"ಥೂ.. ಅವತ್ತು ಆ ಅಂಕಲ್ ನನ್ನ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿ ***"; ನಯನಾ ನಾಗರಾಜ್

ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಆಗಾಗ್ಗೆ ಕಹಿ ಅನುಭವಗಳಾಗುತ್ತಿರುತ್ತದೆ. ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ರೀತಿಯಲ್ಲಿ ಹೆಣ್ಣುಮಕ್ಕಳು ದೈಹಿಕವಾಗಿ ಮಾನಸಿಕವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಕಾಮುಕರ ಅಟ್ಟಾಹಾಸಕ್ಕೆ ಒಮ್ಮೊಮ್ಮೆ ಬಹಳ ನೋವು ಅನುಭವಿಸಬೇಕಾಗುತ್ತದೆ. ಜೀವನದಲ್ಲಿ ಕೆಲವೊಮ್ಮೆ ಎದುರಾಗುವ ಇಂತಹ ಕೆಟ್ಟ ಸನ್ನಿವೇಶಗಳು ಜೀವಪರ್ಯಂತ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಕೆಲವರು ಬಹಿರಂಗವಾಗಿ ಈ ಬಗ್ಗೆ ಮಾತನಾಡುತ್ತಾರೆ. ಆದರೆ ಕೆಲವರು ಹೆದರಿ ಸುಮ್ಮನಾಗುತ್ತಾರೆ.

ಸಿನಿಮಾ ನಟಿಯರಿಗೆ ಕೂಡ ಸಾಕಷ್ಟು ರೀತಿಯಲ್ಲಿ ಲೈಂಗಿಕ ಕಿರುಕುಳ ಎದುರಿಸಿರುವುದು ಇದೆ. ಕೆಲವರು ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 'ಗಿಣಿರಾಮ' ಹಾಗೂ 'ಪಾಪ ಪಾಂಡು' ಧಾರಾವಾಹಿಗಳಲ್ಲಿ ನಟಿಸಿ ಮೋಡಿ ಮಾಡಿದ್ದ ನಟಿ ನಯನಾ ನಾಗರಾಜ್ ದಿಢೀರನೆ ಕಿರುತೆರೆಯಿಂದ ದೂರಾಗಿದ್ದರು. ಬಳಿಕ ಅದಕ್ಕೆ ಕಾರಣ ಏನು ಎಂದು ತಿಳಿಸಿದ್ದರು. ಕಳೆದ ವರ್ಷ ಪ್ರಿಯಕರನ ಜೊತೆ ಆಕೆ ಹೊಸ ಬಾಳಿಗೆ ಕಾಲಿಟ್ಟಿದ್ದರು.

Ginirama serial Fame actress opens up about her Childhood Trauma bad incidents

ನಟಿ ನಯನಾ ನಾಗರಾಜ್ ಇತ್ತೀಚೆಗೆ ರಾಜೇಶ್ ಗೌಡ ಯೂಟ್ಯೂಬ್ ಚಾನಲ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ನಿಜ ಜೀವನ ಹಾಗೂ ವೃತ್ತಿ ಜೀವನದ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಜೀವನದಲ್ಲಿ ನಡೆದ ಎರಡು ಕಹಿ ಘಟನೆಗಳನ್ನು ವಿವರಿಸಿದ್ದಾರೆ. ಅದು ಸನ್ನಿವೇಶಗಳು ಇವತ್ತಿಗೂ ತಮ್ಮ ಮನಸ್ಸಿನಲ್ಲಿ ಮಾಸದೇ ಉಳಿದುಬಿಟ್ಟಿದೆ ಎಂದು ಕೆಲ ಕಾಮುಕರ ಕರಾಳ ಮುಖ ತೆರೆದಿಟ್ಟಿದ್ದಾರೆ.

"ತ್ಯಾಗರಾಜ ನಗರದ ಮನೆಯೊಂದರಲ್ಲಿ ನಾವು ಬಾಡಿಗೆಗೆ ಇದ್ದೆವು. ಒಮ್ಮೆ ಮಟ ಮಟ ಮಧ್ಯಾಹ್ನ ಮನೆ ಮುಂದೆ ಇದ್ದ ಮೆಟ್ಟಿಲ ಮೇಲೆ ನನ್ನ ಸ್ನೇಹಿತೆ ಜೊತೆ ನಾನು ಕುಳಿತ್ತಿದೆ. ಏನೋ ಮಾತನಾಡುತ್ತಿದ್ದೆವು. ಆಗ ನಾನು 7 ತರಗತಿಯಲ್ಲಿ ಓದುತ್ತಿದ್ದ. ದಿಢೀರನೆ ಒಬ್ಬ ಅಂಕಲ್ ಬಂದರು. ದ್ವಿಚಕ್ರ ವಾಹನದಿಂದ ಇಳಿದು ನಮ್ಮನ್ನು ನೋಡಿದರು. ನಾವು ಯಾರೋ ಎಂದುಕೊಂಡು ಸುಮ್ಮನಾದೆವು" ಎಂದು ನಯನಾ ನಾಗರಾಜ್ ಆ ಘಟನೆ ನೆನಪಿಸಿಕೊಂಡಿದ್ದಾರೆ.

