ಗಿಲ್ಲಿ ನಟ ಜೊತೆ ಲವ್, ಹನಿಮೂನ್ ಬಗ್ಗೆ ಕಾವ್ಯಾ ಶೈವ ಮಾತು ವೈರಲ್
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ ಕಾವ್ಯಾ ಸ್ನೇಹಿತರಾಗಿ ಇದ್ದಿದ್ದು ಅಭಿಮಾನಿಗಳು ಅವರಿಬ್ಬರು ಮದುವೆ ಆಗಬೇಕು ಎಂದು ಕಾಮೆಂಟ್ ಮಾಡುವುದು ಗೊತ್ತೇಯಿದೆ. ಬಿಗ್‌ಬಾಸ್ ಶೋ ಮುಗಿದರೂ ಸ್ಪರ್ಧಿಗಳ ಕ್ರೇಜ್ ಕಮ್ಮಿ ಆಗಿಲ್ಲ. ಅದರಲ್ಲೂ ಗಿಲ್ಲಿ ಹವಾ ಮುಂದುವರೆಯುತ್ತಲೇ ಇದೆ. ಹೋದಲ್ಲಿ ಬಂದಲ್ಲಿ ತಮ್ಮ ಕಾಮಿಡಿ ಪಂಚ್‌ಗಳ ಮೂಲಕ ಗಿಲ್ಲಿ ಗಮನ ಸೆಳೆಯುತ್ತಲೇ ಇದ್ದಾರೆ.
ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಗಳನ್ನೆಲ್ಲಾ ಒಂದ್ಕಡೆ ಸೇರಿಸಿ 'ದೊಡ್ಮನೆ ಹಬ್ಬ' ಕಾರ್ಯಕ್ರಮ ಚಿತ್ರೀಕರಣ ಮಾಡಿದ್ದಾರೆ. ಇದೇ ಶನಿವಾರ ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿಲ್ಲ. ಈಗಾಗಲೇ ಒಂದೊಂದೇ ಪ್ರೋಮೊ ರಿಲೀಸ್ ಆಗಿ ವೀಕ್ಷಕರ ಮನ ಗೆದ್ದಿದೆ. ಹೊಸ ಪ್ರೋಮೊದಲ್ಲಿ ಗಿಲ್ಲಿ ಹಾಗೂ ಕಾವ್ಯಾ ಸಂಭಾಷಣೆ ವೈರಲ್ ಆಗ್ತಿದೆ.

ಸುಷ್ಮಾ ರಾವ್ ನಿರೂಪಣೆಯಲ್ಲಿ 'ದೊಡ್ಮನೆ ಹಬ್ಬ' ಕಾರ್ಯಕ್ರಮ ಚಿತ್ರೀಕರಣವಾಗಿದೆ. ಗಿಲ್ಲಿ, ಕಾವ್ಯಾ, ಅಶ್ವಿನಿ, ರಕ್ಷಿತಾ, ರಘು, ಧನುಷ್, ಧ್ರುವಂತ್ ಸೇರಿ ಸೀಸನ್ 12ರ ಬಹುತೇಕ ಸ್ಪರ್ಧಿಗಳು ಶೋನಲ್ಲಿ ಭಾಗವಹಿಸಿದ್ದಾರೆ. ಸಾಕಷ್ಟು ಫನ್ನಿ ಗೇಮ್ಸ್ ಆಡಿದ್ದಾರೆ. ತಮಾಷೆ ಮಾಡಿ ಒಬ್ಬರ ಕಾಲು ಮತ್ತೊಬ್ಬರು ಎಳೆದಿದ್ದಾರೆ. ಗಿಲ್ಲಿ ಎಂದಿನಂತೆ ತಮ್ಮ ಕಾಮಿಡಿ ಮೂಲಕ ಮೋಡಿ ಮಾಡಿದ್ದಾರೆ.
ಡಂಬ್ ಚರೇಡ್ಸ್ ಗೇಮ್ ಆಡಿಸಲಾಗಿದೆ. ಕಿವಿಗೆ ಜೋರಾಗಿ ಶಬ್ಧ ಕೇಳುವ ಮ್ಯೂಸಿಕ್ ಹಾಕಿ ಎದುರಿಗೆ ನಿಂತವರು ಹೇಳುವ ವಾಕ್ಯಗಳನ್ನು ಬರೀ ತುಟಿ ಚಲನೆ ನೋಡಿ ಕಂಡು ಹಿಡಿಯುವ ಗೇಮ್ ಆಡಿಸಲಾಗಿದೆ. ಬಳಿಕ ಒಂದು ಪದವನ್ನು ಕೊಟ್ಟು ಅದನ್ನು ನೇರವಾಗಿ ಹೇಳದೇ ಮೊತ್ತೊಂದು ರೀತಿ ಹೇಳಿ ಊಹಿಸುವಂತಹ ಟಾಸ್ಕ್ ಕೊಟ್ಟಿದ್ದಾರೆ. ಗಿಲ್ಲಿಗೆ ಹೇಳುವ ಪದವನ್ನು ಕಾವ್ಯಾ ಗುರ್ತಿಸುವ ಪ್ರಯತ್ನ ಮಾಡಿದ್ದಾರೆ. ಒಬ್ಬರನ್ನು ಒಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದನ್ನು ತಿಳಿಯಲು ಈ ಗೇಮ್ ಎಂದು ಸುಷ್ಮಾ ಹೇಳಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ವೈರಲ್ ಆಗ್ತಿದೆ.
