'ಕಲ್‌ಸಕ್ರೆ' ಹಂಚಲು ಹೊರಟ 'ಗಿಣಿರಾಮ' ಧಾರಾವಾಹಿಯ ಶಿವರಾಮು: ಈ ಬಾರಿ ಮಾಸ್ or ಕ್ಲಾಸ್?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಕನ್ನಡ ಸೊಬಗಿನ 'ಗಿಣಿರಾಮ' ಧಾರಾವಾಹಿಯು ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಬರೋಬ್ಬರಿ 740 ಕ್ಕೂ ಹೆಚ್ಚು ಎಪಿಸೋಡ್‌ಗಳು ಪ್ರಸಾರವಾಗಿರುವ 'ಗಿಣಿರಾಮ' ಧಾರಾವಾಹಿಯು ತನ್ನ ಎರಡು ವರ್ಷದ ಪಯಣವನ್ನು ಮುಕ್ತಾಯಗೊಳಿಸಲಿದೆ.
ಎರಡು ವರ್ಷಗಳ ಕಾಲ ಸೊಗಸಾದ ಕಥೆಯ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದ 'ಗಿಣಿರಾಮ' ಧಾರಾವಾಹಿಯು ಸುಖಾಂತ್ಯ ಕಾಣುವ ಮೂಲಕ ತನ್ನ ಪ್ರಸಾರ ನಿಲ್ಲಿಸಲಿದೆ.

ತಮ್ಮ ನೆಚ್ಚಿನ ಧಾರಾವಾಹಿ ಇದ್ದಕ್ಕಿದ್ದಂತೆ ಪ್ರಸಾರ ನಿಲ್ಲಿಸುತ್ತಿರುವುದಕ್ಕೆ ಕಿರುತೆರೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದರ ನಡುವೆ 'ಗಿಣಿರಾಮ' ಧಾರಾವಾಹಿಯಲ್ಲಿ ನಾಯಕ ಶಿವರಾಮ್ ದೇಶಪಾಂಡೆ ಆಗಿ ಅಭಿನಯಿಸುತ್ತಿದ್ದ ರಿತ್ವಿಕ್ ಮಠದ್ ಸಿಹಿ ಸುದ್ದಿ ನೀಡಿದ್ದು ಇದು ಧಾರಾವಾಹಿ ಪ್ರಿಯರಲ್ಲಿ ಸಂತಸ ಮೂಡಿಸಿದೆ.
'ಕಲ್‌ಸಕ್ರೆ ಸಿನಿಮಾದಲ್ಲಿ ನಟನೆ
ಹೌದು, ಅದ್ಭುತ ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ರಿತ್ವಿಕ್ ಮಠದ್ ಈಗ ಸಿನಿಮಾದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಬಿ ಧರ್ಮ ರಾಜುಲು ನಿರ್ಮಾಣದ 'ಕಲ್ ಸಕ್ರೆ' ಸಿನಿಮಾದಲ್ಲಿ ನಾಯಕರಾಗಿ ರಿತ್ವಿಕ್ ನಟಿಸಲಿದ್ದು ಸಿನಿಮಾದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

'ಅನುರೂಪ'ದ ಹುಡುಗ ರಿತ್ವಿಕ್
ಅನಿಮೇಶನ್‌ನಲ್ಲಿ ಬಿಎಸ್‌ಸಿ ಪದವಿ ಪಡೆದರುವ ರಿತ್ವಿಕ್ ನಟನೆಯ ಸಲುವಾಗಿ ಎಂಎನ್‌ಸಿ ಕೆಲಸಕ್ಕೆ ವಿದಾಯ ಹೇಳಿದರು. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಅನುರೂಪ' ಧಾರಾವಾಹಿಯಲ್ಲಿ ನಾಯಕ ಶ್ಯಾಮ್ ಆಗಿ ರಿತ್ವಿಕ್ ಮಠದ್ ನಟಿಸಿದ್ದರು. ಆ ಬಳಿಕ ಈ ನಟ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು.
ಸಿನಿಮಾಗಳಲ್ಲಿ ನಟನೆ
ರಿತ್ವಿಕ್ ಮಠದ್ ಈಗಾಗಲೇ 'ಜಸ್ಟ್ ಲವ್', 'ಯುವ ಸಾಮ್ರಾಟ್', 'ಶಂಭೂ ಮಹಾದೇವ', 'ಗಿಫ್ಟ್ ಬಾಕ್ಸ್' ಅಂತಹ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ ಮೂಲಕ ಧಾರಾವಾಹಿಗಳಷ್ಟೇ ಅಲ್ಲದೆ, ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ 'ಗಿಣಿರಾಮ' ಬಳಿಕ ಹೊಚ್ಚ ಹೊಸ ಸಿನಿಮಾ 'ಕಲ್ ಸಕ್ರೆ' ಮೂಲಕ ಮತ್ತೆ ಸಿನಿಪ್ರಿಯರನ್ನು ರಂಜಿಸಲು ಬರಲಿದ್ದಾರೆ.
ಕನಸು ನೆರವೇರಿತು ಎಂಬ ಖುಷಿ
ರಿತ್ವಿಕ್ ಅವರಿಗೆ ತೆರೆಯ ಮೇಲೆ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಅನೇಕ ಸಮಯದಿಂದಲೂ ಇತ್ತಂತೆ. 'ಗಿಣಿರಾಮ' ಧಾರಾವಾಹಿಯ ಶಿವರಾಮ ಪಾತ್ರದಿಂದ ತಮ್ಮ ಬಹು ದಿನದ ಕನಸು ನನಸಾಗಿದೆ ಎಂಬ ಖುಷಿಯಿದೆ. ಶಿವರಾಮು ಪಾತ್ರ ಅವರಿಗೆ ತುಂಬಾ ಇಷ್ಟದ ಪಾತ್ರವಾಗಿದ್ದ ಕಾರಣ ಆ ಪಾತ್ರಕ್ಕೆ ಅವರ ಕೈಲಾದಷ್ಟು ಜೀವ ತುಂಬಿದ್ದಾನೇ ಎಂಬ ಖುಷಿ. ಈಗ 'ಕಲ್‌ಸಕ್ರೆ' ಮೂಲಕ ಮತ್ತೆ ಪ್ರೇಕ್ಷಕರನ್ನು ಮನಗೆಲ್ಲವು ಸಜ್ಜಾಗಿದ್ದಾರೆ.


Click it and Unblock the Notifications











