BBK12: ಕ್ಯಾಪ್ಟನ್ ರಘುಗೆ ಗಿಲ್ಲಿ ಫನ್ನಿ ಕ್ವಾಟ್ಲೆ; ನಕ್ಕು ನಕ್ಕು ಮನೆಮಂದಿ ಸುಸ್ತು
ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಕಾಮಿಡಿಗೆ ವೀಕ್ಷಕರು ಬಿದ್ದು ಬಿದ್ದು ನಗುತ್ತಾರೆ. ಸದಾ ಮಾತಲ್ಲೇ ಅವರಿವರ ಕಾಲು ಎಳೆಯುತ್ತಾ ಗಿಲ್ಲಿ ಇಡೀ ಮನೆಯನ್ನು ಲವಲವಿಕೆಯಿಂದ ಇಟ್ಟುಕೊಂಡಿರುತ್ತಾರೆ. ಸದ್ಯ ಮತ್ತೆ ರಘು ಆಗಿ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ.
ಗಿಲ್ಲಿಗೆ ಕ್ಯಾಪ್ಟನ್ ರಘು ಪ್ರೀತಿ ಬೇಕಂತೆ. ಕ್ಯಾಪ್ಟನ್ ಕೊಟ್ಟ ಕೆಲಸಗಳನ್ನು ಮಾಡಲು ಗಿಲ್ಲಿ ಕುಂಟು ನೆಪ ಹುಡುಕುತ್ತಾ ನಾಟಕ ಮಾಡಿ ಗೋಳು ಹುಯ್ದುಕೊಳ್ಳುತ್ತಿದ್ದಾರೆ. ರಘುಗೆ ಏನು ಮಾಡಬೇಕು ಎಂದು ಗೊತ್ತಾಗದಂತಾಗಿದೆ. ಸಾಲದ್ದಕ್ಕೆ ನೀವು ಕ್ಯಾಪ್ಟನ್ ಆದ್ರೆ ನಾನು ವೈಸ್ ಕ್ಯಾಪ್ಟನ್ ಎಂದು ತಮ್ಮನ್ನು ತಾವೇ ವೈಸ್ ಕ್ಯಾಪ್ಟನ್ ಎಂದು ಗಿಲ್ಲಿ ತಮಾಷೆ ಮಾಡುತ್ತಿದ್ದಾರೆ.

ಬಿಗ್‌ಬಾಸ್ 12 ಹೊಸ ಪ್ರೋಮೊದಲ್ಲಿ ರಘು- ಗಿಲ್ಲಿ ಟಾಮ್ ಅಂಡ್ ಜೆರ್ರಿ ಆಟ ಸಖರ್ ಫನ್ ಕ್ರಿಯೇಟ್ ಮಾಡಿದೆ. ಇದು ಮನೆ ಮಂದಿಗೆ ಭರ್ಜರಿ ಮಜಾ ಕೊಡ್ತಿದೆ. ವೀಕ್ಷಕರು ಕೂಡ ಇದನ್ನು ನೋಡಿ ಎಂಜಾಯ್ ಮಾಡುವುದರಲ್ಲಿ ಸಂದೇಹವಿಲ್ಲ. ಕ್ಯಾಪ್ಟನ್ ಇತರೆ ಸ್ಪರ್ಧಿಗಳ ಕೈಯಲ್ಲಿ ಕೆಲಸ ಮಾಡಿಸಬೇಕು. ಯಾರು ಕೂಡ ಬಿಗ್‌ಬಾಸ್ ನಿಯಮ ಮೀರುವಂತಿಲ್ಲ. ಗಿಲ್ಲಿ ರೀತಿ ಈ ಹಿಂದಿನ ಸೀಸನ್‌ಗಳಲ್ಲಿ ಕೂಡ ಕೆಲ ಸ್ಪರ್ಧಿಗಳು ಮೈಗಳ್ಳತನ ತೋರಿ ನಗೆಬುಗ್ಗೆ ಉಕ್ಕಿಸಿದ್ದರು.
ಟೇಬಲ್ ಸೇರಿ ಎಲ್ಲವನ್ನು ಕ್ಲೀನ್ ಮಾಡಬೇಕು ಎಂದು ರಘು ಹೇಳಿದ್ದು ಅದಕ್ಕೆ ಗಿಲ್ಲಿ ಕಳ್ಳಾಟ ಆಡಿ ಕ್ಲಾಟ್ಲೆ ಕೊಟ್ಟಿದ್ದಾರೆ. ರಘು ತಾವೇ ಮುಂದೆ ನಿಂತು ಮನೆ ಗುಡಿಸುವ ಕೆಲಸ ಮಾಡಿಸಿದ್ದಾರೆ. ಪಕ್ಕಕ್ಕೆ ಹೋಗದೇ ಎದೆಮೇಲೆ ಕಾಲಿಟ್ಟು ಹಿಂಸೆ ಕೊಡ್ತಿದ್ದಾನೆ ಎಂದು ಗಿಲ್ಲಿ ಕಾಲೆಳೆದಿದ್ದಾರೆ. ರಿಷಾ ಗೌಡ ಕೈ ನೋಡಿ ಏನಿದು ಉಂಗುರು ಹೀಗಿದೆ ಎಂದು ರಘು ಹೇಳಿದ್ದಾರೆ. ಕೂಡಲೇ ರಿಷಾ ಕೈಹಿಡಿದು "ಅದನ್ನು ದೂರದಿಂದ ನೋಡೊದಲ್ಲ, ಕೈ ಹಿಡ್ದು ನೋಡಬೇಕು" ಎಂದು ಗಿಲ್ಲಿ ತಮಾಷೆ ಮಾಡಿದ್ದಾರೆ.
