Golden Gang: ಈ ವಾರದ ಗೋಲ್ಡನ್ ಗ್ಯಾಂಗ್‌ನಲ್ಲಿ ಕಿರುತೆರೆ ನಟ-ನಟಿಯರದ್ದೇ ದರ್ಬಾರ್
ಕಿರುತೆರೆಯ ಮೂಲಕವೇ ನಟರಾಗಿ ಸಿನಿಮಾಗಳಿಗೆ ಎಂಟ್ರಿ ಆಗಿದ್ದ ಗೋಲ್ಡನ್ ಸ್ಟಾರ್ ಗಣೇಶ್, ಮತ್ತೆ ಕಿರುತೆರೆಗಳಲ್ಲಿ ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಿದ್ದಾರೆ. ಕಾಮಿಡಿ ಟೈಮ್, ಸೂಪರ್ ಮಿನಿಟ್ ಸೇರಿದಂತೆ ಕೆಲ ರಿಯಾಲಿಟಿ ಶೋಗಳನ್ನು ಕೂಡ ಗಣೇಶ್ ಈ ಹಿಂದೆ ನಿರೂಪಣೆ ಮಾಡಿದ್ದಾರೆ. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಗೋಲ್ಡನ್ ಗ್ಯಾಂಗ್ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡುತ್ತಿದ್ದಾರೆ.
ಗೆಳೆಯ ಗೆಳತಿಯ ಸ್ನೇಹದ ಸಮ್ಮಿಲನವೇ ಗೋಲ್ಡನ್ ಗ್ಯಾಂಗ್. ನೋವು ನಲಿವಿನಲಿ, ಕಷ್ಟ-ಸುಖಗಳಲ್ಲಿ ಭಾಗಿಯಾದ ಜೀವದ ಗೆಳೆಯರ ಕಾರ್ಯಕ್ರಮ. ಇದರಲ್ಲಿ ಮೋಜು-ಮಸ್ತಿ, ನೋವು-ನಲಿವು, ಆಟ-ತುಂಟಾಟ, ನಗು-ಅಳು ಎಲ್ಲವೂ ಇರಲಿದೆ. ಜನವರಿಯಲ್ಲಿ ಈ ಶೋ ಆರಂಭವಾಗಿದ್ದು ಸುಂದರವಾಗಿ ಮೂಡಿ ಬರುತ್ತಿದೆ.
ಇನ್ನು ಶನಿವಾರ ಹಾಗೂ ಭಾನುವಾರ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ಈ ವಾರ ಕಿರುತೆರೆಯ ನಟ ಹಾಗೂ ನಟಿಯರದ್ದೇ ದರ್ಬಾರು. ನಟಿಯರಾದ ನಮ್ರತಾ ಗೌಡ, ಅನುಪಮಾ ಗೌಡ ರಂಜನಿ ರಾಘವನ್, ನಟ ರಕ್ಷ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇದರ ಕಂಪ್ಲೀಟ್ ಡೀಟೇಲ್ಸ್ ನೋಡೋಣ ಬನ್ನಿ...

ಈ ವಾರದ ಗೋಲ್ಡನ್ ಗ್ಯಾಂಗ್ ನಲ್ಲಿ ನಮ್ರತಾ ಗೌಡ, ಅನುಪಮಾ ಗೌಡ, ರಂಜನಿ ರಾಘವನ್, ನಟ ರಕ್ಷ್ ಹಾಗೂ ಕೆ ಎಸ್ ರಾಮ್ ಜೀ ಅವರು ಭಾಗವಹಿಸಿದ್ದರು. ಸುಮಾರು 6 ವರ್ಷಗಳ ಕಾಲ ಪುಟ್ಟಗೌರಿ ಮದುವೆ ಸೀರಿಯಲ್ ಅದ್ಭುತವಾಗಿ ಮೂಡಿ ಬಂದಿತ್ತು. ರಕ್ಷ್ ಹಾಗೂ ರಂಜನಿ ರಾಘವನ್ ನಾಯಕ-ನಾಯಕಿಯಾಗಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿತ್ತು. ಈ ಧಾರಾವಾಹಿಯ ನಂತರ ಇದರಲ್ಲಿ ನಟಿಸಿದವರೆಲ್ಲಾ ಈಗ ಬೇರೆ ಬೇರೆ ಸೀರಿಯಲ್‌ಗಳಲ್ಲಿ ಮಿಂಚುತ್ತಿದ್ದಾರೆ. ಗೋಲ್ಡನ್ ಗ್ಯಾಂಗ್‌ಗೆ ಬಂದಿರುವ ಅತಿಥಿಗಳಲ್ಲಿ ಅನುಪಮಾ ಗೌಡ ಹೊರತು ಪಡಿಸಿ, ಉಳಿದವರೆಲ್ಲರೂ 'ಪುಟ್ಟಗೌರಿ ಮದುವೆ' ಧಾರಾವಾಹಿಯ ತಂಡದವರು.
