Jyothi Rai: ಗ್ಲಾಮರ್ ಗೊಂಬೆಯಾದ ಜ್ಯೋತಿ ರೈ, ಫೋಟೋ ನೋಡಿ ಪಡ್ಡೆ ಹುಡುಗರು ಫುಲ್ ಶಾಕ್!

By Poorva

ಕನ್ನಡ ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ಮಿಂಚುತ್ತಿದ್ದ ನಟಿ ಜ್ಯೋತಿ ರೈ.. ಈಗ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ವೆಬ್ ಸಿರೀಸ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅವರು ಕನ್ನಡ ಕಿರುತೆರೆಯಲ್ಲಿ ಅಭಿನಯಿಸಿ ಎಲ್ಲರ ಮನೆ ಮಾತಾಗಿದ್ದಾರೆ.

ನೋಡಲು ಬಹಳ ಮುದ್ದಾಗಿದ್ದಾರೆ. ದಿನ ಕಳೆದಂತೆ ವಯಸ್ಸು ಕಡಿಮೆಯಾದಂತೆ ಕಾಣುತ್ತಿರುವ ಇವರ ಫೊಟೋಗಳನ್ನು ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ. ಸಕತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಇವರ ಸಾಕಷ್ಟು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರ ಮನ ಸೆಳೆಯುತ್ತಿದೆ.

Glamorous Actress Jyothi Rai photos went viral

ಆದರೆ ಜ್ಯೋತಿ ರೈ ಈ ಬೋಲ್ಡ್ ಫೋಟೋಗಳಿಗೆ ಅಭಿಮಾನಿಗಳು ಕಾಮೆಂಟ್ ಮಾಡೋಣ ಅಂದರೆ ಅದು ಸಾಧ್ಯ ಆಗದು ಯಾಕೆಂದರೆ ಜ್ಯೋತಿ ರೈ ಅವರು ಕಾಮೆಂಟ್ ಸೆಕ್ಷನ್ ನನ್ನು ಬಂದ್ ಮಾಡಿದ್ದಾರೆ. ಇನ್ನೂ ಕನ್ನಡ ಕಿರುತೆರೆ ಮೂಲಕ ಪಾದಾರ್ಪಣೆ ಮಾಡಿದ ಜ್ಯೋತಿ ರೈ ಅನೇಕ ಧಾರಾವಾಹಿಗಳಲ್ಲಿ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಕನ್ನಡದ ಬಳಿಕ ತೆಲುಗು ಕಿರುತೆರೆಯಲ್ಲೂ ಸಖತ್ ಮಿಂಚುತ್ತಿರುವ ನಟಿಯ ಹಾಟ್ ಫೋಟೋ ಮಾತ್ರ ವೈರಲ್ ಆಗುತ್ತಿದೆ. ಇನ್ನೂ ಜ್ಯೋತಿ ರೈಗೆ ಮಗನಿದ್ದರೂ ದಿನ ಕಳೆದ ಹಾಗೆ ಆಕೆಯ ಸೌಂದರ್ಯ ಇನ್ನಷ್ಟು ಇಮ್ಮಡಿ ಆಗುತ್ತಲೆ ಇದೆ. ಇದನ್ನು ನೋಡಿದ ಅಭಿಮಾನಿಗಳ ಕಣ್ಣು ಮಾತ್ರ ತಂಪಾಗಿದೆ. ಫೋಟೋಗಳಲ್ಲಿ ಜ್ಯೋತಿ ರೈ ಬಹಳ ಸುಂದರವಾಗಿ ಕಾಣುತ್ತಿದ್ದಾರೆ.

ಜ್ಯೋತಿ ರೈ ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷ್

ನಟಿ ಇತ್ತೀಚಿನ ದಿನಗಳಲ್ಲಿ ಇನ್ಸ್ಟ್ರಾ ಗ್ರಾಂ ನಲ್ಲಿ ಸಖತ್ ಬೋಲ್ಡ್ ಆಗಿ ಇರುವ ಫೋಟೋವನ್ನು ಶೇರ್ ಮಾಡುತ್ತಾ ಇರುತ್ತಾರೆ.. ಹಾಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಕಾಮೆಂಟ್ ಸೆಕ್ಷನ್ ನನ್ನ ಬಂದ್ ಮಾಡಿದ್ದಾರೆ. ತೆಲುಗಿನಲ್ಲಿ ಪ್ರಿಟಿ ಗರ್ಲ್ ಎಂಬ ವೆಬ್‌ ಸಿರೀಸ್‌ನಲ್ಲಿ ಜ್ಯೋತಿ ರೈ ನಟಿಸುತ್ತಿದ್ದು, ಆ ಸೀರೀಸ್‌ಗೆ ಸಂಬಂಧಿಸಿದ ಪೋಟೋಗಳು ಇದು.

