ನಾನು ಅಶ್ವಿನಿ ಅವರ ಹಲ್ಲು ಉದುರಿಸಬಹುದಿತ್ತು, ಆದ್ರೆ ಹಾಗೆ ಮಾಡ್ಲಿಲ್ಲ, ಯಾಕಂದ್ರೆ?

ಬಿಗ್‌ಬಾಸ್ ಸೀಸನ್-12ರಲ್ಲಿ ಗಿಲ್ಲಿ ಹಾಗೂ ಅಶ್ವಿನಿ ಗೌಡ ನಡುವೆ ಕಿರಿಕ್ ನಡೆದಿದ್ದು ಗೊತ್ತೇಯಿದೆ. ಇದೇ ಕಾರಣಕ್ಕೆ ಕೊನೆಯವರೆಗೂ ಇಬ್ಬರ ನಡುವೆ ಆತ್ಮೀಯ ಒಡನಾಟ ಶುರುವಾಗಲೇ ಇಲ್ಲ. ಆಗೊಮ್ಮೆ ಈಗೊಮ್ಮೆ ಇಬ್ಬರೂ ಒಬ್ಬರ ಪರ ಒಬ್ಬರು ನಿಂತಿದ್ದರು. ಆದರೆ ಮನೆಯಿಂದ ಹೊರಬಂದ ಮೇಲೆ ಅಶ್ವಿನಿ ಮಾತುಗಳಲ್ಲಿ ಆ ರೀತಿ ಕಂಡು ಬರಲಿಲ್ಲ. ಮತ್ತೆ ದ್ವೇಷ ಸಾಧಿಸುವಂತೆ ಮಾತನಾಡಿದ್ದರು.

ಗಿಲ್ಲಿ ಬಡವ ಅಲ್ಲ, ಬಡವನಂತೆ ನಾಟಕ ಮಾಡಿ ಗೆದ್ದ. ಬಿಗ್‌ಬಾಸ್ ಶೋ ವೋಟ್‌ಗಳ ಸಂಖ್ಯೆ ಬಹಿರಂಗ ಪಡಿಸಿದರೆ ನಾನು ವಿನ್ನರ್, ಸೆಕೆಂಡ್ ರನ್ನರ್ ಅಪ್ ಸ್ಥಾನ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಆದರೆ ಈ ಬಗ್ಗೆ ಗಿಲ್ಲಿ ಮಾತ್ರ ಏನು ಹೇಳುವ ಗೋಜಿಗೆ ಹೋಗಲಿಲ್ಲ. 'ದೊಡ್ಮನೆ ಹಬ್ಬ' ಕಾರ್ಯಕ್ರಮದಲ್ಲಿ ಗಿಲ್ಲಿ ಹಾಗೂ ಅಶ್ವಿನಿ ಮತ್ತೆ ಮುಖಾಮುಖಿ ಆಗಿದ್ದಾರೆ.

Gilli vs Ashwini Gowda Face Off Again in Dodmane Habba funny Roasting Moments Go Viral

ಸೀಸನ್ 12ರ ಎಲ್ಲಾ ಸ್ಪರ್ಧಿಗಳನ್ನು ಒಂದ್ಕಡೆ ಸೇರಿಸಿ 'ದೊಡ್ಮನೆ ಹಬ್ಬ' ಹೆಸರಿನಲ್ಲಿ ಕಲರ್ಸ್ ಕನ್ನಡ ಹೊಸ ಶೋ ಚಿತ್ರೀಕರಿಸಿದೆ. ಈ ವೀಕೆಂಡ್ ಶೋ ಪ್ರಸಾರವಾಗಲಿಲ್ಲ. ಅದಕ್ಕೆ ಸಂಬಂಧಿಸಿದ ಪ್ರೋಮೊಗಳು ಒಂದೊಂದಾಗಿ ರಿಲೀಸ್ ಆಗ್ತಿದೆ. ಸಾಂಪ್ರದಾಯಿಕ ಉಡುಗೆಗಳಲ್ಲಿ ಎಲ್ಲರೂ ಮಿಂಚಿದ್ದಾರೆ. ರಘು, ಕರಿಬಸಪ್ಪ ಫ್ಯಾಮಿಲಿ ಸಮೇತ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಮಾತು, ಹರಟೆ, ಫನ್ ಗೇಮ್‌ಗಳನ್ನು ಆಡಿಸಲಾಗಿದೆ.

ಸುಷ್ಮಾ ರಾವ್ ನಿರೂಪಣೆಯಲ್ಲಿ ಕಾರ್ಯಕ್ರಮ ಚಿತ್ರೀಕರಣವಾಗಿದೆ. ಗಿಲ್ಲಿ ತಮ್ಮ ಕಾಮಿಡಿ ಪಂಚ್‌ಗಳ ಮೂಲಕ ಗಮನ ಸೆಳೆದಿದ್ದಾರೆ. ಪ್ರೋಮೊದಲ್ಲೇ ಅದು ಗೊತ್ತಾಗುತ್ತಿದೆ. ಮತ್ತೊಮ್ಮೆ ಅಶ್ವಿನಿ ಗೌಡ ಹಾಗೂ ಕಾವ್ಯಾ ಕಾಲೆಳೆದು ಗಿಲ್ಲಿ ತಮಾಷೆ ಮಾಡಿದ್ದಾರೆ. ಅದು ಅಭಿಮಾನಿಗಳಿಗೆ ಬಹಳ ಇಷ್ಟವಾಗ್ತಿದೆ.

ಸ್ಪರ್ಧಿಗಳ ಹಲ್ಲು ಉದುರಿಸುವ ಫನ್ನಿ ಟಾಸ್ಕ್.. ಅಂದರೆ ಎದುರಿಗೆ ಸ್ಪರ್ಧಿಗಳ ದೊಡ್ಡ ಭಾವಚಿತ್ರ, ಅದರಲ್ಲಿ ಹಲ್ಲಿನ ಸೆಟ್‌ ಮಾದರಿಯ ಪ್ರಾಪ್ಸ್ ಸಿದ್ಧಪಡಿಸಿದ್ದು ಚೆಂಡಿನ ಮೂಲಕ ಹಲ್ಲು ಉದುರಿಸುವಂತೆ ಹೇಳಲಾಗಿದೆ. ಅದಕ್ಕೆ ಸೂಕ್ತ ಕಾರಣ ಕೊಡಲು ಹೇಳಿದ್ದಾರೆ. ಡಾಗ್ ಸತೀಶ್ ಹಲ್ಲು ಉದುರಿಸಿ ಸ್ಪಂದನಾ ಅದಕ್ಕೆ ಕಾರಣವನ್ನು ಕೊಟ್ಟಿದ್ದಾರೆ.

ನನ್ನ ರಾತ್ರೋ ರಾತ್ರಿ ಶರ್ಟ್ ಕಳ್ಳಿ ಮಾಡಿಬಿಟ್ರು, ಅದಕ್ಕೆ ಸತೀಶ್ ಸರ್ ಹಲ್ಲು ಉದುರಿಸಿದೆ ಎಂದು ಸ್ಪಂದನಾ ಹೇಳಿ ಎಲ್ಲರನ್ನು ನಗಿಸಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ನನ್ನದು ಹಲ್ಲ್‌ಸೆಟ್ಟು ಎಂದು ರೇಗಿಸಿದ್ದಕ್ಕೆ ಗಿಲ್ಲಿ ಹಲ್ಲು ಉದುರಿಸ್ತೀನಿ ಎಂದು ಅಶ್ವಿನಿ ಹೇಳಿ ಚೆಂಡಿನಿಂದ ಗಿಲ್ಲಿ ಭಾವಚಿತ್ರದ ಹಲ್ಲು ಉದುರಿಸಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿದ ಗಿಲ್ಲಿ "ಈಗ ನಾನು ಅಶ್ವಿನಿ ಅವರ ಹಲ್ಲು ಉದುರಿಸಬಹುದಿತ್ತು. ಯಾಕೆ ಹಂಗೆ ಮಾಡಲ್ಲ ಹೇಳಿ, ಅವ್ರೇ ಹೇಳಿಬಿಟ್ರಲ್ಲ, ಹಲ್ಲ್ ಸೆಟ್ಟು ಅಂತ" ಎಂದಿದ್ದಾರೆ.

ಸೀಸನ್ ಪೂರ್ತಿ ನನ್ನ ರೇಗಿಸಿದ್ದಕ್ಕೆ ಗಿಲ್ಲಿ ಹಲ್ಲು ಉದುರಿಸ್ತೀನಿ ಎಂದು ಕಾವ್ಯಾ ಹೇಳಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ರೇಗಿಸಿರೋದಲ್ಲ, ಮೆಸೇಜ್ ಮಾಡಿ ರೇಗಿಸ್ತೀನಿ, ಕಾವ್ಯಾ ಮನೆ ಹತ್ರ ಹೋಗಿ ರೇಗಿಸ್ತೀನಿ ಎಂದು ಗಿಲ್ಲಿ ಹೇಳಿದ್ದು ಕಾವ್ಯಾ ಶಾಕ್ ಆಗಿದ್ದಾರೆ. ಇದೇ ಶನಿವಾರ ಸಂಜೆ 6 ಗಂಟೆಗೆ 'ದೊಡ್ಮನೆ ಹಬ್ಬ' ಕಾರ್ಯಕ್ರಮ ಪ್ರಸಾರವಾಗಲಿದೆ.

ರೋಸ್ಟಿಂಗ್ ಸ್ಟಾರ್ ಗಿಲ್ಲಿ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಪ್ರೋಮೊಗೆ ಕಾಮೆಂಟ್ ಮಾಡುತ್ತಿದ್ದಾರೆ. ಕೌಂಟರ್‌ ಕೊಡೊದ್ರಲ್ಲಿ ಗಿಲ್ಲಿನ ಮೀರಿಸುವವರು ಇಲ್ಲ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಪ್ರೋಮೊ ಸಖತ್ ವೈರಲ್ ಆಗ್ತಿದೆ. ಗಿಲ್ಲಿ ನಟನೆಯ 'ಸೂಪರ್ ಹಿಟ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಗಿಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

Read more about: bigg boss 12 bigg boss gilli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X