'ಕನ್ನಡದ ಕೋಟ್ಯಧಿಪತಿ'ಯಲ್ಲಿ ಗಣೇಶ್ ಗೆ ಎದುರಾದ ಪ್ರಶ್ನೆಗಳು

By Bharath Kumar

'ಕನ್ನಡದ ಕೋಟ್ಯಧಿಪತಿ' ಮೂರನೇ ಆವೃತ್ತಿ ಆರಂಭವಾಗಿದ್ದು, ಮೊದಲ ಸೆಲೆಬ್ರಿಟಿ ಸ್ಪರ್ಧಿಯಾಗಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಭಾಗವಹಿಸಿದ್ದಾರೆ.

ಶುಕ್ರವಾರದ ಎಪಿಸೋಡ್ ನಲ್ಲಿ ಗಣಿ ಆಗಮಿಸಿದ್ದರು. ಬಹುಶಃ ಆ ದಿನ ಈ ಕಾರ್ಯಕ್ರಮವನ್ನ ನೋಡದೆ ಇರೋರು ತುಂಬಾ ಜನ ಇರಬಹುದು. ಅಲ್ಲಿ ಮಿಸ್ ಮಾಡಿಕೊಂಡವರು ಗಣೇಶ್ ಎಪಿಸೋಡ್ ಹೇಗಿತ್ತು ಎಂದು ಈ ಸ್ಟೋರಿಯಲ್ಲಿ ಓದಿ ತಿಳಿದುಕೊಳ್ಳಬಹುದು.

ಈಗಾಗಲೇ ಗಣೇಶ್ ಅವರು ಮೊದಲ ಹಂತವನ್ನ ತಲುಪಿದ್ದಾರೆ. ಐದು ಪ್ರಶ್ನೆಗಳಿಗೆ ಉತ್ತರ ಕೊಟ್ಟಿರುವ ಗೋಲ್ಡನ್ ಸ್ಟಾರ್ ಮುಂದಿನ ಹಂತಕ್ಕೆ ಕಾಲಿಟ್ಟಿದ್ದಾರೆ. ಹಾಗಿದ್ರೆ, ಗೋಲ್ಡನ್ ಸ್ಟಾರ್ ಗಣೇಶ್ ಗೆ ಕೇಳಲಾದ ಆ ಪ್ರಶ್ನೆಗಳು ಯಾವುದು.? ಎಂದು ಮುಂದೆ ನೋಡಿ....

ಮೊದಲ ಪ್ರಶ್ನೆ

ಮೊದಲ ಪ್ರಶ್ನೆ

ಈ ಕೆಳಗಿನ ಯಾವ ಪದ ಶುದ್ಧ ಚಿನ್ನವನ್ನ ಸೂಚಿಸುತ್ತದೆ.?
A ಅಪಸ್ವರ
B ಅಪರೂಪ
C ಅಪರಿಚಿತ
D ಅಪರಂಜಿ
ಗಣೇಶ್ ಕೊಟ್ಟ ಉತ್ತರ : D ಅಪರಂಜಿ - ಸರಿಯಾಗಿತ್ತು

ಎರಡನೇ ಪ್ರಶ್ನೆ

ಎರಡನೇ ಪ್ರಶ್ನೆ

ಹಿಂದೂ ಪುರಾಣದ ಪ್ರಕಾರ, ಯಾರು ವಿಷ್ಣುವಿನ ಸ್ತ್ರೀರೂಪ.?
A ಮೋಹಿನಿ
B ಮೇನಕ
C ರಂಭಾ
D ಶಕುಂತಲಾ
ಗಣೇಶ್ ಕೊಟ್ಟ ಉತ್ತರ : A ಮೋಹಿನಿ - ಸರಿಯಾಗಿತ್ತು

ಮೂರನೇ ಪ್ರಶ್ನೆ

ಮೂರನೇ ಪ್ರಶ್ನೆ

ವೃತ್ತಿಪರ ಕುದುರೆ ಸವಾರನನ್ನು ಯಾವ ಹೆಸರಿನಿಂದ ಕರೆಯುತ್ತಾರೆ.?
A ಜಾಗು
B ಜಾಂಬು
C ಜಾಕಿ
D ಜಾಜಿ
ಗಣೇಶ್ ಕೊಟ್ಟ ಉತ್ತರ : C ಜಾಕಿ - ಸರಿಯಾಗಿತ್ತು

ನಾಲ್ಕನೇ ಪ್ರಶ್ನೆ

ನಾಲ್ಕನೇ ಪ್ರಶ್ನೆ

ಈ ಕೆಳಗಿನವುಗಳಲ್ಲಿ ಯಾವುದು ನವರತ್ನಗಳ ಪೈಕಿ ಒಂದು
A ಗೋಮೇಧ
B ಗೋಲಕ
C ಗೋವರ್ಧನ
D ಗೋಮುಖ
ಗಣೇಶ್ ಕೊಟ್ಟ ಉತ್ತರ : A ಗೋಮೇಧ - ಸರಿಯಾಗಿತ್ತು

ಐದನೇ ಪ್ರಶ್ನೆ

ಐದನೇ ಪ್ರಶ್ನೆ

ನಟಿ ಮಾಲಾಶ್ರೀ ಅವರು ಯಾವ ನಾಯಕ ನಟನ ಜೊತೆಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು.?
A ಶಶಿಕುಮಾರ್
B ಸುನೀಲ್
C ರಾಘವೇಂದ್ರ ರಾಜ್ ಕುಮಾರ್
D ಅಂಬರೀಶ್
ಗಣೇಶ್ ಕೊಟ್ಟ ಉತ್ತರ : C ರಾಘವೇಂದ್ರ ರಾಜ್ ಕುಮಾರ್ - ಸರಿಯಾಗಿತ್ತು

English summary
'Kannadada Kotyadhipathi season 3' first celebrity contestant Golden star. ganesh episode will continue on monday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X