For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ಮನೆಯಲ್ಲಿ ಫುಲ್ ರೊಮ್ಯಾನ್ಸ್‌: ಅತಿಯಾಯ್ತು ಎಂದ ನೆಟ್ಟಿಗರು

  |

  ಇತರೆ ಭಾಷೆಗಳ ಬಿಗ್‌ಬಾಸ್‌ನಲ್ಲಿ ಆಟಗಳು, ಮನೆಯವರ ಪರಸ್ಪರ ಸಂಬಂಧ, ಜಗಳಗಳಿಗೆ ಪ್ರಾಮುಖ್ಯತೆ ಇದ್ದರೆ ಹಿಂದಿ ಬಿಗ್‌ಬಾಸ್‌ ನಲ್ಲಿ ಗ್ಲಾಮರ್‌ ಗೆ ಹೆಚ್ಚಿನ ಪ್ರಾಧಾನ್ಯತೆ.

  ಸಲ್ಮಾನ್ ಖಾನ್ ನಡೆಸಿಕೊಡುವ ಈ ಶೋ ನಲ್ಲಿ ಗ್ಲಾಮರ್‌ಗೆ ವಿಶೇಷ ಆದ್ಯತೆ ನೀಡುತ್ತಾರೆ ಬಿಗ್‌ಬಾಸ್ ಆಯೋಜಕರು.

  ಅಂತರರಾಷ್ಟ್ರೀಯ ಗ್ಲಾಮರ್ ತಾರೆ ಪಮೇಲಾ ಆಂಡರ್ಸನ್ ಅನ್ನು ಕರೆಸಿ ಬಿಗ್‌ಬಾಸ್ ಮನೆಯಲ್ಲಿ ಕುಣಿಸಿದ್ದರು ಒಮ್ಮೆ. ಮತ್ತೊಮ್ಮೆ ನೀಲಿಚಿತ್ರ ತಾರೆ ಸನ್ನಿ ಲಿಯೋನ್ ಮನೆಯೊಳಗೆ ಕರೆಸಿ ಪೋಲ್ ಡಾನ್ಸ್ ಮಾಡಿಸಿದ್ದರು.

  ಈಗ ಮತ್ತೆ ಇಂಥಹುದೇ ರೊಮ್ಯಾಂಟಿಕ್ ಆಂಗಲ್ ತರಲು ಹೋಗಿ ನೆಟ್ಟಿಗರಿಂದ ಸಖತ್ ಆಗಿ ಉಗಿಸಿಕೊಂಡಿದ್ದಾರೆ ಬಿಗ್‌ಬಾಸ್ ಆಯೋಜಕರು.

  ಅತಿಯಾದ ರೊಮ್ಯಾನ್ಸ್ ತೋರಿಸಲಾಗಿದೆ

  ಅತಿಯಾದ ರೊಮ್ಯಾನ್ಸ್ ತೋರಿಸಲಾಗಿದೆ

  ಪ್ರಸ್ತುತ ಪ್ರಸಾರವಾಗುತ್ತಿರುವ ಹಿಂದಿ ಬಿಗ್‌ಬಾಸ್ 14 ಸೀಸನ್‌ನ ಒಂದು ಎಪಿಸೋಡ್‌ ಒಂದರಲ್ಲಿ ತುಸು ಅತಿಯಾಗಿಯೇ ರೊಮಾನ್ಸ್‌ ಸೇರಿಸಲಾಗಿದೆ. ಟಿವಿ ಶೋ ಆದ ಇದನ್ನು ಕುಟುಂಬದವರು ಕುಳಿತು ನೋಡಲು ಸಾಧ್ಯವಾಗದಂತಹಾ ಕೆಲವು ದೃಶ್ಯಗಳು ಎಪಿಸೋಡ್‌ನಲ್ಲಿದ್ದವಂತೆ.

