»   » 'ಗರಂ ಮಸಾಲಾ'ದಲ್ಲಿ ನಾಟಿ ಅಡುಗೆ ಜೊತೆ ಗಿರಿಜಾ ಲೋಕೇಶ್ ಘಾಟಿ ಮಾತು

'ಗರಂ ಮಸಾಲಾ'ದಲ್ಲಿ ನಾಟಿ ಅಡುಗೆ ಜೊತೆ ಗಿರಿಜಾ ಲೋಕೇಶ್ ಘಾಟಿ ಮಾತು

Posted By:
Subscribe to Filmibeat Kannada

ಸ್ಟಾರ್ ಸುವರ್ಣ ವಾಹಿನಿ 'ಸೂಪರ್ ಜೋಡಿ' ರಿಯಾಲಿಟಿ ಶೋ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ರಂಜಿಸುತ್ತಿದೆ. ಇವುಗಳ ಜೊತೆಗೆ ಪ್ರತಿ ಶನಿವಾರ ಮತ್ತು ಭಾನುವಾರ 'ಗರಂ ಮಸಾಲಾ' ಎಂಬ ನಾನ್ ವೆಜ್ ಅಡುಗೆ ಕಾರ್ಯಕ್ರಮದ ಮೂಲಕ ಹೊಸ ಬಗೆಯ ಅಡುಗೆಗಳನ್ನು ನಾನ್ ವೆಜ್ ಪ್ರಿಯರಿಗೆ ಪರಿಚಯಿಸಲಿದೆ.

ಅಂದಹಾಗೆ ಪ್ರತಿ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 12.30 ಕ್ಕೆ ಪ್ರಸಾರ ವಾಗುವ ಈ ಕಾರ್ಯಕ್ರಮದಲ್ಲಿ ಬೆಳ್ಳಿತೆರೆಯ ಹಿರಿಯ ಚಿತ್ರನಟಿ ಗಿರಿಜಾ ಲೋಕೇಶ್ ಭಾಗವಹಿಸಲಿದ್ದಾರೆ. ತಮ್ಮ ಕೈಯಾರೆ ನಾಟಿ ಶೈಲಿಯಲ್ಲಿ ಅಡುಗೆಯನ್ನು ತಯಾರಿಸಿ ವೀಕ್ಷಕರಿಗೆ ನಟನೆ ಮಾತ್ರವಲ್ಲ ತಾವು ಅಡುಗೆಯಲ್ಲಿಯೂ ಪರಿಣಿತರು ಎಂಬುದನ್ನು ತೋರಿಸಲಿದ್ದಾರೆ.

Girija Lokesh to Participate in Star Suvarna 'Garam Masala' Non-veg cookery show

'ಗರಂ ಮಸಾಲಾ' ಅಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಿರಿಜಾ ಲೋಕೇಶ್ ಅವರು ಅಡುಗೆ ಜೊತೆಗೆ ಚಿಟ್ ಚಾಟ್ ಇರಲಿ ಎಂದು ತೆರೆ ಮೆರೆಯ ಸವಿನೆನಪುಗಳನ್ನು ಪ್ರತಿ ಸಂಚಿಕೆಯಲ್ಲೂ ಹಂಚಿಕೊಳ್ಳಲಿದ್ದಾರೆ.

ವಿಶೇಷವಾಗಿ 'ಗರಂ ಮಸಾಲಾ' ಕಾರ್ಯಕ್ರಮದಲ್ಲಿ ಕರ್ನಾಟಕದ ಕಾಂಟೆಂಪರರಿ ಚೆಫ್ ಎಂದೇ ಪ್ರಸಿದ್ಧಿಯಾದ ಆನಂದ ದೇಶ ವಿದೇಶಿ ಶೈಲಿಯ ನಾನ್ ವೆಜ್ ಅಡುಗೆ ಮಾಡುವ ವಿಧಾನವನ್ನು ಪರಿಚಯಿಸಲಿದ್ದಾರೆ. ಜೊತೆಗೆ ಬೆಂಗಳೂರಿನ ವಿವಿಧ ಪಂಚತಾರಾ ಹೋಟೆಲ್ ನ ಚೆಫ್ ಗಳು ಭಾಗವಹಿಸಿ ತಮ್ಮ ಕೈಚಳಕವನ್ನು ತೋರಿಸುತ್ತಾರೆ.

Girija Lokesh to Participate in Star Suvarna 'Garam Masala' Non-veg cookery show

ಗಿರಿಜಾ ಲೋಕೇಶ್ ಅವರು ಭಾಗವಹಿಸುವ 'ಗರಂ ಮಸಾಲಾ' ನಾನ್ ವೆಜ್ ಅಡುಗೆ ಕಾರ್ಯಕ್ರಮ ಪ್ರತಿ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 12.30ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.

English summary
Kannada Actress Girija Lokesh to Participate in Star Suvarna 'Garam Masala' Non-veg cookery show

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada