BBK12: ಮಗನ ಮುಂದೆ ರಘುನ ಕೊನೆಗೆ ತನ್ನ ತಂದೆಯನ್ನು ಬಿಡದೇ ಕಿಚಾಯಿಸಿದ ಗಿಲ್ಲಿ
ಬಿಗ್‌ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ರೌಂಡ್ ಶುರುವಾಗಿದೆ. ಸ್ಪರ್ಧಿಗಳು ಕುಟುಂಬ ಸದಸ್ಯರು ಒಬ್ಬೊಬ್ಬರಾಗಿ ಮನೆ ಒಳಗೆ ಬಂದಿದ್ದಾರೆ. ಗಿಲ್ಲಿ ತಂದೆ ತಾಯಿ ಕೂಡ ದೊಡ್ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಬಹುತೇಕರು ಗಿಲ್ಲಿ ಆಟ ಹಾಗೂ ಕಾಮಡಿ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಫ್ಯಾಮಿಲಿ ರೌಂಡ್‌ನಲ್ಲಿ ಕೂಡ ಗಿಲ್ಲಿ ಹೈಲೆಟ್ ಆಗುತ್ತಿರುವುದು ಗೊತ್ತಾಗುತ್ತಿದೆ. ಸ್ಪರ್ಧಿಗಳ ಮುಂದೆ ಅವರ ಕುಟುಂಬ ಸದಸ್ಯರ ಬಗ್ಗೆ ಕೂಡ ಕಾಮಿಡಿ ಮಾಡಿ ನೋಡುಗರನ್ನು ರಂಜಿಸುತ್ತಿದ್ದಾರೆ. ಆನ್-ಸ್ಪಾಟ್ ಕಾಮಿಡಿ ಮೂಲಕ ಗಮನ ಸೆಳೆಯುತ್ತಿದ್ದಾರೆ. ಗಿಲ್ಲಿ ಕಾಮಿಡಿ ಬಗ್ಗೆ ಮನೆ ಮಂದಿ ಬೇಸರ ವ್ಯಕ್ತಪಡಿಸಿರುವುದು ಇದೆ. ಕೆಲವೊಮ್ಮೆ ಆತನ ಮಾತು ಅತಿರೇಕಕ್ಕೆ ಹೋಗಿ ಯಡವಟ್ಟು ಆಗಿದೆ. ಆದರೆ ಕೂಡಲೇ ಕ್ಷಮೆ ಕೇಳಿ ಮತ್ತೆ ತನ್ನ ಆಟ ಮುಂದುವರೆಸಿದ್ದಾರೆ.

ಗಿಲ್ಲಿ ನಟನ ತಂದೆ-ತಾಯಿ ಕುಳ್ಳಯ್ಯ ಮತ್ತು ಸವಿತಾ ಮನೆ ಒಳಗೆ ಬಂದಿದ್ದಾರೆ. ಮಗನೊಟ್ಟಿಗೆ ಸಮಯ ಕಳೆದಿದ್ದಾರೆ. ಸವಿತಾ ಮಗನಿಗೆ ಎಣ್ಣೆ ಸ್ನಾನ ಮಾಡಿಸಿದ್ದಾರೆ. "ನೀನು ಹೊರಗೆ ಹೇಗೆ ಇರ್ತಿದ್ಯೋ ಇಲ್ಲಿಯೂ ಹಾಗೆ ಇರ್ತೀಯಾ. ನನಗೆ ಅದು ಖುಷಿ ಕೊಟ್ಟಿದೆ. ನಿಮ್ಮ ಅಪ್ಪ ತುಂಬಾನೇ ಖುಷಿಯಾದರು" ಎಂದು ಗಿಲ್ಲಿ ತಾಯಿ ಹೇಳಿದ್ದಾರೆ.
ರಘು ಅವರ ಮಗ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಅಲ್ಲಿ ಕೂಡ ಮಗನಿಗೆ ಬುದ್ಧಿವಾದ ಹೇಳಲು ರಘು ಮುಂದಾಗಿದ್ದಾರೆ. ಕೂಡಲೇ ಗಿಲ್ಲಿ ತನ್ನದೇ ಶೈಲಿಯಲ್ಲಿ ಟಾಂಗ್ ಕೊಟ್ಟು ತಮಾಷೆ ಮಾಡಿರುವುದನ್ನು ನೋಡಬಹುದು. "ಜಂಕ್ ಫುಡ್ ಎಲ್ಲಾ ತಿಂತಿದ್ದೀಯಾ?" ಎಂದು ರಘು ಮಗನನ್ನು ಕೇಳಿದ್ದಾರೆ. ಕೂಡಲೇ ಗಿಲ್ಲಿ "ಆ ಹುಡುನನ್ನು ಇಲ್ಲಾದ್ರೂ ಬಿಡಣ್ಣ, ಒಳ್ಳೆ ಮೇಷ್ಟ್ರ ರೀತಿ ಇಲ್ಲಿ ಪಾಠ ಮಾಡ್ತೀದ್ದೀಯಾ" ಎಂದು ಕಿಚಾಯಿಸಿದ್ದಾರೆ.
