ಗೋಲ್ಡನ್ ಸ್ಟಾರ್ ಗಣೇಶ್ ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್

By ಉದಯರವಿ

'ಕಾಮಿಡಿ ಟೈಮ್' ಮೂಲಕ ಕಿರುತೆರೆಗೆ ಅಡಿಯಿಟ್ಟ ಗಣೇಶ್ ಬೆಳ್ಳಿತೆರೆಯಲ್ಲಿ ಗೋಲ್ಡನ್ ಸ್ಟಾರ್ ಆಗಿ ಬೆಳಗಿದವರು. ಇದೀಗ ಮತ್ತೆ ಕಿರುತೆರೆಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಈಟಿವಿ ಕನ್ನಡದಲ್ಲಿ ಅವರು ಹೊಸ ರೀತಿಯ ಶೋ ನಡೆಸಿಕೊಡಲಿದ್ದಾರೆ.

'ಸೂಪರ್ ಮಿನಿಟ್' ಎಂಬ ಈ ಕಾರ್ಯಕ್ರಮವನ್ನು ಅವರು ನಿರೂಪಿಸಲಿದ್ದು ಶೀಘ್ರದಲ್ಲೇ ಆರಂಭವಾಗಲಿದೆ. ಇದು ಎನ್ ಬಿಸಿ ಟಿವಿಯ 'ಮಿನಿಟ್ ಟು ವಿನ್ ಇಟ್' ಎಂಬ ಜನಪ್ರಿಯ ಶೋನಿಂದ ಸ್ಫೂರ್ತಿ ಪಡೆದಿದೆ. ಈ ಕಾರ್ಯಕ್ರಮದ ವಿಶೇಷತೆ ಎಂದರೆ ಒಂದೇ ನಿಮಿಷದಲ್ಲಿ ಸ್ಪರ್ಧಿಗಳು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. [ಶಶಾಂಕ್ ಆಕ್ಷನ್ ಕಟ್ ನಲ್ಲಿ 'ಮುಂಗಾರು ಮಳೆ 2']

ಸಂಕಷ್ಟದಲ್ಲಿರುವ ಅಭಿಮಾನಿಗಳಿಗೆ ಸಹಾಯ ಮಾಡಲು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತಾರೆ. ಶೋನಲ್ಲಿ ಗೆದ್ದ ಹಣವನ್ನು ಅಭಿಮಾನಿಗಳಿಗೇ ಅರ್ಪಿಸುವುದು ಈ ಕಾರ್ಯಕ್ರಮದ ಮಹತ್ತರ ಉದ್ದೇಶಗಳಲ್ಲಿ ಒಂದು.

ವಿವಿಧ ಕ್ಷೇತ್ರಗಳಲ್ಲಿನ ಖ್ಯಾತನಾಮರು ಈ ಶೋನಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಗೆದ್ದ ಬಹುಮಾನದ ಮೊತ್ತ ಸಂಕಷ್ಟದಲ್ಲಿರುವ ಅಭಿಮಾನಿಗಳ ನೆರವಿಗೆ ಬಳಕೆಯಾಗಲಿದೆ ಎನ್ನುತ್ತವೆ ಮೂಲಗಳು. ಈ ಶೋವನ್ನು ಗಣೇಶ್ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುವಂತಾಗಿದೆ.

ಈ ಗೇಮ್ ಶೋ ಮೂಲಕ ಶ್ರೀಸಾಮಾನ್ಯನ ಜೀವನವನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದೆ. ಒಂದು ಉತ್ತಮ ಕಾರ್ಯಕ್ರಮದ ಮೂಲಕ ಕಿರುತೆರೆಗೆ ರೀ ಎಂಟ್ರಿ ಕೊಡುತ್ತಿರುವ ಬಗ್ಗೆ ಗಣೇಶ್ ಅವರಿಗೂ ಸಿಕ್ಕಾಪಟ್ಟೆ ಖುಷಿ ಇದೆ.

More from Filmibeat

English summary
Golden Star Ganesh is now back on television, but this time in a different style. The actor will host Etv Kannada's game show 'Super Minute', which will starts soon. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X