BBK12: ಕಾವ್ಯಾ ಹೊದಿಕೆ ಎಳೆದ ಗಿಲ್ಲಿ.. ಥೂ.. ಅಸಹ್ಯ ಅನ್ಸಲ್ವಾ? ಎಂದು ಫ್ಯಾನ್ಸ್ ಬೇಸರ

ಯಾವುದೂ ಕೂಡ ಅತಿಯಾಗಬಾರದು. ಕೆಲವೊಮ್ಮೆ ಅದು ಅಸಹ್ಯ ಅನ್ನಿಸಿಬಿಡಬಹುದು. ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ ಕಾವ್ಯಾ ಶೈವ ನಡುವೆ ಒಳ್ಳೆ ಒಡನಾಟ ಇತ್ತು. ಗ್ರ್ಯಾಂಡ್ ಓಪನಿಂಗ್ ಬಳಿಕ ಕೈಗೆ ದಾರ ಕಟ್ಟಿಕೊಂಡು ಜಂಟಿಯಾಗಿ ಇಬ್ಬರೂ ಮನೆ ಒಳಗೆ ಬಂದಿದ್ದರು. ಕೆಲದಿನ ಹೀಗೆ ಇರುವಂತಾಗಿತ್ತು. ದಾರ ತೆಗೆದ ಬಳಿಕ ಕೂಡ ಇಬ್ಬರೂ ಸ್ನೇಹಿತಾಗಿದ್ದರು. ಆದರೆ ಇತ್ತೀಚೆಗೆ ಆ ಒಡನಾಟ ಕಾಣುತ್ತಿಲ್ಲ.

ನಟಿ ಕಾವ್ಯ ಶೈವ ಅವರನ್ನು ಗಿಲ್ಲಿ ಬಹಳ ಹಚ್ಚಿಕೊಂಡಂತೆ ಕಾಣುತ್ತದೆ. ಕಾವು ಕಾವು ಎಂದು ಆಕೆಯ ಹಿಂದೆ ಓಡಾಡುತ್ತಿರುತ್ತಿದ್ದಾರೆ. ಆಕೆಯನ್ನು ಬೆಂಬಲಿಸಿ ಮಾತನಾಡುತ್ತಾರೆ. ಇಬ್ಬರು ಆತ್ಮೀಯತೆ ವೀಕ್ಷಕರಿಗೆ ಕ್ಯೂಟ್ ಕ್ಯೂಟ್ ಎನಿಸುತ್ತದೆ. ಬಿಗ್‌ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳು ಹೊಸದೇನು ಅಲ್ಲ. ಬಿಗ್‌ಬಾಸ್ ಮನೆಯಲ್ಲಿ ಪ್ರೀತಿಸಿ ಹೊರಗಡೆ ಬಂದು ಮದುವೆಯಾದವರು ಇದ್ದಾರೆ. ಕಾವು ಕಾವು ಎಂದು ಗಿಲ್ಲಿ ಹಿಂದೆ ಹೋದರೂ ಇತ್ತೀಚೆಗೆ ಕಾವ್ಯಾ ರೆಸ್ಪಾನ್ಸ್ ಮಾಡ್ತಿಲ್ಲ.

Gilli Kavya Bond Turns Sour in Bigg Boss 12 Fans Urge Gilli to Maintain Distance

ಗಿಲ್ಲಿಗೆ ಕಾವ್ಯ ರಾಖಿ ಕಟ್ಟಿದ್ದು ಆಯ್ತು. ಆದರೆ ಗಿಲ್ಲಿ ಮಾತ್ರ ಐಲವ್ ಯು ಕಾವ್ಯಾ ಎಂದೇ ಓಡಾಡುತ್ತಿದ್ದಾರೆ. ಅಣ್ಣ ಎಂದು ಗಿಲ್ಲಿಯನ್ನು ದೂರ ಇಡಲು ಕಾವ್ಯಾ ಯತ್ನಿಸಿದ್ದು ಇದೆ. ಆದರೆ ಆ ರೀತಿ ಕರೆಯುವುದು ಗಿಲ್ಲಿಗೆ ಇಷ್ಟವಾಗಲ್ಲ. ಆದರೆ ಇತ್ತೀಚೆಗೆ ಕಿಚ್ಚನ ಪಂಚಾಯ್ತಿ ವೇಳೆ ಗಿಲ್ಲಿ ಬಗ್ಗೆ ಕಾವ್ಯಾ ಮಾತನಾಡಿದ್ದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇಷ್ಟೆಲ್ಲಾ ಆದಮೇಲೆ ಕೂಡ ಗಿಲ್ಲಿ ಆಕೆಯ ಹಿಂದೆ ಹೋಗುವುದು ಸರಿಯಲ್ಲ. ಇನ್ನಾದರೂ ಆಕೆಯಿಂದ ದೂರಾಗಿ ಆಟ ಆಡಬೇಕು. ಅಥವಾ ಬೇರೆ ಸ್ನೇಹಿತರನ್ನು ಜೊತೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳುತ್ತಿದ್ದಾರೆ.