ಅವಳನ್ನು ಅಷ್ಟೊಂದು ಪ್ರೀತಿಯಿಂದ ಕರೀತ್ತಿಯಾ ನನ್ನನ್ನು ಯಾಕೆ ಪ್ರೀತಿಯಿಂದ ಕರೆಯಲ್ಲ ಎಂದು ರಘು ಜೊತೆ ಗಿಲ್ಲಿ ತಮಾಷೆಯಾಗಿ ಜಗಳಕ್ಕೆ ಇಳಿದಿದ್ದಾರೆ. ಹಾಗಿದ್ರೆ ಟೇಬಲ್ ಕ್ಲೀನ್ ಮಾಡ್ಬಿಡು ಎಂದು ರಘು ಟಾಂಗ್ ಕೊಟ್ಟಿದ್ದಾರೆ. ಒಟ್ಟಾರೆ ಇವತ್ತು(ನವೆಂಬರ್ 14)ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಕಾಮಿಡಿ ಕಲರವ ಜೋರಾಗಿದೆ.
ಗಿಲ್ಲಿ ಬರೀ ಕಾಮಿಡಿಯಲ್ಲೇ ಮುಳುಗು ಹೋಗಿದ್ದಾರಾ? ಎನ್ನುವ ಚರ್ಚೆ ಕೂಡ ಶುರುವಾಗಿದೆ. ಸದಾ ತಮಾಷೆಯಾಗಿ ಮಾತಾಡಿಕೊಂಡೇ ಇರುವ ಆತ ಗಂಭೀರ ಸನ್ನಿವೇಶಗಳಲ್ಲಿ ಕೂಡ ಕಾಮಿಡಿ ಮಾಡಿ ನಗಿಸೋ ಪ್ರಯತ್ನ ಮಾಡುತ್ತಾರೆ ಎನ್ನುವುದು ಕೆಲವರು ಆರೋಪ. ಕೆಲ ವೀಕ್ಷಕರು ಈ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ತಮಗೆ ಕಿಚ್ಚನ ಚಪ್ಪಾಳೆ ಸಿಕ್ಕಿದ್ದನ್ನು ಪದೇ ಪದೆ ನೆನಪಿಸುತ್ತಾ ಗಿಲ್ಲಿ ಎಲ್ಲರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಾರೆ. ಇದು ಎಷ್ಟು ದಿನ ಕಾದು ನೋಡಬೇಕಿದೆ.
ತಮಾಷೆ ಮಾಡುತ್ತಾ ಆಟದ ನಿಯಮ ಮೀರಿದರೆ ಆದಷ್ಟು ಬೇಗ ಈ ವೇದಿಕೆ ಬರ್ತೀರಾ ಎಂದು ಗಿಲ್ಲಿಗೆ ಸುದೀಪ್ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದರು. ಗಿಲ್ಲಿ ಮೇಲೆ ರಿಷಾ ಗೌಡ ಹಲ್ಲೆ ಮಾಡಿದ್ದು ಕಳೆದ ವಾರ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಈ ವಿಚಾರದಲ್ಲಿ ಇಬ್ಬರಿಗೂ ಕಿಚ್ಚ ಕ್ಲಾಸ್ ತಗೊಂಡಿದ್ದರು. ಹೆಣ್ಣು ಮಗಳ ಬಟ್ಟೆಯನ್ನು ಬಾತ್‌ರೂಮ್ ಬಳಿ ಹಾಕಿದ್ದು ತಪ್ಪು ಎಂದು ಗಿಲ್ಲಿಗೆ ಕಿಚ್ಚ ಕಿವಿಮಾತು ಹೇಳಿದ್ದರು. ಈಗಾಗಲೇ 40 ದಿನ ದಾಟಿ 50ನೇ ದಿನದತ್ತ ಶೋ ಮುಂದುವರೆದಿದೆ. ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಬಿಗ್‌ಬಾಸ್ ಮನೆ ಕೂಡ ಹೊಸ ರೂಪ ಪಡೆಯುತ್ತಿದೆ.


Click it and Unblock the Notifications











