BBK 12: ಗಿಲ್ಲಿ ವಿಚಾರಕ್ಕೆ ಅಶ್ವಿನಿ- ಕಾವ್ಯ ನಡುವೆ ವಾಗ್ಯುದ್ಧ; ಗಿಲ್ಲಿ 'ಕೆಂಪೇಗೌಡ' ಲುಕ್‌ ನೋಡಿದ್ರಾ?

ಬಿಗ್‌ಬಾಸ್ ಕನ್ನಡ ಸೀಸನ್ 12 ಇದೀಗ ಮತ್ತೊಂದು ವೀಕೆಂಡ್‌ಗೆ ಹತ್ತಿರವಾಗ್ತಿದೆ. ಈಗಾಗಲೇ 20 ದಿನಗಳನ್ನು ಪೂರೈಸಿ ಕಾರ್ಯಕ್ರಮ ಮುಂದುವರೆಯುತ್ತಿದೆ. ಮನೆ ಮಂದಿ ನಡುವೆ ಕಿರಿಕ್, ತಮಾಷೆ ಎಲ್ಲವೂ ಬಹಳ ಸದ್ದು ಮಾಡ್ತಿದೆ. ಗಿಲ್ಲಿ ನಟ ಅಂತೂ ತಮ್ಮ ಕಾಮಿಡಿ ಟೈಮಿಂಗ್‌ನಿಂದ ಗಮನ ಸೆಳೆಯುತ್ತಿದ್ದಾರೆ.

ಈ ಬಾರಿ ಬಿಗ್‌ಬಾಸ್ ಮನೆಯ ನಿಜವಾದ ಎಂಟರ್‌ಟೈನರ್ ಅಂದರೆ ಅದು ಗಿಲ್ಲಿ ನಟ. ಕಾಮಿಡಿ ಮಾತ್ರವಲ್ಲ ತಮ್ಮ ಪ್ರಾಸಭರಿತ ಡೈಲಾಗ್‌ಗಳಿಂದ ಇತೆರೆ ಸ್ಪರ್ಧಿಗಳಿಗೆ ಟಾಂಗ್ ಕೊಡುತ್ತಿದ್ದಾರೆ. ಮುಖ್ಯವಾಗಿ ರಕ್ಷಿತಾಳನ್ನು ಟಾರ್ಗೆಟ್ ಮಾಡಿದ್ದ ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ ಗಿಲ್ಲಿ ಮಾತಿನ ಚಾಟಿ ಬೀಸುತ್ತಿದ್ದಾರೆ. ನಟಿ ಕಾವ್ಯಾ ಶೈವ ಜೊತೆ ಗಿಲ್ಲಿ ಜಂಟಿಯಾಗಿ ದೊಡ್ಮನೆ ಪ್ರವೇಶಿಸಿದ್ದರು. ಆದರೆ ಈಗ ಏಕಾಂಗಿಯಾಗಿ ಆಟ ಆಡುತ್ತಿದ್ದಾರೆ.

Gilli Becomes the Heart of Bigg Boss Kannada Season 12 Comedy Clashes and Viral Moments

ಗಿಲ್ಲಿ ಹಾಗೂ ಕಾವ್ಯ ನಡುವೆ ಆತ್ಮೀಯ ಒಡನಾಟವಿದೆ. ಸಿಕ್ಕಾಪಟ್ಟೆ ಕ್ಲೋಸ್ ಫ್ರೆಂಡ್ಸ್ ಆಗಿಬಿಟ್ಟಿದ್ದಾರೆ. ಇಬ್ಬರ ಮಾತು ಹರಟೆ ನಾನಾ ಚರ್ಚೆಗೆ ಕಾರಣವಾಗಿದೆ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಚರ್ಚೆ ಆಗ್ತಿದೆ. ಗಿಲ್ಲಿಗೆ ಈಗಾಗಲೇ ಕಾವ್ಯ ರಾಕಿ ಕೂಡ ಕಟ್ಟಿಬಿಟ್ಟಿದ್ದಾರೆ. ಈಗ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಯೊಳಗೆ ಹೋಗಿರುವ ರಿಷಾ ಸುತ್ತಾ ಗಿಲ್ಲಿ ಸುತ್ತುತ್ತಿದ್ದಾರೆ. ಇಬ್ಬರ ನಡುವೆ ರಿಷಾ ಎಂಟ್ರಿ ಗಮನ ಸೆಳೆಯುತ್ತಿದೆ. ಇದೀಗ ಗಿಲ್ಲಿ ವಿಚಾರಕ್ಕೆ ಅಶ್ವಿನಿ ಜೊತೆ ಕಾವ್ಯ ಕಿರಿಕ್ ಮಾಡಿಕೊಂಡಿದ್ದಾರೆ.