ಬಿಗ್‌ಬಾಸ್ ಸೀಸನ್ 12 ವೀಕ್ಷಕರ ಮನ ಗೆದ್ದಿರುವುದು ಗಿಲ್ಲಿ ಕಾರಣಕ್ಕೆ. ಅದರಲ್ಲಿ ಎರಡು ಮಾತಿಲ್ಲ. ತಮ್ಮ ಲವಲವಿಕೆಯ ಆಟ, ಕಾಮಿಡಿ, ಬೇರೆಯವರನ್ನು ಗಿಲ್ಲಿ ರೋಸ್ಟ್ ಮಾಡುವ ಪರಿ ವೀಕ್ಷಕರಿಗೆ ಮಜಾ ಕೊಡ್ತಿದೆ. ಕಿಚ್ಚ ಸುದೀಪ್ ಕೂಡ ಒಂದು ಹಂತದಲ್ಲಿ ಗಿಲ್ಲಿ ಕಾಮಿಡಿಗೆ ಮನಸೋತಿದ್ದಾರೆ. ಆದರೆ ಇಷ್ಟೆಲ್ಲಾ ಪ್ರತಿಭೆ ಇರುವ ಗಿಲ್ಲಿ ಯಾಕೆ ಕಾವ್ಯಾ ಹಿಂದೆ ಹೋಗಬೇಕು ಎನ್ನುವ ಅಭಿಮಾನಿಗಳ ಪ್ರಶ್ನೆ.

ಗಿಲ್ಲಿ ಇಲ್ಲ ಅಂದ್ರೆ ಕಾವ್ಯಾ ಇಲ್ಲ, ಗಿಲ್ಲಿ ಹೊರತುಪಡಿಸಿ ಆಕೆ ಜೀರೊ ಎಂದು ಇತ್ತೀಚೆಗೆ ಎಲಿಮಿನೇಟ್ ಆಗಿ ಹೊರ ಬಂದ ರಿಷಾ ಗೌಡ ಕೂಡ ಹೇಳಿದ್ದರು. ಅದು ನಿಜ ಕೂಡ. ಎಲ್ಲೋ ಒಂದು ಕಡೆ ಈ ಮಾತನ್ನು ಸುಳ್ಳಾಗಿಸಲು ಕಾವ್ಯಾ ಪ್ರಯತ್ನಿಸುತ್ತಿರುವಂತಿದೆ. ಗಿಲ್ಲಿ ಪ್ರಭಾವಳಿಯಿಂದ ಹೊರಬಂದು ತಮ್ಮದೇ ಆಟದಿಂದ ಗಮನ ಸೆಳೆಯುವ ಮುಂದಾಗಿದ್ದಾರೆ. ಹಾಗಾಗಿ ಇನ್ನು ಮುಂದೆ ಗಿಲ್ಲಿ ಆಕೆ ಹಿಂದೆ ಯಾಕೆ ಹೋಗಬೇಕು ಎನ್ನುವುದು ಕೆಲವರ ವಾದ. ಆದರೆ ಇದೆಲ್ಲಾ ಗಿಲ್ಲಿಗೆ ಅರ್ಥವಾದಂತೆ ಕಾಣ್ತಿಲ್ಲ.

ಸುದೀಪ್ ಇತ್ತೀಚೆಗೆ ಪಂಚಾಯ್ತಿ ವೇಳೆ ಮನೆಮಂದಿಗೆ ಒಂದು ಅವಕಾಶ ಕೊಟ್ಟಿದ್ದರು. ಸ್ಪರ್ಧಿಗಳ ಮನೆಮಂದಿಗೆ ಫೋನ್ ಮಾಡಿ ಅವರ ಬಗ್ಗೆ ತಮ್ಮ ಅಭಿಪ್ರಾಯ ಹೇಳಿಕೊಳ್ಳುವಂತೆ ಕೇಳಿದ್ದರು. ಗಿಲ್ಲಿ ಮನೆಗೆ ಕಾವ್ಯಾ ಫೋನ್ ಮಾಡಿದಂತೆ ಮಾತನಾಡಿದ್ದರು. "ಹಲೋ ದೊಡ್ಡಮ್ಮ, ನಿಮ್ಮ ಮಗ ತುಂಬಾ ಟಾರ್ಚರ್‌ ಕೊಡ್ತಿದ್ದಾರೆ, ಹೇಳಿದ ಮಾತು ಕೇಳ್ತಿಲ್ಲ, ಮನೆಯಲ್ಲಿ ಹಂಗೆನಾ, ಅದಿಕ್ಕೆ ಇಲ್ಲಿ ಕಳಿಸಿದ್ದಾರಾ? ನನ್ನ ಹತ್ತಿರ ರಾಖಿ ಕಟ್ಟಿಸಿಕೊಂಡರೂ ಕೂಡ, ದುಡ್ಡು ಕೊಡಲಿಲ್ಲ, ಹೊರಗಡೆ ಬಂದ್ಮೇಲೆ ತಗೊತ್ತೀನಿ. ಹೊರಗಡೆ ಹೆಣ್ಣು ನೋಡ್ತಿದ್ದಾರಾ? ಯಾವ ಥರದ ಹುಡುಗಿ ಬೇಕು? ಎಂದಿದ್ದಾರೆ. ಕೂಡಲೇ ಗಿಲ್ಲಿ "ನಿನ್ನ ತರಹದ ಹುಡುಗಿ ಬೇಕು, ನೀನೇ ಬೇಕು" ಎಂದಿದ್ದರು.

ಇಲ್ಲಿಯವರೆಗೆ ಎಲ್ಲವೂ ತಮಾಷೆಯಾಗಿಯೇ ಇತ್ತು. ಬಳಿಕ ಮಾತು ಮುಂದುವರೆಸಿದ ಕಾವ್ಯಾ "ಏನಂಥ ಬುದ್ಧಿ ಕಲಿಸಿದ್ದಾರಾ? ಹೆಣ್ಣು ಮಗು ಹತ್ತಿರ ಏನು ಮಾತನಾಡಬೇಕು ಗೊತ್ತಿಲ್ಲ? ಹೆಣ್ಣು ಮಕ್ಕಳ ಜೊತೆ ಬೆಳೆದಿಲ್ವಾ ಅವ್ನು? ಅಕ್ಕ ಇದ್ದಾರಾ? ಆದರೂ ಲೈನ್‌ ಕ್ರಾಸ್‌ ಮಾಡಿ ಮಾತಾಡೋದು ಬಿಡೋದೆ ಇಲ್ಲ" ಎಂದಿದ್ದರು. ಇದು ಗಿಲ್ಲಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಇನ್ನಾದರೂ ಗಿಲ್ಲಿ ಆಕೆಯಿಂದ ದೂರ ಇರಬೇಕು ಎನ್ನುತ್ತಿದ್ದಾರೆ.

ಕಿಚ್ಚನ ಪಂಚಾಯ್ತಿ ಮುಗಿದ ಬಳಿಕ ಎಲ್ಲರೂ ಹೋಗಿ ಮಲಗಿದ್ದಾರೆ. ಆಗ ಕಾವ್ಯಾ ಮಲಗಿದ್ದ ಮಂಚದ ಕೊಂಚ ದೂರದಲ್ಲೇ ಗಿಲ್ಲಿ ಮಲಗಿದ್ದು ಕಾವ್ಯಾ ಗುಡ್ ನೈಟ್ ಎಂದಿದ್ದಾರೆ. ಆಕೆ ಪ್ರತಿಕ್ರಿಯಿಸದೇ ಇದ್ದಾದ ಹೊದ್ದಿದ್ದ ಹೊದಿಕೆ ಎಳೆದು ಕಾಟ ಕೊಟ್ಟಿದ್ದಾರೆ. ಈ ಫೋಟೊ ಹಾಕಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. "ಗುರು, ಮಾನ ಮರ್ಯಾದೆ ಇದ್ರೆ ಅವಳನ್ನ ಬಿಡೋ ಮಾರಾಯ..ಥೋ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದು ಅದಕ್ಕೆ ಸಾಕಷ್ಟು ಜನ ಬೆಂಬಲ ಸೂಚಿಸಿದ್ದಾರೆ.

More from Filmibeat

Read more about: bigg boss 12 gilli bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X