»   » ಈಟಿವಿ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಸೂಪರ್ ಶೋ

ಈಟಿವಿ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಸೂಪರ್ ಶೋ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಸ್ಟಾರ್ ಗಳಿಗೆ ಈಗ ಕಿರುತೆರೆಯಲ್ಲಿ ಹೊಸ ಕಾಲ ಶುರುವಾಗಿದೆ. ಅದರಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದೇ ಕಿರುತೆರೆಯಿಂದ. ಇದೀಗ ಮತ್ತೆ ಅವರು ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

ಇದೇ ಆಗಸ್ಟ್ 30ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಗಂಟೆಗೆ ಈ ಗೇಮ್ ಶೋ ಆರಂಭವಾಗಲಿದೆ. ಈ ಶೋ ಹೆಸರು 'ಸೂಪರ್ ಮಿನಿಟ್'. ಇಲ್ಲಿ ಒಂದೇ ಒಂದು ನಿಮಿಷ ಬದುಕಿನ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. [ಸುದೀಪ್, ರಮೇಶ್, ಗಣೇಶ್ ಗೆ ನಿರ್ಬಂಧ ಸರಿಯೇ?]

ಈ ಶೋಗೆ ಸಂಬಂಧಿಸಿದ ಪ್ರೊಮೋ ಬಿಡುಗಡೆಯಾಗಿದ್ದು, ಶೋ ಬಗ್ಗೆ ಗಣೇಶ್ ಏನು ಹೇಳ್ತಾರೆ ಬನ್ನಿ ನೋಡೋಣ. ಗಣೇಶ್ ಅವರು ಮಾತಿನಲ್ಲೇ ಮೋಡಿ ಮಾಡುವಂತಹ ಕಲಾವಿದ. ಅವರ ಮಾತುಗಳಿಗೆ ಅದೆಷ್ಟೋ ಮಂದಿ ಹೆಂಗೆಳೆಯರು ಎದುರುನೋಡುತ್ತಿದ್ದಾರೆ.

ಈ ಟೈಮು ಅನ್ನೋದು ಪಕ್ಕಾ 420 ಕಣ್ರಿ

"ಈ ಟೈಮು ಅನ್ನೋದು ಪಕ್ಕಾ 420 ಕಣ್ರಿ. ಗೌರ್ನಮೆಂಟ್ ಆಫೀಸಲ್ಲಿ ಒಂದು ನಿಮಿಷ ಅಂದ್ರೆ ಒಂದು ಗಂಟೆ. ಅದೇ ಹೆಂಡ್ತಿ ಒಂದು ನಿಮಿಷ ಅಂದ್ರೆ ಮುಕ್ಕಾಲು ಗಂಟೆ. ಇನ್ನು ಫೋನ್ ನಲ್ಲಿರೋ ಫ್ರೆಂಡ್ ಒಂದ್ ನಿಮಿಷ ಅಂದ್ರೆ ಕಮ್ಮಿ ಅಂದ್ರು ಅರ್ಧ ಗಂಟೆ...

ಈಗ ನಿಮ್ಮ ಸೂಪರ್ ನಿಮಿಷ ಶುರು

ಬಡ್ಡಿಮಗಂದು ವಾಚ್ ಚೆನ್ನಾಗಿದೆ ಟೈಮ್ ಚೆನ್ನಾಗಿಲ್ಲ ಅಂದ್ಕೋಬೇಡಿ. ನಾನು ಒಂದು ನಿಮಿಷ ಅದು ನಿಮಿಷಾನೂ ಅಲ್ಲ ಅರುವತ್ತೇ ಸೆಕೆಂಡು, ಅದಕ್ಕೇ ಇದು 'ಸೂಪರ್ ಮಿನಿಟ್'. ಈಗ ನಿಮ್ಮ ನಿಮಿಷ ಶುರು" ಎನ್ನುತ್ತಾರೆ ಗೋಲ್ಡನ್ ಸ್ಟಾರ್ ಗಣೇಶ್.

ಸ್ಪರ್ಧಿಗಳಿಗೆ ಒಂದೇ ನಿಮಿಷ ಹಲವಾರು ಸವಾಲುಗಳು

ಈ ಶೋಗೆ ಎನ್ ಬಿಸಿ ಟಿವಿಯ 'ಮಿನಿಟ್ ಟು ವಿನ್ ಇಟ್' ಎಂಬ ಜನಪ್ರಿಯ ಶೋನಿಂದ ಸ್ಫೂರ್ತಿ. ಈ ಕಾರ್ಯಕ್ರಮದ ವಿಶೇಷತೆ ಎಂದರೆ ಒಂದೇ ನಿಮಿಷದಲ್ಲಿ ಸ್ಪರ್ಧಿಗಳು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಸಂಕಷ್ಟದಲ್ಲಿರುವ ಅಭಿಮಾನಿಗಳಿಗೆ ಸಹಾಯ ಮಾಡಲು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತಾರೆ. ಶೋನಲ್ಲಿ ಗೆದ್ದ ಹಣವನ್ನು ಅಭಿಮಾನಿಗಳಿಗೇ ಅರ್ಪಿಸುವುದು ಈ ಕಾರ್ಯಕ್ರಮದ ಮಹತ್ತರ ಉದ್ದೇಶಗಳಲ್ಲಿ ಒಂದು.

ಗಣೇಶ್ ಅಭಿಮಾನಿಗಳ ಕಾತುರದ ನಿರೀಕ್ಷೆ

ವಿವಿಧ ಕ್ಷೇತ್ರಗಳಲ್ಲಿನ ಖ್ಯಾತನಾಮರು ಈ ಶೋನಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಗೆದ್ದ ಬಹುಮಾನದ ಮೊತ್ತ ಸಂಕಷ್ಟದಲ್ಲಿರುವ ಅಭಿಮಾನಿಗಳ ನೆರವಿಗೆ ಬಳಕೆಯಾಗಲಿದೆ ಎನ್ನುತ್ತವೆ ಮೂಲಗಳು. ಈ ಶೋವನ್ನು ಗಣೇಶ್ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುವಂತಾಗಿದೆ.

ಕಿರುತೆರೆಗೆ ರೀ ಎಂಟ್ರಿ ಕೊಡುತ್ತಿರುವ ಗಣೇಶ್

ಈ ಗೇಮ್ ಶೋ ಮೂಲಕ ಶ್ರೀಸಾಮಾನ್ಯನ ಜೀವನವನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದೆ. ಒಂದು ಉತ್ತಮ ಕಾರ್ಯಕ್ರಮದ ಮೂಲಕ ಕಿರುತೆರೆಗೆ ರೀ ಎಂಟ್ರಿ ಕೊಡುತ್ತಿರುವ ಬಗ್ಗೆ ಗಣೇಶ್ ಅವರಿಗೂ ಸಿಕ್ಕಾಪಟ್ಟೆ ಖುಷಿ ಇದೆ.

English summary
Golden Star Ganesh is now back on television, but this time in a different style. The actor will host Etv Kannada's game show 'Super Minute', which will starts from 30th August, 2014 on every Satuday and Sunday at 9 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada