BBK12: ಸಿಕ್ಕಾಪಟ್ಟೆ ಕ್ರೇಜ್; ಗಿಲ್ಲಿ ಗೆದ್ರೆ ಫ್ರೀ ಆಟೋ ಪ್ರಯಾಣ, ಫ್ರೀ ಬಿರಿಯಾನಿ ಎಂದ ಫ್ಯಾನ್ಸ್

ಈ ಬಾರಿ ಗಿಲ್ಲಿ ನಟ ಬಿಗ್‌ಬಾಸ್ ಟ್ರೋಫಿ ಗೆಲ್ಲಬೇಕು ಎನ್ನುವುದು ಅಭಿಮಾನಿಗಳ ಆಸೆ ಆಗಿದೆ. ಗಿಲ್ಲಿ ಗೆದ್ರೆ ಟ್ರೋಫಿ ಪ್ರಯಾಣ ಉಚಿತ, ಕೆಲ ಹೋಟೆಲ್‌ಗಳಲ್ಲಿ ಬಿರಿಯಾನಿ, ಫಿಶ್ ಫ್ರೈ ಉಚಿತ ಎಂದು ಘೋಷಿಸಿದ್ದಾರೆ. ಒಟ್ಟಾರೆ ಎಲ್ಲೆಲ್ಲೂ ಗಿಲ್ಲಿ ಹವಾ ಜೋರಾಗಿದೆ.

ತಮ್ಮ ಮಾತಿನ ಮೂಲಕ ಗಿಲ್ಲಿ ಮೋಡಿ ಮಾಡುತ್ತಾ ಬಂದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಒಳ್ಳೆ ಎಂಟರ್‌ಟೈನರ್ ಅನ್ನಿಸಿಕೊಂಡು ಗಮನ ಸೆಳೆದಿದ್ದಾರೆ. ಇತರೆ ಸ್ಪರ್ಧಿಗಳನ್ನೆಲ್ಲಾ ತಮ್ಮ ಮಾತಿನಿಂದಲೇ ಮಟ್ಟ ಹಾಕಿದ್ದಾರೆ. ದೇಶ ವಿದೇಶಗಳಲ್ಲಿ ಗಿಲ್ಲಿ ನಟನಿಗೆ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಕೆಲವೆಡೆ ಅಭಿಮಾನಿಗಳು ಗಿಲ್ಲಿ ಗೆಲ್ಲಬೇಕು ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

Gilli craze Peaks Ahead of Bigg Boss Kannada 12 Finale Fans Free Rides Biryani Promises Fuel Winning Buzz

ಆಟೋ, ಬೈಕ್‌ಗಳ ಮೇಲೆ ಗಿಲ್ಲಿ ಭಾವಚಿತ್ರಗಳು ರಾರಾಜಿಸುತ್ತಿದೆ. ಒಂದಿಬ್ಬರು ಗಿಲ್ಲಿ ಭಾವಚಿತ್ರವನ್ನು ಟ್ಯಾಟೂ ಹಾಕಿಕೊಂಡಿದ್ದಾರೆ. ಅಷ್ಟರಮಟ್ಟಿಗೆ ಗಿಲ್ಲಿ ದರ್ಬಾರ್ ನಡೀತಿದೆ. ಇನ್ನು ಆಟೋ ಡ್ರೈವರ್‌ಗಳು ಆಟೋ ರ್ಯಾಲಿ ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ಗಿಲ್ಲಿ ಫ್ಯಾನ್ಸ್ ಹಾವಳಿ ಕೇಳುವುದೇ ಬೇಡ. ಇನ್ನು ದಾಖಲೆಯ ಮಟ್ಟದ ವೋಟ್‌ ಮೂಲಕ ಗಿಲ್ಲಿ ನಟನನ್ನು ಗೆಲ್ಲಿಸುವುದಾಗಿ ಅಭಿಮಾನಿಗಳು ಹೇಳುತ್ತಿದ್ದಾರೆ.

ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಮಿಡಿ ಮಾಡುತ್ತಾ ಗಮನ ಸೆಳೆದಿದ್ದ ಗಿಲ್ಲಿ ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಕಾವ್ಯಾ ಜೊತೆ ಜಂಟಿ ಸ್ಪರ್ಧಿಯಾಗಿ ಮನೆ ಒಳಗೆ ಹೋಗಿದ್ದರು. ಬಳಿಕ ತಮ್ಮ ಮಾತಿನ ಮೂಲಕ ರಂಜಿಸಲು ಆರಂಭಿಸಿದ್ದರು. ಪ್ರಬಲ ಸ್ಪರ್ಧಿಗಳೆಲ್ಲಾ ಗಿಲ್ಲಿ ಮುಂದೆ ಮಂಕಾಗಿಬಿಟ್ಟರು. ಸ್ವತಃ ಕಿಚ್ಚ ಸುದೀಪ್, ಗಿಲ್ಲಿ ಆಟವನ್ನು ಮೆಚ್ಚಿಕೊಂಡಿದ್ದಾರೆ. ಫಿಸಿಕಲ್ ಟಾಸ್ಕ್‌ಗಳ ವಿಚಾರದಲ್ಲಿ ಗಿಲ್ಲಿ ಹಿಂದಿ ಬಿದ್ದಿದ್ದಾರೆ. ಆದರೆ ಮಾತಿನ ಮೂಲಕವೇ ಜಾದೂ ಮಾಡುತ್ತಾ ಬರ್ತಿದ್ದಾರೆ.

ಅಶ್ವಿನಿ ಗೌಡ, ರಘು, ಕಾವ್ಯಾ, ರಕ್ಷಿತಾ, ಧನುಷ್ ಜೊತೆ ಗಿಲ್ಲಿ ಇದೀಗ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಶನಿವಾರ ಹಾಗೂ ಭಾನುವಾರ ಫಿನಾಲೆ ಎಪಿಸೋಡ್ ಪ್ರಸಾರ ಆಗುವ ನಿರೀಕ್ಷೆಯಿದೆ. ಧ್ರುವಂತ್ ಮಿಡ್‌ವೀಕ್ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಈ ಬಾರಿ ಗಿಲ್ಲಿ ಟ್ರೋಫಿ ಗೆಲ್ಲುವುದು ಬಹುತೇಕ ಖಚಿತ ಎನ್ನಲಾಗ್ತಿದೆ.

ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಕೂಡ ಗಿಲ್ಲಿಗೆ ವೋಟ್ ಮಾಡುವಂತೆ ಮನವಿ ಮಾಡಿದ್ದರು. ಬೆಂಗಳೂರಿನ ಕೆಲ ಆಟೋ ಡ್ರೈವರ್‌ಗಳು ಗಿಲ್ಲಿಗೆ ಬೆಂಬಲ ಸೂಚಿಸಿದ್ದಾರೆ. ಗಿಲ್ಲಿ ಈ ಬಾರಿ ಟ್ರೋಫಿ ಗೆಲ್ಲುವುದು ಬಹುತೇಕ ಖಚಿತ. ಒಂದು ವೇಳೆ ಗೆದ್ದರೆ ಬೆಳಗ್ಗೆ 5 ಗಂಟೆಯಿಂದ ಸಂಜೆ 7 ಗಂಟೆ ವರೆಗೂ ಉಚಿತ ಪ್ರಯಾಣ ಸೇವೆ ಒದಗಿಸುವುದಾಗಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಗಿಲ್ಲಿ ಕ್ರೇಜ್ ರಾಜ್ಯದ ಗಲ್ಲಿ ಗಲ್ಲಿಗೆ ತಲುಪಿದೆ. ಕೆಲವೆಡೆ ಹೋಟೆಲ್ ಮಾಲೀಕರು ಗಿಲ್ಲಿ ಗೆದ್ದರೆ ಬಿರಿಯಾನಿ ಫ್ರೀಯಾಗಿ ಕೊಡ್ತೀವಿ, ಫಿಶ್‌ ಫ್ರೈ ಫ್ರಿಯಾಗಿ ಕೊಡ್ತೀವಿ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮಾಡಿ ಹೇಳುತ್ತಿದ್ದಾರೆ. ಇನ್ನು ಮಂಡ್ಯದ ಕೆಲವೆಡೆ ಅಭಿಮಾನಿಗಳು ಬ್ಯಾನರ್ ಹಾಕಿ ಗಿಲ್ಲಿಗೆ ಶುಭಾಶಯ ಕೋರಿದ್ದಾರೆ.

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್ ಗಿಲ್ಲಿ ಕ್ರೇಜ್ ಅನ್ನು ತಮ್ಮ ಕಂಟೆಂಟ್ ಕ್ರಿಯೇಟ್‌ಗಾಗಿ ಬಳಸಿಕೊಂಡಿದ್ದಾರೆ. ಕಳೆದೆರಡು ವಾರಗಳಿಂದ ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಸೈಲೆಂಟ್ ಆಗಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಗಿಲ್ಲಿ ಹೇಳುತ್ತಿದ್ದಂತೆ ಕಾವ್ಯಾ ಕೂಡ ಫಿನಾಲೆ ತಲುಪಿದ್ದಾರೆ. ಗಿಲ್ಲಿಗೆ ಅಶ್ವಿನಿ ಗೌಡ ಟಫ್ ಕಾಂಪಿಟೇಷನ್ ಕೊಡುತ್ತಿದ್ದಾರೆ. ಅದೆಲ್ಲಾ ಏನೇ ಇದ್ದರೂ ಗೆಲ್ಲೋದು ಗಿಲ್ಲಿ ಎಂದು ಅಭಿಮಾನಿಗಳು ಜೈಕಾರ ಹಾಕುತ್ತಿದ್ದಾರೆ. ನಟ ಶಿವರಾಜ್‌ಕುಮಾರ್ ಕೂಡ ಗಿಲ್ಲಿಗೆ ಬೆಂಬಲ ಸೂಚಿಸಿದ್ದು ಅವನೇ ಗೆಲ್ಲೋದು ಎಂದಿದ್ದಾರೆ.

More from Filmibeat

English summary
As Bigg Boss Kannada 12 reaches its grand finale, Ghilli emerges as the clear fan favourite. From auto rallies and tattoos to free travel, biryani and fish fry promises, the Ghilli craze has taken over Karnataka and beyond.
Read more about: bigg boss gilli bigg boss 12
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X