ಕೆಲಸ ಮಾಡುವ ವಿಚಾರಕ್ಕೆ ಗಿಲ್ಲಿ ಜೊತೆ ಅಶ್ವಿನಿ ಕ್ಯಾತೆ ತೆಗೆದಿದ್ದಾರೆ. ಇದು ಕಾವ್ಯ ಕೋಪಕ್ಕೆ ಕಾರಣವಾಗಿರುವಂತೆ ಕಾಣ್ತಿದೆ. "ಗಿಲ್ಲಿಗೆ ಬಕೆಟ್ ಹಿಡಿ" ಎಂದು ಕಾವ್ಯಾಗೆ ಅಶ್ವಿನಿ ಹೇಳಿರುವುದು ಮನೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಮಾಡಿದೆ. ಯಾರು ಬಕೆಟ್ ಅಂತ ಕಾವ್ಯಾ ವಾಗ್ಯುದ್ಧಕ್ಕೆ ಇಳಿದಿದ್ದಾರೆ. ಅಶ್ವಿನಿ ಹಾಗೂ ಕಾವ್ಯಾ ಒಬ್ಬರ ಮೇಲೊಬ್ಬರು ಬೊಟ್ಟು ಮಾಡಿ ತೋರಿಸುತ್ತಾ ಕಿರುಚಾಡಿದ್ದಾರೆ.

ಇನ್ನು ಕಾವ್ಯಾ ಆಗಾಗ್ಗೆ ಗಿಲ್ಲಿಯನ್ನು ಕೆಣಕುವ ಪ್ರಯತ್ನ ಮಾಡುತ್ತಿರುತ್ತಾರೆ. ಇತ್ತೀಚೆಗೆ ನೀನು 'ಕೆಂಪೇಗೌಡ' ಚಿತ್ರದಲ್ಲಿ ಸುದೀಪ್ ಸರ್ ತಡ ಮೀಸಿ ಬಿಟ್ಟು ಗಡ್ಡ ಶೇವ್ ಮಾಡಬೇಕು ಎಂದು ಗಿಲ್ಲಿಗೆ ಕಾವ್ಯಾ ಹೇಳಿದ್ದರು. ಅದಕ್ಕೆ ಗಿಲ್ಲಿ ಒಪ್ಪಲಿಲ್ಲ. ಗಡ್ಡ ತೆಗೆದರೆ ಅಷ್ಟು ಸುಲಭವಾಗಿ ಬರಲ್ಲ ಎಂದಿದ್ದರು. ಬೇಗ ಬರುತ್ತದೆ ಎಂದು ಕಾವ್ಯ ಹೇಳಿದಾಗ ವೀಕೆಂಡ್‌ಗೆ ಬರೋಕೆ ಅದು ವೈಲ್ಡ್ ಕಾರ್ಡ್ ಎಂಟ್ರಿನಾ ಎಂದು ಗಿಲ್ಲಿ ಹೇಳಿದ್ದು ವೈರಲ್ ಆಗಿತ್ತು.

ಸದ್ಯ ಕಾವ್ಯಾ ಹೇಳಿದಂತೆ ಗಿಲ್ಲಿ ಗಡ್ಡ ಟ್ರಿಮ್ ಮಾಡಿಕೊಂಡು 'ಕೆಂಪೇಗೌಡ' ಚಿತ್ರದಲ್ಲಿ ಸುದೀಪ್ ಕಾಣಿಸಿಕೊಂಡಂತೆ ಗಿರಿಜಾ ಮೀಸೆ ಲುಕ್‌ನಲ್ಲಿ ದರ್ಶನ ಕೊಡುವ ಪ್ರಯತ್ನ ಮಾಡಿದ್ದಾರೆ. ಹಾಸ್ಯ ನಟ ಚಂದ್ರಪ್ರಭ ಟ್ರಿಮ್ಮರ್‌ನಿಂದ ಗಿಲ್ಲಿ ಗಡ್ಡ ಟ್ರಿಮ್ ಮಾಡಿದ್ದಾರೆ. ಆದರೆ ಕೆಂಪೇಗೌಡ ಸುದೀಪ್ ಬದಲು ಬೇರೆಯದ್ದೇ ಅವತಾರದಲ್ಲಿ ಗಿಲ್ಲಿ ಕಾಣುತ್ತಿದ್ದಾರೆ. ಕೆಂಪೇಗೌಡ ಆಗಲು ಹೋಗಿ ಬೇರೇನೋ ಆಗಿಬಿಟ್ಟಿದ್ದಾರೆ ಎಂದು ವೀಕ್ಷಕರು ಕಾಮೆಂಟ್ ಮಾಡ್ತಿದ್ದಾರೆ.

ಒಟ್ಟಾರೆ ಗಿಲ್ಲಿ ಮನೆಮಂದಿಯನ್ನು ರಂಜಿಸುವುದು ಮಾತ್ರವಲ್ಲ ವೀಕ್ಷಕರಿಗೂ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ಈ ಬಾರಿ ಗಿಲ್ಲಿ ಬಿಗ್‌ಬಾಸ್ ಶೋ ಗೆಲ್ಲಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಗಿಲ್ಲಿ ಕಾಮಿಡಿ ವೀಡಿಯೋ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹಾಸ್ಯ ನಟ ಚಂದ್ರಪ್ರಭ ಕೂಡ ಕಿರುತೆರೆ ಕಾರ್ಯಕ್ರಮಗಳಲ್ಲಿ ತಮ್ಮ ಕಾಮಿಡಿ ಮೂಲಕ ಮೋಡಿ ಮಾಡುತ್ತಿದ್ದರು. ಆದರೆ ಬಿಗ್‌ಬಾಸ್ ಮನೆಯಲ್ಲಿ ಯಾಕೋ ಮಂಕಾಗಿದ್ದಾರೆ.

More from Filmibeat

Read more about: bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X