"ಮಗ ಬಂದಾಗ ಪ್ರೀತಿಯಿಂದ ಕೂರಿಸಿಕೊಂಡು ತಲೆ ಸವರಿ ಮಾತನಾಡಿಸ್ಬೇಕು. ಅದು ಬಿಟ್ಟು ಜಂಕ್ ಫುಡ್ ತಿಂತೀಯಾ ಅಂತ ಕೇಳ್ತೀಯಾ, ಅವ್ನು ಓಡಿ ಹೋಗಿಬಿಡಬೇಕು ಅನ್ನೋ ತರ" ಎಂದು ಗಿಲ್ಲಿ ತಮಾಷೆ ಮಾಡಿದ್ದು ಮನೆಮಂದಿ ನಕ್ಕಿದ್ದಾರೆ. ರಘು ಉತ್ತರಿಸಲಾಗದೇ ಸುಮ್ಮನಾಗಿದ್ದಾರೆ.
ಗಿಲ್ಲಿ ತಂದೆ ಮನೆ ಮಂದಿ ಮುಂದೆ ಅವ್ನು ಸ್ವಲ್ಪ ತೀಟೆ ಎಂದಿದ್ದಾರೆ. ಕೂಡಲೇ ಗಿಲ್ಲಿ "ಎಲ್ಲಾ ನಿನ್ನ ಪ್ರತಿಫಲ ಕಣ್ಣಪ್ಪ. ನೀನು ತೀಟೆ ಅಂತೆ ಅಲ್ಲ ಅವಾಗ. ಸೈಕಲ್ ಅಲ್ಲೇ ವೀಲ್ಹೀಂಗ್ ಹೊಡಿತ್ತಿದ್ರಂತೆ. ಕೊನೆ ಬೀದಿಯಲ್ಲಿ ಒಬ್ರನ್ನು ಲವ್ ಮಾಡ್ತಿದ್ರು ನಮ್ಮಪ್ಪ. ಅವ್ರ ಬೆಳಗ್ಗೆ 6 ಗಂಟೆಗೆ ರಂಗೋಲಿ ಬಿಡೋಕೆ ಬಂದ್ರೆ, ಸೈಕಲ್ ತಗೊಂಡು ಹೋಗಿ ವೀಲ್ಹಿಂಗ್ ಮಾಡ್ತಿದ್ರು ಎಂದಿದ್ದಾರೆ. ಕೂಡಲೇ ಗಿಲ್ಲಿ ತಾಯಿ ಮಾತನಾಡಿ "ಯಾರನ್ನು ಬಿಡಲ್ಲ ಅವ್ನು, ಹಿಂಗೆ ಕಾಮಿಡಿ ಮಾಡ್ತಿರ್ತಾನೆ" ಎಂದು ತಿಳಿಸಿದ್ದಾರೆ.
ಗಿಲ್ಲಿ ಕ್ಯಾಪ್ಟನ್ ಆಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ. ಕ್ಯಾಪ್ಟನ್ ಅಲ್ಲದೇ ಇದ್ದಾಗಲೇ ವೈಸ್ ಕ್ಯಾಪ್ಟನ್ ರೀತಿ ಆಡ್ತಿದ್ದ ಗಿಲ್ಲಿ, ಇನ್ನು ಕ್ಯಾಪ್ಟನ್ ಆದ್ಮೇಲೆ ಕೇಳ್ಬೇಕಾ ಎಂದು ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ. ಮುಂದಿನ ವಾರ ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ ಗಿಲ್ಲಿ ದರ್ಬಾರ್ ಎಂದು ಒಂದಷ್ಟು ವೀಡಿಯೋಗಳನ್ನು ಎಡಿಟ್ ಮಾಡಿ ವೈರಲ್ ಮಾಡುತ್ತಿದ್ದಾರೆ.
ಫಿನಾಲೆ ಹತ್ತಿರವಾಗ್ತಿದೆ. ಸದ್ಯ ಮನೆಯಲ್ಲಿ 11 ಮಂದಿ ಸ್ಪರ್ಧಿಗಳಿದ್ದಾರೆ. ಫ್ಯಾಮಿಲಿ ರೌಂಡ್ ಆಗಿರುವುದರಿಂದ ಈ ವಾರ ಕೂಡ ಎಲಿಮಿನೇಷನ್ ಅನುಮಾನ ಎನ್ನುವಂತಾಗಿದೆ. ಮುಂದಿನ ವಾರ ಡಬಲ್ ಎಲಿಮಿನೇಷನ್ ಸಾಧ್ಯತೆಯಿದೆ. ಈ ಬಾರಿ ಕೂಡ 100 ದಿನಗಳನ್ನು ದಾಟಿ ಶೋ ಮುಂದುವರೆಯುವ ನಿರೀಕ್ಷೆಯಿದೆ. ಗಿಲ್ಲಿ ಟ್ರೋಫಿ ಗೆಲ್ತಾನೆ ಎಂದು ಅಭಿಮಾನಿಗಳು ಹೇಳ್ತಿದ್ದಾರೆ.


Click it and Unblock the Notifications