  ಸಿ ಗ್ರೇಡ್ ಸಿನಿಮಾಗಳಿಗೆ ಕಡಿಮೆ ಇಲ್ಲ

  ಸಿ ಗ್ರೇಡ್ ಸಿನಿಮಾಗಳಿಗೆ ಕಡಿಮೆ ಇಲ್ಲ

  ಬಿಗ್‌ಬಾಸ್ ಸ್ಪರ್ಧಿ ಸಿದ್ಧಾರ್ಥ್‌ ಶುಕ್ಲಾ ಅನ್ನು ಬಿಗ್‌ಬಾಸ್ ಮನೆಯ ಇತರೆ ಹೆಣ್ಣು ಮಕ್ಕಳು ಕೆಟ್ಟ ಇಶಾರೆಗಳೊಂದಿಗೆ ಸರಸಕ್ಕೆ ಪ್ರಲೋಭಿಸಿದ್ದಾರೆ. ಯಾವುದೇ ಸಿ ಗ್ರೇಡ್ ಸಿನಿಮಾಗಳಿಗೆ ಕಡಿಮೆ ಇಲ್ಲದಂತೆ ಸಿದ್ಧಾರ್ಥ್ ಶುಕ್ಲಾ ಜೊತೆಗೆ ಯುವತಿಯರು ವರ್ತಿಸಿದ್ದಾರೆ. ಸಿದ್ಧಾರ್ಥ್ ಶುಕ್ಲಾ ಸಹ ಅವರಿಗೆ 'ಸಹಕರಿಸಿದ್ದಾನೆ'.

  ಸಿದ್ಧಾರ್ಥ್ ಶುಕ್ಲಾ ಸುತ್ತಾ ಅಸಭ್ಯವಾಗಿ ಕುಣಿಯ ಯುವತಿಯರು

  ಸಿದ್ಧಾರ್ಥ್ ಶುಕ್ಲಾ ಸುತ್ತಾ ಅಸಭ್ಯವಾಗಿ ಕುಣಿಯ ಯುವತಿಯರು

  ಯುವತಿಯರು ಸಿದ್ಧಾರ್ಥ್ ಶುಕ್ಲಾ ಅನ್ನು ಮೆಚ್ಚಿಸಬೇಕು ಎಂಬ ಟಾಸ್ಕ್ ಅನ್ನು ಬಿಗ್‌ಬಾಸ್ ನೀಡಿದ ಕಾರಣ ಯುವತಿಯರು ಸಿದ್ಧಾರ್ಥ್ ಅನ್ನು ಮೆಚ್ಚಿಸಲು ಲೈಂಗಿಕ ಇಶಾರೆಗಳನ್ನು ಮಾಡುತ್ತಾ, ತೀರಾ ಅಶ್ಲೀಲವಾಗಿ ವರ್ತಿಸಿದ್ದಾರೆ.

  'ಅಶ್ಲೀಲತೆ ಮನರಂಜನೆ ಅಲ್ಲ'

  'ಅಶ್ಲೀಲತೆ ಮನರಂಜನೆ ಅಲ್ಲ'

  ಕಾರ್ಯಕ್ರಮದ ಬಗ್ಗೆ ಬಹು ಕಠುವಾಗಿ ಟ್ವೀಟ್‌ಗಳು ಬಂದಿದ್ದು, 'ಅಶ್ಲೀಲತೆಯನ್ನು ಮನರಂಜನೆ ಎನ್ನಲಾಗುವುದಿಲ್ಲ' ನೀವು ತೋರಿಸುತ್ತಿರುವುದು ಮನರಂಜನೆ ಅಲ್ಲ ಅದು ಅಶ್ಲೀಲತೆ ಎಂದಿದ್ದಾರೆ ನೆಟ್ಟಿಗರು.

  ಬಿಗ್‌ಬಾಸ್ ಅನ್ನು ನಿಷೇಧಿಸಿ

  ಬಿಗ್‌ಬಾಸ್ ಅನ್ನು ನಿಷೇಧಿಸಿ

  ಬಾಯ್‌ಕಾಟ್‌ಬಿಬಿ14 (ಬಿಗ್‌ಬಾಸ್ ಅನ್ನು ನಿಷೇಧಿಸಿ) ಎಂಬ ಹ್ಯಾಷ್‌ಟ್ಯಾಗ್ ಸಹ ಟ್ರೆಂಡ್ ಆಗಿದ್ದು, ಲಕ್ಷಾಂತರ ಮಂದಿ ಇದಕ್ಕೆ ಬೆಂಬಲ ಸಹ ನೀಡಿದ್ದಾರೆ. ಆದರೆ ಇದೆಲ್ಲವೂ ಬಿಗ್‌ಬಾಸ್ ಕಾರ್ಯಕ್ರಮದ ಮೇಲೆ ಏನೂ ಪರಿಣಾಮ ಬೀರುವುದಿಲ್ಲ, ಕಾರಣ ವಿವಾದ ಎಬ್ಬಿಸುವುದೇ ಬಿಗ್‌ಬಾಸ್ ಶೋ ನ ಉದ್ದೇಶ.

  English summary
  Girls seen seducing vulgarly in Bigg Boss 14 recent episode. Netizen trend boycott biggboss14.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X