ನಟಿ ಗೌತಮಿ ಜಾಧವ್ ಮದುವೆ ವಾರ್ಷಿಕೋತ್ಸವದ ಸ್ಪೆಷಲ್ ಫೋಟೋ ನೀವು ನೋಡಲೇಬೇಕು
ಸತ್ಯ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ ನಟಿ ಹೆಸರು ಗೌತಮಿ ಜಾಧವ್. ತೆರೆಮೇಲೆ ಗೌತಮಿ ಅವರನ್ನು ನೋಡೋದಕ್ಕೂ, ತೆರೆ ಹಿಂದೆ ನೋಡೋದಕ್ಕೂ ತುಂಬಾನೇ ವ್ಯತ್ಯಾಸವಿದೆ.
ಗೌತಮಿ ಜಾಧವ್ 'ನಾಗಪಂಚಮಿ' ಎಂಬ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಪಾದರ್ಪಣೆ ಮಾಡಿದರು. ಸತ್ಯ ಧಾರಾವಾಹಿಯಲ್ಲಿ ರಗಡ್ ಲುಕ್ ಮೂಲಕ ಜನಪ್ರಿಯತೆ ಪಡೆದಿರುವ ಗೌತಮಿ ಜಾಧವ್ ಅಭಿನಯಕ್ಕೆ ಮನಸೋಲದವರಿಲ್ಲ.
ಗೌತಮಿ ಜಾಧವ್ ಕೇವಲ ಕಿರುತೆರೆ ನಟಿ ಅಷ್ಟೇ ಅಲ್ಲದೇ, ಬೆಳ್ಳಿತೆರೆಯಲ್ಲೂ ಬಣ್ಣ ಹಚ್ಚಿದ್ದಾರೆ. ಇನ್ನು ಗೌತಮಿ ಜಾದವ್ ತಮ್ಮ ವೆಡ್ಡಿಂಗ್ ಆನಿವರ್ಸರಿಯನ್ನು ತಮ್ಮ ನಾಲ್ಕು ಮಕ್ಕಳೊಂದಿಗೆ ಆಚರಿಸಿಕೊಂಡಿದ್ದಾರೆ.

ಸತ್ಯಳ ವಿವಾಹ ವಾರ್ಷಿಕೋತ್ಸವ
ಗೌತಮಿ ಜಾಧವ್ ಮದುವೆಯಾಗಿ 5 ವರ್ಷವಾಗಿದೆ. ಸದ್ಯ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಅದೂ ಕೂಡ ದಂಪತಿಗಳು ತಮ್ಮ ನಾಲ್ಕು ಮಕ್ಕಳ ಜೊತೆಗೆ. ತುಂಬಾ ಕ್ಯೂಟ್ ಆಗಿರುವಂತಹ ಫೋಟೋವನ್ನು ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಗೌತಮಿ ಜಾಧವ್ ಮಕ್ಕಳು ಎಂದರೆ, ಅವರ ಪ್ರೀತಿಯ ಗೋಲ್ಡನ್ ರಿಟ್ರೀವರ್ ಶ್ವಾನಗಳು. ಶ್ವಾನವನ್ನು ಹೆಚ್ಚಾಗಿ ಪ್ರೀತಿಸುವ ಗೌತಮಿ ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತಾರೆ. ಗೌತಮಿ ಮನೆಯಲ್ಲಿ ನಾಲ್ಕು ಗೋಲ್ಡನ್ ರಿಟ್ರೀವರ್ ಇವೆ. ಇವುಗಳ ಜೊತೆಗೆ ಫೋಟೋ ತೆಗೆಸಿಕೊಂಡು, ತಮ್ಮ ಮದುವೆ ವಾರ್ಷಿಕೋತ್ಸವವನ್ನು ಖುಷಿಯಿಂದ ಆಚರಿಸಿದ್ದಾರೆ. ಇನ್ನು ಈ ನಾಲ್ಕೂ ಶ್ವಾನಗಳಿಗೂ ಹೆಸರಿಟ್ಟಿದ್ದು, ಪ್ರಿನ್ಸಿ, ಕ್ವೀನ್, ಹ್ಯಾಪಿ, ಕಾಫಿ ಎಂದು ಕರೆಯುತ್ತಾರೆ.