ಮಾತು ಮುಂದುವರೆಸಿದ ನಯನಾ "ನಮ್ಮನ್ನು ಕೆಲವೊತ್ತು ನೋಡಿದ ಆ ವ್ಯಕ್ತಿ ದಿಢೀರನೆ ಪ್ಯಾಂಟ್ ಬಿಚ್ಚಿ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದರು. ನಮಗೆ ಆ ಕ್ಷಣಕ್ಕೆ ಏನು ಮಾಡಬೇಕು ಎನಿಸಲಿಲ್ಲ. ನಾವಿಬ್ಬರು ಹೆಂಗೆಂಗೋ ಇದ್ವಿ? ಎಂಥದ್ದೋ ಬಟ್ಟೆ ಧರಿಸಿದ್ವಿ, ಅದಕ್ಕೆ ಆತ ಪ್ರಚೋದನೆಗೊಂಡ ಎಂದು ಹೇಳುವುದಕ್ಕೆ ನಾವು ಆ ರೀತಿ ಇರಲಿಲ್ಲ. ನಾವು ನಾರ್ಮಲ್ ಆಗಿ ಫ್ರಾಕ್ ಹಾಕಿಕೊಂಡಿದ್ದೆವು, ನಮಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಅಷ್ಟರಲ್ಲಿ ಎದುರು ಮನೆಯಲ್ಲಿದ್ದ ಆಂಟಿ ಕಿಟಕಿ ತೆಗೆದು ನೋಡಿದರು. ಆತನನ್ನು ಪ್ರಶ್ನಿಸಲಿಲ್ಲ. ಕಿಟಿಕಿ ಮುಚ್ಚಿಕೊಂಡು ಸುಮ್ಮನಾಗಿಬಿಟ್ಟರು" ಎಂದು ನಯನಾ ಆ ಘಟನೆ ಬಗ್ಗೆ ಬೇಸರ ಹೊರಹಾಕಿದ್ದಾರೆ.

"ಆ ವ್ಯಕ್ತಿ ಯಾಕೆ ಆ ರೀತಿ ನಮ್ಮ ಮುಂದೆ ಬಂದು ನಡೆದುಕೊಂಡ ಎನ್ನುವುದು ನಮಗೆ ಗೊತ್ತಿಲ್ಲ. ನಮಗೆ ಅಳುಬರುವಂತಾಯಿತು. ಆತ ಹೋದಮೇಲೆ ನಾವು ನಮ್ಮ ನಮ್ಮ ಮನೆಗೆ ಹೋದೆವು. ಆದರೆ ಆ ಆಂಟಿ ನಮ್ಮ ಅಮ್ಮನ ಬಳಿ ಬಂದು "ಆ ಯಪ್ಪಾ ಏನೋ ಕೆಟ್ಟದಾಗಿ ಮಾಡಿದರೆ ಆ ಇಬ್ಬರು ಹುಡುಗಿಯರು ಕೂತು ನೋಡುತ್ತಿದ್ದಾರೆ" ಎಂದು ಹೇಳಿದ್ದಾರೆ. ನಮ್ಮ ಅಮ್ಮ ಬಂದು ಈ ಬಂದು ಹೇಳಿದಾಗ ಆಕೆಯ ಕಪಾಳಕ್ಕೆ ಬಾರಿಸು, ಆ ವ್ಯಕ್ತಿ ಆ ರೀತಿ ನಡೆದುಕೊಂಡು ಏನನ್ನೂ ಹೇಳದೇ ಹೀಗೆ ಬಂದು ತಪ್ಪಾಗಿ ಹೇಳಿದ್ದಾಳೆ" ಎಂದು ಗರಂ ಆಗಿದ್ದದ್ದನ್ನು ನಯನಾ ತಿಳಿಸಿದ್ದಾರೆ.

ಅಂದಹಾಗೆ ನಟಿ ನಯನಾ ನಾಗರಾಜ್ ಅವರಿಗೆ ಇಂತಾದೊಂದು ಕಹಿ ಘಟನೆ ಎದುರಾಗಿ ಅದೊಂದು ಬಾರಿ ಮಾತ್ರವಲ್ಲ. ಮತ್ತೊಮ್ಮೆ ಇಂಥದ್ದೇ ಸನ್ನಿವೇಶ ಎದುರಾದಗ ಕಾಮುಕನ್ನು ಅಟ್ಟಿಸಿಕೊಂಡು ಹೋಗಿ ಜನರ ಕೈಯಲ್ಲಿ ಹೊಡೆಸಿದ್ದೆ ಎಂದು ಮತ್ತೊಂದು ಘಟನೆಯನ್ನು ವಿವರಿಸಿದ್ದಾರೆ. ಅವತ್ತು ನಡೆದ ಘಟನೆ ಬಳಿಕ ನಾನು ಇನ್ನು ಮುಂದೆ ಯಾವನಾದರೂ ಆ ರೀತಿ ಮಾಡಿದರೆ ಕಲ್ಲಿನಲ್ಲಿ ಹೊಡೆಯಬೇಕು ಎಂದುಕೊಂಡಿದ್ದೆ. ಬಳಿಕ ಮತ್ತೊಂದು ಘಟನೆ ನಡೆಯಿತು ಎಂದಿದ್ದಾರೆ.

"ನಾನು ಕಾಲೇಜಿನಲ್ಲಿದ್ದ ಸಮಯ. ನನ್ನ ಸ್ನೇಹಿತೆ ಮನೆ ಬಳಿ ಆಕೆಯ ಜೊತೆ ನಿಂತು ಮಾತನಾಡುತ್ತಿದ್ದೆ. ಮುನೇಶ್ವರ ಬ್ಲಾಕ್ ಬಳಿ ನಡೆದ ಘಟನೆ. ಒಂದಷ್ಟು ಶಾಲಾ ವಿದ್ಯಾರ್ಥಿನಿಯರ ಆತನ ಮುಂದೆ ಪಾಸ್ ಆದರು. ಆಗ ಒಬ್ಬ 40ರ ಅಂಕಲ್ ಅವರ ಮುಂದೆ ಹಸ್ತಮೈಥುವ ಮಾಡಿಕೊಳ್ಳುತ್ತಿದ್ದ. ನಾನು ಆಕಸ್ಮಿಕವಾಗಿ ನೋಡಿದೆ. ಥೂ ಎಂದು ಬೈದುಕೊಂಡು ಸುಮ್ಮನಾದೆವು. ಬಳಿಕ ಆ ವ್ಯಕ್ತಿ ಮಹಿಳೆಯೊಬ್ಬರಿಗೆ ಅಡ್ಡಹೋದ. ಅದನ್ನು ನೋಡಿ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ" ಅಂರ ನಯನಾ ಮುಂದೇನಾಯಿತು ಎಂದು ಹೇಳಿದ್ದಾರೆ.

"ಕೂಡಲೇ ನಾನು, ನನ್ನ ಸ್ನೇಹಿತೆ ಆ ವ್ಯಕ್ತಿಯನ್ನು ಅಟ್ಟಿಸಿಕೊಂಡು ಹೋದೆವು. ನಾನು ಕಲ್ಲಿನಿಂದ ಆತನಿಗೆ ಹೊಡೆದೆ. ಆತ ಯಾಕೆ? ಏನೇ? ಎಂದು ಕೇಳಿದ. ಅಷ್ಟರಲ್ಲಿ ಒಂದಷ್ಟು ಜನ ಮುತ್ತಿಕೊಂಡರು. ಆಗ ನಾವಿಬ್ಬರು ಆತ ಮಾಡಿದ ಕೆಟ್ಟ ಕೆಲಸದ ಬಗ್ಗೆ ಎಲ್ಲರಿಗೂ ಹೇಳಿದೆವು. ಎಲ್ಲರೂ ಸೇರಿಕೊಂಡು ಚೆನ್ನಾಗಿ ಥಳಿಸಿದರು. ಜೀವನದಲ್ಲಿ ಇನ್ನೊಮ್ಮೆ ಆತ ಆ ರೀತಿ ಮಾಡದಂತೆ ಬುದ್ದಿ ಕಲಿಸಿದರು" ಎಂದು ನಯನಾ ನಾಗರಾಜ್ ಇಡೀ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇಂತಹ ಕಾಮುಕರಿಗೆ ಅಂತಿಂಥ ಶಿಕ್ಷೆ ಕೊಡಬಾರದು ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಆ ಘಟನೆ ಬಳಿಕ ಆತ ಇನ್ನೆಂದೂ ಆ ಏರಿಯಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಆ ರೀತಿ ಮಾಡಿದ್ದಕ್ಕೆ ನನಗೆ ನನ್ನ ಬಗ್ಗೆ ಹೆಮ್ಮೆ ಎನಿಸಿತು. ನನಗೆ 7 ತರಗತಿಯಲ್ಲಿ ಆಗಿದ್ದ ಟ್ರಾಮೋ 2ನೇ ಬಾರಿ ಇಂತಹ ಘಟನೆ ನೋಡಿದಾಗ ಎದುರಿಸಬೇಕು ಎನ್ನುವ ಧೈರ್ಯ ತಂದುಕೊಟ್ಟಿತ್ತು. ಅವತ್ತು ಆತ ಮಾಡಿದ್ದಕ್ಕೆ ಸರಿಯಾದ ಶಾಸ್ತಿ ಆಯಿತು ಎಂದು ಈಗಲೂ ಅನಿಸುತ್ತದೆ. ಇಂತಹ ಕಾಮುಕರನ್ನು ಕಲ್ಲು ಹೊಡೆದು ಸಾಯಿಸಬೇಕು, ಇಲ್ಲದೇ ಶೂಟ್ ಮಾಡಿಬಿಡಬೇಕು ಎಂದು ನಯನಾ ಹೇಳಿದ್ದಾರೆ.