Glamorous Actress Jyothi Rai photos went viral

ಹಾಟ್ ಫೋಟೋದಲ್ಲಿ ಮಿಂಚಿದ ನಟಿ

ವೆಬ್ ಸಿರೀಸ್‌ ಬಗ್ಗೆ ಸ್ವತಃ ಜ್ಯೋತಿ ರೈ ಅವರೇ ಹೇಳಿಕೊಂಡಿದ್ದಾರೆ. ಇನ್ನೂ ಸೀರೀಸ್ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಅಪರಾಧ ಹಿನ್ನೆಲೆಯ ಕತೆ ಹೊಂದಿರುವ ವೆಬ್ ಸಿರೀಸ್ ಇದಾಗಿದ್ದು ಜ್ಯೋತಿ ರೈ ಅವರು ಅದ್ಭುತವಾಗಿ ನಟನೆ ಮಾಡಿ ಶಾಕ್ ಎನಿಸಿಕೊಂಡಿದ್ದಾರೆ. ಜ್ಯೋತಿ ರೈಯವರು ಕನ್ನಡದಲ್ಲಿ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿನು ಬಳಂಜ ಅವರ 'ಬಂದೇ ಬರತಾವ ಕಾಲ' ಎಂಬ ಧಾರಾವಾಹಿ ಮೂಲಕ ಜ್ಯೋತಿ ರೈ ಮೊದಲ ಬಾರಿಗೆ ಕನ್ನಡ ಧಾರಾವಾಹಿಯಲ್ಲಿ ಕಾಣಿಸಿಕೊಂಡರು.

ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಜ್ಯೋತಿ

ಈ ಧಾರಾವಾಹಿಯಲ್ಲಿ ಜ್ಯೋತಿ ರೈ ಅವರು ಬಹಳ ಅದ್ಭುತವಾಗಿ ನಟನೆ ಮಾಡಿ ಎಲ್ಲರ ಮನೆ ಮಾತಾಗಿದ್ದರು. ಇವರ ನಟನೆ ನೋಡಿದ ವೀಕ್ಷಕರು ಇವರ ಫ್ಯಾನ್ ಆಗಿದ್ದರು. ಇದಾದ ನಂತರ ಸಾಲು ಸಾಲು ಧಾರಾವಾಹಿಗಳಲ್ಲಿ ನಟನೆ ಮಾಡಿದರು. ಆ ಬಳಿಕ ಅವರು ತೆಲುಗು ಕಿರುತೆರೆಯತ್ತ ಮುಖ ಮಾಡಿದ್ದರು. ಜೋಗುಳ, ಕಿನ್ನರಿ, ಕಸ್ತೂರಿ ನಿವಾಸ, ಜೋ ಜೋ ಲಾಲಿ, ಗೆಜ್ಜೆಪೂಜೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ. ಜ್ಯೋತಿ ರೈ ಸದ್ಯ ತೆಲುಗಿನಲ್ಲಿ 'ಗುಪ್ಪೆದಂಥ ಮನಸು' ಎನ್ನುವ ಧಾರಾವಾಹಿ ಮೂಲಕ ತೆಲುಗು ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.

Glamorous Actress Jyothi Rai photos went viral

ನಿರ್ದೇಶಕ ಸುಕು ಪೂರ್ವಜ್ ಮತ್ತು ಜ್ಯೋತಿ ರೈ

ನಟಿ ಜ್ಯೋತಿ ರೈ ಫೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗು ನಿರ್ದೇಶಕ ಸುಕು ಪೂರ್ವಜ್ ಜೊತೆಗಿನ ಪೋಟೋಗಳನ್ನು ಹಂಚಿಕೊಂಡು ಶಾಕ್ ನೀಡಿದ್ದಾರೆ. ಹಲವು ಫೊಟೋಗಳು ಇಬ್ಬರ ಖಾತೆಯಲ್ಲೂ ಶೇರ್ ಆಗಿವೆ. ಹೀಗಾಗಿ ಇವರಿಬ್ಬರು ಮದುವೆಯಾಗಿದ್ದಾರೆ ಎಂಬ ಊಹಾಪೋಹಾ ಹಬ್ಬಿದೆ.

More from Filmibeat

English summary
Glamorous Actress Jyothi Rai photos went viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X