'ಕಾಮಿಡಿ ಕಿಲಾಡಿಗಳು' ಶೋನಲ್ಲಿ ರಕ್ಷಿತಾ ಜಾಗಕ್ಕೆ ಗಣೇಶ್ ಎಂಟ್ರಿ.!
Recommended Video
ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಸೀಸನ್-3 ಪ್ರಾರಂಭವಾಗಿದೆ. ಇತ್ತೀಚಿಗಷ್ಟೆ ಅದ್ದೂರಿಯಾಗಿ ಪ್ರಾರಂಭವಾಗಿದೆ ಕಾಮಿಡಿ ಕಿಲಾಡಿಗಳು ಮೂರನೆ ಸೀಸನ್. ಕಳೆದ ಎರಡು ಸೀಸನ್ ನಂತೆ ಈ ಸೀಸನ್ ನಲ್ಲಿಯೂ ಜಡ್ಜ್ ಸೀಟಿನಲ್ಲಿ ನಿರ್ದೇಶಕ ಯೋಗರಾಜ್ ಭಟ್, ಜಗ್ಗೇಶ್ ಮತ್ತು ನಟಿ ರಕ್ಷಿತಾ ಕಾಣಿಸಿಕೊಳ್ಳುತ್ತಿದ್ದಾರೆ.
ಆದ್ರೆ ವಿಶೇಷ ಅಂದ್ರೆ ಈಗ ರಕ್ಷಿತಾ ಜಾಗಕ್ಕೆ ನಟ ಗೋಲ್ಡನ್ ಸ್ಟಾರ್ ಗಣೇಶ್ ಎಂಟ್ರಿ ಕೊಟ್ಟಿದ್ದಾರೆ. ಅಂದ್ರೆ ರಕ್ಷಿತಾ ಕಾಮಿಡಿ ಕಿಲಾಡಿಗಳು ಶೋನಿಂದ ಹೊರಬಂದ್ರ ಅಂತ ಅಚ್ಚರಿ ಪಡಬೇಡಿ. ರಕ್ಷಿತಾ ಜಾಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕೂತಿದ್ದಾರೆ ಅಷ್ಟೆ, ರಕ್ಷಿತಾ ಹೊರಹೋಗಿಲ್ಲ. ಕಾರಣ ರಕ್ಷಿತಾ ಅನಾರೋಗ್ಯದ ಕಾರಣ ಈ ವಾರದ ಶೋನಲ್ಲಿ ಹಾಜರಾಗುತ್ತಿಲ್ಲ.
ಹಾಗಾಗಿ ಗೈರಾದ ರಕ್ಷಿತಾ ಜಾಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಕಾಮಿಡಿ ಕಿಲಾಡಿ ಸ್ಪರ್ಧಿಗಳಿಗೆ ಗಣೇಶ್ ಮುಂದೆ ಪರ್ಫಾಮ್ ಮಾಡುವ ಅವಕಾಶ ಸಿಕ್ಕಿದೆ. ಗಣೇಶ್ ಕೂಡ ಕಾಮಿಡಿ ಮೂಲಕವೆ ಕಿರುತೆರೆಯಲ್ಲಿ ಖ್ಯಾತಿಗಳಿಸಿದ್ದರು. ಈಗ ದೊಡ್ಡ ನಟನಾಗಿ ಬೆಳೆದು ನಿಂತಿದ್ದಾರೆ.

ಗಣೇಶ್ ಜಡ್ಜ್ ಆಗಿ ಕೂತಿರುವ ಕಾಮಿಡಿ ಕಿಲಾಡಿಗಳು ಶೋ ಇದೆ ವಾರ 21 ಮತ್ತು 22ರಂದು ಪ್ರಸಾರವಾಗಲಿದೆ. ಸದ್ಯ ಗಣೇಶ್ ಗೀತಾ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈಗಾಗಲೆ ಟ್ರೈಲರ್ ಮತ್ತು ಹಾಡುಗಳ ಮೂಲಕ ಕನ್ನಡ ಚಿತ್ರಾಭಿಮಾನಿಗಳ ಗಮನ ಸೆಳೆದಿರುವ ಗೀತಾ ಇದೆ ತಿಂಗಳು 27ಕ್ಕೆ ತೆರೆಗೆ ಬರುತ್ತಿದೆ.


Click it and Unblock the Notifications











