, ಐಶ್ವರ್ಯಾ ರೈ ಹಾಕಿದ್ದಂತ ಮೂಗುತ್ತಿಯೇ ಬೇಕು ಅಂತ ಹುಡುಕಿ ತರಿಸಿದ್ದಾರೆ. ಹಾಗೇ ಥರ್ಮಕೋಲ್ ಬಾಸಿಂಗ ಬಿಟ್ಟು ಗೋಲ್ಡ್ ಮಿಕ್ಸ್ ಬಾಸಿಂಗವನ್ನೇ ತಂದಿದ್ದಾರೆ.
ಅಬ್ಬಬ್ಬಾ ಎಂಥೆಂಥಾ ಕಲೆಕ್ಷನ್ಸ್
ಇನ್ನು ಯಶಸ್ವಿನಿ ಬಳಿ ಇರುವ ಜ್ಯುವೆಲ್ಲರಿಗಳನ್ನು ಒಮ್ಮೆ ನೋಡಿದರೆ ಕಳೆದೋಗುವುದು ಗ್ಯಾರಂಟಿ. ಬಳೆಗಳನ್ನೇ ನಾಲ್ಕು ಬಾಕ್ಸ್ ಇಟ್ಟಿದ್ದಾರೆ. ಓಲೆಗಳಿಗೆ ಬ್ಲೇಜರ್ ಇರುವ ರೀತಿ ದೊಡ್ಡ ಜಾಕೆಟ್‌ನಲ್ಲಿ ಬರೀ ಓಲೆಗಳೇ ಇದ್ದಾವೆ. ಇನ್ನು ಸರಗಳ ಕಲೆಕ್ಷನ್ ಕೇಳೋದೆ ಬೇಡ. ದೊಡ್ಡ ದೊಡ್ಡ ಸರಗಳು, ಸಣ್ಣ ಪುಟ್ಟ ಸರಗಳನ್ನೆಲ್ಲ ಬಹಳ ಬೇಗ ಕೈಗೆ ಸಿಗುವಂತೆ ಇಟ್ಟಿದ್ದಾರೆ. ಅದರಲ್ಲೂ ವೆಂಕಟೇಶ್ವರ ಡಾಲರ್ ಇರುವ ಸರ ಎಲ್ಲರನ್ನು ಆಕರ್ಷಿಸಿದೆ.

SSLC ಬಳೆಯನ್ನು ಇಟ್ಟಿದ್ದಾರೆ
ಹೆಣ್ಣು ಮಕ್ಕಳು ಸ್ವಲ್ಪ ಭಾವನಾ ಜೀವಿಗಳು. ವಸ್ತುಗಳ ಮೇಲೂ ಭಾವನೆಗಲಕನ್ನು ಬೆಳೆಸಿಕೊಂಡು ಬಿಡುತ್ತಾರೆ. ಇದೀಗ ಯಶಸ್ವಿನಿ ಕೂಡ ಹಾಗೇ. ತಮ್ಮ ಎಸ್ಎಸ್ಎಲ್ಸಿಯಲ್ಲಿ ಹಾಕಿದ್ದ ಒಂದು ಖಡವನ್ನು ಈಗಲೂ ಇಟ್ಟಿದ್ದಾರೆ. ಬ್ಲೂ ಕಲರ್ ಸೀರೆಗೆ ಹಾಕಿದ್ದ ಖಡ ಅದು. ಹೀಗೆ ತಮಗೆ ಇಷ್ಟವಾಗಿದ್ದನ್ನು ಉಳಿಸಿಕೊಂಡಿದ್ದಾರೆ. ತಮ್ಮ ಮೇಮೋರೀಸ್ ಗಿಫ್ಟ್‌ಗಳನ್ನ ಹೀಗೆ ಉಳಿಸಬೇಕು ಎಂದು ನೆಟ್ಟಿಗರು ಹೊಗಳಿದ್ದಾರೆ.
ಮನೆ ಕಿಟಕಿ ತೆಗೆಯಲು ಭಯ.!
ಶಾಲಾ ಕಾಲೇಜು ದಿನಗಳಲ್ಲಿ ಬರೀ ಚಿನ್ನವನ್ನೇ ಹಾಕುತ್ತಿದ್ದ ಯಶಸ್ವಿನಿಗೆ ಈಗ ಚಿನ್ನ ಎಂದರೂ ಭಯ, ಮನೆಯಲ್ಲಿ ಕಿಟಕಿ ಓಪನ್ ಇದ್ದರು ಭಯ. ಅದರ ಹಿಂದೊಂದು ಶಾಕಿಂಗ್ ಎಕ್ಸ್ಪೀರಿಯನ್ಸ್ ಇದೆ. ಅವರೇ ಹೇಳಿದ್ದಾರೆ ಓದಿ. 'ಸ್ಕೂಲ್ ಡೇಸ್‌ನಲ್ಲಿ ಬರೀ ಚಿನ್ನ ಹಾಕುತ್ತಿದ್ದೆ. ಎಲ್ಲಾ ಬೆರಳುಗಳಲ್ಲೂ ಚಿನ್ನದುಂಗುರಗಳೇ. ಆದರೆ ಒಮ್ಮೆ ಮನೆಯ ವಾಶ್ ರೂಮ್ ಹೋದಾಗ ಕಿಟಕಿಯಿಂದ ಒಬ್ಬ ಕುತ್ತಿಗೆಗೆ ಕೈ ಹಾಕಿ ಚೈನ್ ಕಿತ್ತುಕೊಳ್ಳುವುದಕ್ಕೆ ಪ್ರಯತ್ನ ಪಟ್ಟಿದ್ದ.
ಏನದು ಮರೆಯಾಗದ ಘಟನೆ?
ಅವತ್ತು ನನ್ನ ಕೂದಲು ಫ್ರೀ ಬಿಟ್ಟಿದ್ದಕ್ಕೆ ಆತನ ಕೈಗೆ ಚೈನ್ ಸಿಕ್ಕಿಲ್ಲ. ಭಯಕ್ಕೆ ಮಾತೇ ಬಂದಿರಲಿಲ್ಲ. ತಕ್ಷಣ ಕಳ್ಳ ಕಳ್ಳ ಅಂತ ಕಿರುಚಿದೆ. ಭಯಕ್ಕೆ ಅವನು ಎಸ್ಕೇಪ್ ಆಗಿದ್ದ. ಅಂದಿನಿಂದ ಕಿಟಕಿ ಓಪನ್ ಮಾಡುವುದಕ್ಕೇನೆ ಭಯ ಆಗುತ್ತೆ. ಹೀಗಾಗಿ ಇತ್ತೀಚೆಗೆ ಆರ್ಟಿಫಿಷಿಯಲ್ ಜಾಸ್ತಿ ಹಾಕ್ತೀನಿ. ಒನ್ ಗ್ರಾಂ ಗೋಲ್ಡ್ ಜ್ಯುವೆಲ್ಲರಿ ನೋಡುವುದಕ್ಕೂ ಚೆನ್ನಾಗಿರುತ್ತೆ' ಎಂದಿದ್ದಾರೆ.


Click it and Unblock the Notifications











