'ಗಿಣಿರಾಮ'ನ ಅರಗಿಣಿ ಈಗ 'ಮಹರ್ಷಿ ದರ್ಶನ'ದ ನಿರೂಪಕಿ; ನಯನಾ ನಾಗರಾಜು ಹಿನ್ನೆಲೆಯೇನು?
ನಯನಾ ನಾಗರಾಜು.. ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಹೆಸರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಉತ್ತರ ಕನ್ನಡ ಸೊಬಗಿನ 'ಗಿಣಿರಾಮ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ ಬೆಡಗಿ. 'ಗಿಣಿರಾಮ' ಧಾರಾವಾಹಿಯಲ್ಲಿ ಮಹತಿಯಾಗಿ ಅಭಿನಯಿಸಿದ ನಯನಾ ನಾಗರಾಜು ಇದೀಗ ಕಿರುತೆರೆಗೆ ಕಂ ಬ್ಯಾಕ್ ಆಗಲಿದ್ದಾರೆ. ಆದರೆ, ಈ ಬಾರಿ ಆಕೆ ಕಾಣಿಸಿಕೊಂಡಿರುವುದು ನಿರೂಪಕಿಯಾಗಿ.
ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಹರ್ಷಿ ದರ್ಶನ' ಕಾರ್ಯಕ್ರಮದ ನಿರೂಪಕಿಯಾಗಿ ನಯನಾ ನಾಗರಾಜು ಮೋಡಿ ಮಾಡಲಿದ್ದಾರೆ. ಅಂದ ಹಾಗೇ, ನಯನಾ ನಾಗರಾಜುಗೆ ನಿರೂಪಣೆ ಹೊಸ ಕ್ಷೇತ್ರವೇನಲ್ಲ. ಈ ಮೊದಲು ಯೂ 2 ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ 'ಫಿಲ್ಮಿಬಾತ್' ಎನ್ನುವ ಶೋವನ್ನು ಈಕೆ ನಿರೂಪಿಸುತ್ತಿದ್ದರು.

ಎರಡನೇ ಬಾರಿ ನಿರೂಪಕಿಯಾಗಿ ಕಿರುತೆರೆಯಲ್ಲಿ ಕಮಾಲ್ ಮಾಡಿರುವ ನಯನಾ ನಾಗರಾಜು ನಟನೆಯ ಮೂಲಕ ಗಮನ ಸೆಳದ ಬೆಡಗಿ. 'ಗಿಣಿರಾಮ' ಧಾರಾವಾಹಿಯಲ್ಲಿ ಮಾಸ್ತರ ಮಗಳು ಮಹತಿಯಾಗಿ ಅಭಿನಯಿಸಿದ್ದ ನಯನಾಗೆ ಅಸಲಿಯಾಗಿ ನಟಿಯಾಗಬೇಕು ಎಂಬ ಕನಸೇನೂ ಇರಲಿಲ್ಲ. ಬದಲಿಗೆ ಗಾಯಕಿಯಾಗಿ ಗುರುತಿಸಿಕೊಳ್ಳಬೇಕೆಂಬ ಹಂಬಲವಿತ್ತು.
ಕರ್ನಾಟಕ ಕ್ಲಾಸಿಕಲ್ ಮತ್ತು ಹಿಂದೂಸ್ತಾನಿ ಸಂಗೀತವನ್ನು ಕರಗತ ಮಾಡಿಕೊಂಡಿರುವ ನಯನಾ ಪದವಿ ವಿದ್ಯಾಭ್ಯಾಸ ಮುಗಿದದ್ದೇ ತಡ ರಿದಂಸ್ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ದೇಸಿ ಸಂಗೀತದ ಉಪನ್ಯಾಸಕಿಯಾಗಿ ಕೆಲಸ ಶುರು ಮಾಡಿದರು. ಮುಂದೆ ಕಾಲು ಪ್ರಾಕ್ಚರ್ ಆಗಿ ಕೆಲಸಕ್ಕೆ ವಿದಾಯ ಹೇಳಿದರು. ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾಗ ಸಮಯ ಕಳೆಯುತ್ತಿದ್ದಾಗ ಟಿವಿ ನೋಡುತ್ತಿದ್ದರು. ಆಗ ಆಕೆಗೂ ತಾನು ಯಾಕೆ ನಟಿಸಬಾರದು ಎಂಬ ಆಲೋಚನೆ ಮಾಡಿದರು.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶಾಂತಂ ಪಾಪಂ' ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು ನಯನಾ. ತದ ನಂತರ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಂಗ್ಳೂರು ಹುಡ್ಗಿ, ಹುಬ್ಬಳ್ಳಿ ಹುಡ್ಗ'ದಲ್ಲಿಯೂ ಅಭಿನಯಿಸಿದರು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾಪಾ ಪಾಂಡು ಸೀಸನ್ 2'ರಲ್ಲಿ ಚೌಕಾಸಿ ಚಾರು ಪಾತ್ರದಲ್ಲಿ ಮಿಂಚಿದರು.

'ಚೌಕಾಸಿ ಚಾರು' ಆಗಿ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದ ನಯನಾ ನಾಗರಾಜು ಅವರು ಮುಂದೆ ಮಹತಿಯಾಗಿ ಕಿರುತೆರೆಯಲ್ಲಿ ಕಮಾಲ್ ಮಾಡಿದರು. ಹೀಗಿರುವಾಗ ಈ ನಟಿ 'ಗಿಣಿರಾಮ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದಿದು ಇದೀಗ ನಿರೂಪಕಿಯಾಗಿ ಮತ್ತೊಮ್ಮೆ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.


Click it and Unblock the Notifications