ಗೌಥಮಿ ಪತಿ ಸಿನಿಮಾಟೋಗ್ರಫರ್
ಇನ್ನು ಗೌತಮಿ ಮದುವೆಯಾಗಿರುವುದು ಸಿನಿಮಾ ಲೋಕದಲ್ಲಿರುವವರನ್ನೇ. ಆದರೆ ಗೌತಮಿ ಜಾಧವ್ ಪತಿ ನಟರಲ್ಲ. ಬದಲಿಗೆ ಸಿನಿಮಾಟೋಗ್ರಫರ್. ಹೌದು.. ಸಿನಿಮಾಟೋಗ್ರಫರ್ ಅಭಿಷೇಕ್ ಕಾಸರಗೂಡು ಎಂಬುವರನ್ನೇ ಗೌತಮಿ ವಿವಾಹವಾಗಿದ್ದಾರೆ. ಅಭಿಷೇಕ್ 'ಮಾಯಾ ಬಜಾರ್', 'ಅನಂತು ವರ್ಸಸ್ ನುಸ್ರತ್', 'ಆಪರೇಷನ್ ಅಲಮೇಲಮ್ಮ' ಸೇರಿದಂತೆ ಹಲವು ಸಿನಿಮಾಗಳಿಗೆ ಸಿನಿಮಾಟೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಈಗ ಅಭಿಷೇಕ್ ಕೈಯಲ್ಲಿ ಹಲವು ಚಿತ್ರಗಳಿವೆ. ಗೌತಮಿ ಹಾಗೂ ಅಭಿಷೇಕ್ ಇಬ್ಬರೂ ಸಿನಿಮಾ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದಾರೆ.

ಬಣ್ಣದ ಲೋಕದಲ್ಲಿ ಪರಿಚಯ, ಪ್ರೀತಿ
ಗೌತಮಿ ಹಾಗೂ ಅಭಿಷೇಕ್ ಇಬ್ಬರು ಭೇಟಿಯಾಗಿದ್ದು 'ಕಿನಾರೆ' ಸಿನಿಮಾ ಕಚೇರಿಯಲ್ಲಿ. ಗೌತಮಿಗೆ 'ಕಿನಾರೆ' ಸಿನಿಮಾದಲ್ಲಿ ನಟಿಸುವ ಆಫರ್ ಬಂದಿತ್ತು. ಈ ವಿಚಾರವಾಗಿ ಮಾತನಾಡಲು ಕಚೇರಿಗೆ ಹೋಗಿದ್ದರು. ಅಲ್ಲಿ ಅಭಿಷೇಕ್ ಪರಿಚಯವಾಯ್ತು. ಇದಾದ ನಂತರ ಆ ಸಿನಿಮಾ ಕೆಲಸಗಳಿಂದಾಗಿ ನಿತ್ಯ ಇಬ್ಬರೂ ಭೇಟಿಯಾಗುತ್ತಿದ್ದರು. ಅಭಿಷೇಕ್‌ಗೆ ಗೌತಮಿ ಮೇಲೆ ಲವ್ ಆಗಿತ್ತು. ಮೊಬೈಲ್ ಸ್ಕ್ರೀನ್‌ನಲ್ಲಿ ಗೌತಮಿ ಅರ್ಧ ಮುಖವನ್ನು ವಾಲ್ ಪೇಪರ್‌ಗೆ ಹಾಕಿಕೊಂಡಿದ್ದರು. ಇದರ ಬಗ್ಗೆ ತಿಳಿದ ಗೌತಮಿಗೆ ಅದಾಗಲೇ ಕೊಂಚ ಒಲವಾಗಿತ್ತು. ಇಬ್ಬರು ಲವ್ ಪ್ರಪೋಸ್ ಮಾಡುವ ಮುನ್ನವೇ ಮನೆಯಲ್ಲಿ ವಿಷಯ ತಿಳಿಸಿ ಒಪ್ಪಿ ಮದುವೆಯಾದರು.
ಗೌತಮಿ ಅವರು ಪ್ರಾಜೆಕ್ಟ್‌ಗಳು
ಧಾರಾವಾಹಿಗಳಷ್ಟೇ ಅಲ್ಲದೇ ಗೌತಮಿ ಜಾಧವ್ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. 'ಆಪರೇಷನ್ ಅಲಮೇಲಮ್ಮ', 'ಕಿನಾರೆ', 'ಲೂಟಿ', 'ಆದ್ಯ' ಮುಂತಾದ ಸಿನಿಮಾಗಳಲ್ಲಿ ಗೌತಮಿ ಕಾಣಿಸಿಕೊಂಡಿದ್ದಾರೆ. ತಮಿಳಿನ 'ಸಂತೋಸತ್ತಿಲ್ ಕಲವರಂ' ಎಂಬ ಸಿನಿಮಾಗೂ ಬಣ್ಣ ಹಚ್ಚಿದ್ದಾರೆ. ಕಿರಿತೆರೆಯಲ್ಲಿ ನಟಿಸಲು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದ ಗೌತಮಿಗೆ ಸತ್ಯ ಸೀರಿಯಲ್ ಒಳ್ಳೆಯ ಬ್ರೇಕ್ ಕೊಟ್ಟಿದೆ. ಈ ಜೋಡಿಗೆ ನಾಯಿಗಳೆಂದರೆ ತುಂಬಾ ಇಷ್ಟ. ಇಬ್ಬರು ಮನೆಯಲ್ಲಿ ನಾಯಿಗಳನ್ನು ