ಹಿಂದಿಯ ಜನಪ್ರಿಯ ಟಾಕ್‌ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್!

By ಫಿಲ್ಮಿಬೀಟ್ ಡೆಸ್ಕ್

ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾದಷ್ಟೂ, ಪ್ರಾದೇಶಿಕ ಭಾಷೆಯ ತಾರೆಯರು ಪರಭಾಷೆ, ಪರರಾಜ್ಯಗಳ ಪ್ರೇಕ್ಷಕರು, ಉದ್ಯಮಗಳಿಗೆ ತೆರದುಕೊಳ್ಳಲು ಆರಂಭಿಸಿದ್ದಾರೆ.

ಕನ್ನಡದ ನಟರಿಗೆ ಸಹ ತೆಲುಗು, ತಮಿಳು, ಹಿಂದಿ, ಮಲಯಾಳಂಗಳಲ್ಲಿಯೂ ಗುರುತು ದೊರೆತಿದ್ದು, ಅಲ್ಲಿನ ಚಿತ್ರರಂಗದ ಪರಿಚಯ, ಪ್ರೇಕ್ಷಕರ ಪ್ರೀತಿ ದೊರೆಯಲು ಆರಂಭಿಸಿದೆ.

ಪ್ಯಾನ್ ಇಂಡಿಯಾ ನೆಪದಲ್ಲಿ ಕನ್ನಡದ ನಟರು ಪರಭಾಷೆಗಳ ಟಿವಿ, ಯೂಟ್ಯೂಬ್ ಚಾನೆಲ್‌ಗಳಲ್ಲಿ ಸಂದರ್ಶನಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ನಟ ಸುದೀಪ್, ಯಶ್, ರಿಷಬ್ ಶೆಟ್ಟಿ, ದರ್ಶನ್‌ ಸೇರಿದಂತೆ ಇನ್ನೂ ಕೆಲವರು ಈಗಾಗಲೇ ಪರಭಾಷೆಗಳಲ್ಲಿಯೂ ಸದ್ದು ಮಾಡಿದ್ದು, ಇದೀಗ ಗಣೇಶ್ ಸಹ ಹಿಂದಿ ಭಾಷಿಕ ಸಿನಿಮಾ ಪ್ರೇಮಿಗಳಿಗೆ ಪರಿಚಯವಾಗುವತ್ತ ಗಮನ ಹರಿಸಿದ್ದಾರೆ.

 Golden Star Ganesh Participate As Guest In Kapil Sharma Show

ನಟ ಗಣೇಶ್, ಇದೀಗ ಹಿಂದಿಯ ಜನಪ್ರಿಯ ಟಾಕ್ ಶೋ ಒಂದರಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ! ಹೌದು, ಶಾರುಖ್ ಖಾನ್ ರಿಂದ ಹಿಡಿದು ಬಾಲಿವುಡ್‌ನ ಅತಿರಥ ಮಹಾರಥರ ಸಿನಿಮಾಗಳು ಬಿಡುಗಡೆ ಆದಾಗೆಲ್ಲ ಪ್ರಮೋಷ್‌ಗೆ ಬರುವ ಭಾರಿ ಜನಪ್ರಿಯ ಟಾಕ್‌ಶೋಗೆ ಈಗ ನಟ ಗಣೇಶ್ ಸಹ ಅತಿಥಿಯಾಗಿ ಹೋಗಿದ್ದಾರೆ. ಈ ವಿಷಯವನ್ನು ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಪಿಲ್ ಶರ್ಮಾ ಶೋನಲ್ಲಿ ನಟ ಗಣೇಶ್ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಅವರೇ ಒಂದು ವಿಡಿಯೋವನ್ನು ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ ಗಣೇಶ್ ಮೇಕಪ್‌ ಮಾಡಿಕೊಂಡು ಕಾರು ಹತ್ತಿ ಸೆಟ್‌ ಒಂದಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಜನಪ್ರಿಯ ಕಮಿಡಿಯನ್, 'ಕಪಿಲ್ ಶರ್ಮಾ ಶೋ'ನ ನಾವಿಕ ಕಪಿಲ್ ಶರ್ಮಾ ಅವರನ್ನು ಭೇಟಿಯಾಗಿ ಅವರೊಟ್ಟಿಗೆ ಫೋಟೊ ತೆಗೆಸಿಕೊಂಡಿದ್ದಾರೆ. ಕೊನೆಗೆ 'ಆಸಕ್ತಿಕರವಾದ ವಿಷಯವೊಂದು ಶೀಘ್ರದಲ್ಲಿಯೇ ನಿಮ್ಮ ಮುಂದೆ ಬರಲಿದೆ'' ಎಂದು ಕ್ಯಾಪ್ಷನ್ ಸಹ ನೀಡಿದ್ದಾರೆ ಗಣೇಶ್.

ಕನ್ನಡದ ನಟರೊಬ್ಬರು ಕಪಿಲ್ ಶರ್ಮಾ ಶೋಗೆ ಹೋಗುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ನಟ ಸುದೀಪ್ ಕಪಿಲ್ ಶರ್ಮಾ ಶೋನಲ್ಲಿ ಅತಿಥಿಯಾಗಿ ಹೋಗಿದ್ದರು. ಸುದೀಪ್ ಎರಡು ಬಾರಿ ಕಪಿಲ್ ಶರ್ಮಾಗೆ ಹೋಗಿದ್ದರು. ಒಮ್ಮೆ ಸಲ್ಮಾನ್ ಖಾನ್ ಜೊತೆಗೆ ಮತ್ತೊಮ್ಮೆ ತಮ್ಮ 'ಪೈಲ್ವಾನ್' ಸಿನಿಮಾಕ್ಕಾಗಿ ಸುನಿಲ್ ಶೆಟ್ಟಿ ಜೊತೆಗೆ. RRR ಸಿನಿಮಾ ತಂಡವು ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿತ್ತು.

More from Filmibeat

English summary
Golden star Ganesh to participate as guest in famous Hindi talk show The Kapil Sharma Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X