ರೇಪ್ ಮಾಡ್ತಾರೆ, ಗ್ಯಾಂಗ್ ರೇಪ್ ಮಾಡ್ತಾರೆ, ಅಂತಹವರನ್ನು ಕರೆದುಕೊಂಡು ಹೋಗಿ ಜೈಲಿನಲ್ಲಿ ಚೆನ್ನಾಗಿ ಊಟ ಹಾಕುತ್ತಾರೆ. ಅವರಿಗೆ ಶಿಕ್ಷೆ ಆಗಲು 7 ವರ್ಷ ಕಾಯಬೇಕು, ನಿರ್ಭಯಾ ಕೇಸ್ ನೆನಪಿಸಿಕೊಂಡರೆ ಬೇಸರವಾಗುತ್ತದೆ. ಡೆಲ್ಲಿ ಕ್ರೈಂ ಬಳಿಕ ಆತ ಕೊಡುವ ಹೇಳಿಕೆ ನೋಡಿದರೆ ಆಘಾತವಾಗುತ್ತದೆ. ನಾವು ಇನ್ನು ಅಂತವರನ್ನು ಜೈಲಿನಲ್ಲಿ ಕೂರಿಸಿ ಊಟ ಹಾಕುತ್ತಿದ್ದೀವಿ ಎಂದರೆ ಇದು ಯಾವ ನ್ಯಾಯ" ಎಂದು ನಟಿ ನಯನ ನಾಗರಾಜ್ ಆಕ್ರೋಶ ಹೊರ ಹಾಕಿದ್ದಾರೆ.

ಕ್ಯಾಮರಾಮನ್ ಜೊತೆಗಿನ ಭಿನ್ನಾಭಿಪ್ರಾಯದಿಂದ ತಾವು ಕಿರುತೆರೆಯಿಂದ ಬ್ಯಾನ್ ಆಗುವಂತಾಯಿತು ಎಂದು ಇದೇ ಸಂದರ್ಶನದಲ್ಲಿ ನಯನಾ ಹೇಳಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಆತನಿಂದ ಕಿರಿಕಿರಿ ಹೆಚ್ಚಾಯಿತು. ಚಿತ್ರೀಕರಣ ಮಾಡುವಾಗ ಏನೇನೋ ಕಾಮೆಂಟ್ ಮಾಡುತ್ತಿದ್ದರು. ಅದನ್ನು ಸಹಿಸಿಕೊಂಡು ಸಾಕಾಗಿತ್ತು ಎಂದಿದ್ದಾರೆ.

'ಗಿಣಿರಾಮ' ಧಾರಾವಾಹಿಯಲ್ಲಿ ನಟಿಸುವಾಗ ನನಗೆ ದಿನಕ್ಕೆ 4 ಸಾವಿರ ರೂ. ಸಂಭಾವನೆ ಸಿಗುತ್ತಿತ್ತು ಎಂದು ನಯನಾ ತಿಳಿಸಿದ್ದಾರೆ.. ತಿಂಗಳಿಗೆ 10ರಿಂದ 12 ದಿಂದ ಚಿತ್ರೀಕರಣ ಇರುತ್ತಿತ್ತು. ಅದಕ್ಕಿಂತ ಜಾಸ್ತಿ ಇರಲಿಲ್ಲ. ಇದ್ದಿದ್ದರೆ ಸಾಲ ಮಾಡಿ ಮನೆ ಕೊಂಡುಕೊಳ್ಳುತ್ತಿದೆ. ಅದೇ ಸಂಭಾವನೆಯಲ್ಲಿ ಹಣ ಉಳಿಸಿ ನಾನು ಮದುವೆ ಮಾಡಿಕೊಂಡಿದ್ದು ಎಂದಿದ್ದಾರೆ.

More from Filmibeat

English summary
Nayana Nagaraj recalls Why uncle unzipped his pant in front of her;
Read more about: actress tv sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X