Admin: ಏನು???? ಹನಿಮೂನಾ????
— Colors Kannada (@ColorsKannada) February 12, 2026
ದೊಡ್ಮನೆ ಹಬ್ಬ । ಇದೇ ಶನಿವಾರ ಸಂಜೆ 6#ದೊಡ್ಮನೆಹಬ್ಬ #DoddmaneHabba #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #CKPromo pic.twitter.com/ypP28d9jmk
ಮೊದಲಿಗೆ ಸೂರಜ್ ಹಾಗೂ ರಾಶಿಕಾ ಆಡಿದ್ದಾರೆ. ಪದವನ್ನು ಗುರ್ತಿಸಲು ರಾಶಿಕಾಗೆ ಸೂರಜ್ ಸಹಾಯ ಮಾಡಿದ್ದಾರೆ. ಬಳಿಕ ಗಿಲ್ಲಿ, ಕಾವ್ಯಾ ಸರದಿ ಬಂದಿದೆ. ಹರಿಬೇವು ಸೊಪ್ಪು ಎನ್ನುವುದನ್ನು ಗುರ್ತಿಸಲು "ಕರಿಬಸಪ್ಪ ಅವರನ್ನು ರಕ್ಷಿತಾ ಏನೆಂದು ಕರೀತಾಳೆ?" ಎಂದಿದ್ದಾರೆ. ಅದಕ್ಕೆ ಕಾವ್ಯಾ ಕರಿಬಸಪ್ಪ ಎಂದು ಹೇಳಿ ನಕ್ಕಿದ್ದಾರೆ. ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಕರಿಬಸಪ್ಪ ಎನ್ನುವ ಬದಲು ಕರಿಬಸಪ್ಪು ಎಂದು ರಕ್ಷಿತಾ ಹೇಳಿದ್ದು ವೈರಲ್ ಆಗಿತ್ತು.
ಬಳಿಕ ನಾನು ನಿನ್ನನ್ನು ಏನ್ ಮಾಡ್ತಿದ್ದೀನಿ ಎಂದು ಗಿಲ್ಲಿ ಕೇಳಿದ್ದು "ಲವ್" ಎಂದು ಕಾವ್ಯಾ ಹೇಳಿದ್ದಾರೆ. ನಾನು ನೀನು ಹೋಗೋಣ ಅಂದ್ಕೊಂಡಿದ್ವಲ್ಲ, ಎಂದು ಗಿಲ್ಲಿ ಕೇಳುತ್ತಿದ್ದಂತೆ, "ಹನಿಮೂನ್" ಎಂದು ಕಾವ್ಯಾ ಹೇಳಿರುವುದು ವೈರಲ್ ಆಗ್ತಿದೆ. ಸುಷ್ಮಾ "ಹನಿಮೂನಾ" ಎಂದು ರಾಗ ಎಳೆದಿದ್ದು ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.
ಒಟ್ಟಾರೆ ಬಿಗ್‌ಬಾಸ್ ಶೋ ರೀತಿಯಲ್ಲೇ 'ದೊಡ್ಮನೆ ಹಬ್ಬ' ಕಾರ್ಯಕ್ರಮ ಕೂಡ ಸಾಕಷ್ಟು ಮನರಂಜನೆ ಹೊತ್ತು ಬರ್ತಿದೆ. ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಶನಿವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ಶುರುವಾಗಲಿದೆ. ಭಾನುವಾರ ಕೂಡ ಶೋ ಮುಂದುವರೆಯುವ ಸುಳಿವು ಸಿಕ್ತಿದೆ.
ಬಿಗ್‌ಬಾಸ್ ಮನೆಯಿಂದ ಹೊರ ಬಂದಮೇಲೆ ಗಿಲ್ಲಿ ಬಗ್ಗೆ ಅಶ್ವಿನಿ ಗೌಡ ಕಾಮೆಂಟ್ಸ್ ವೈರಲ್ ಆಗಿತ್ತು. ಆದರೆ ಇಬ್ಬರೂ ಈಗ ಈ ಶೋನಲ್ಲಿ ಒಟ್ಟಿಗೆ ಭಾಗಿ ಆಗಿ ಸಂಭ್ರಮಿಸಿದ್ದಾರೆ. ಬಿಗ್‌ಬಾಸ್ ಶೋ ಮುಗಿದ ಬಳಿಕ ಕಲರ್ಸ್ ಕನ್ನಡ ಕ್ರೇಜ್ ಕಮ್ಮಿ ಆಗಿತ್ತು. 'ದೊಡ್ಮನೆ ಹಬ್ಬ' ಕಾರ್ಯಕ್ರಮಕ್ಕಾಗಿ ಮತ್ತೆ ವೀಕ್ಷಕರು ನೋಡಲು ಮುಗಿಬೀಳ್ತಾರೆ ಎಂದು ಕೆಲವರು ಕಾಮೆಂಟ್ಸ್ ಹಾಕುತ್ತಿದ್ದಾರೆ.


Click it and Unblock the Notifications