ಗೋಲ್ಡನ್ ಗ್ಯಾಂಗ್ ನಲ್ಲಿ ಮನಬಿಚ್ಚಿ ಮಾತನಾಡಿದ ನಟ-ನಟಿಯರು ತಮ್ಮ ಶೂಟಿಂಗ್ ದಿನಗಳ ಬಗ್ಗೆ ಮೆಲುಕು ಹಾಕಿದರು. ಧಾರಾವಾಹಿ ಮುಗಿದೇ ಹಲವು ವರ್ಷಗಳಾದರೂ ಅಂದು ಶುರುವಾದ ಸ್ನೇಹವನ್ನು ಇಂದಿಗೂ ಹಸನಾಗಿಸಿಕೊಂಡಿದ್ದಾರೆ. ಇದರಲ್ಲಿ ಕಿರುತೆರೆಯ ತಾಯಂದಿರು ಆಗಮಿಸಿ ತಮ್ಮ ಕಷ್ಟದ ದಿನಗಳನ್ನು ನೆನೆದು ಕಣ್ಣಿರು ಸುರಿಸಿದ್ದಾರೆ. ನಟ ರಕ್ಷ್ ತನ್ನ ಪ್ರೀತಿಯ ಪತ್ನಿ ಅನುಷಾ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಕೆಲ ಆಟಗಳಾಡಿ, ನಕ್ಕು ನಲಿಸಿದ್ದಾರೆ. ಗೋಲ್ಡನ್ ಗ್ಯಾಂಗ್ ಮನೆಯಲ್ಲಿ ತಮ್ಮ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ಈ ವಾರದ ಗೋಲ್ಡನ್ ಗ್ಯಾಂಗ್ ಶೋ ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸೋದಂತೂ ಗ್ಯಾರೆಂಟಿ.
ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸುವಾಗ ಅತೀ ಹೆಚ್ಚು ಕಣ್ಣೀರು ಹಾಕಿದ್ದ ನೆನಪನ್ನು ರಂಜನಿ ಇಲ್ಲಿ ಸ್ಮರಿಸಿದ್ದಾರೆ. ಕಿರುತೆರೆ ಇತಿಹಾಸದಲ್ಲೇ ರಂಜನಿ ಅತೀ ಹೆಚ್ಚು ಅತ್ತವರು ಎಂದು ರಕ್ಷ್ ಹೇಳಿದರು. ಆಗ ರಂಜನಿ ರಾಘವನ್ ಅವರು ಶೂಟಿಂಗ್ ಸಮಯದ ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಇನ್ನು ರಂಜನಿ ರಾಘವನ್ ಕೇವಲ ಕಿರುತೆರೆಯಲ್ಲಷ್ಟೇ ಅಲ್ಲದೇ, ಸಿನಿಮಾಗಳಲ್ಲೂ ನಟಿಸಿದ್ದಾರೆ. ದಿಗಂತ್ ಜೊತೆಗೆ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಹಾಗೂ 'ಟಕ್ಕರ್' ಸಿನಿಮಾದಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೇ ಇನ್ನೂ ಕೆಲ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಇನ್ನು ಈ ವಾರದ ಗೋಲ್ಡನ್ ಗ್ಯಾಂಗ್ ನಲ್ಲಿ ಯಾವ ರೀತಿಯ ಆಟಗಳಿರುತ್ತವೆ. ಯಾರ ಕಥೆಯೇನು ಎಂದು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.


Click it and Unblock the Notifications











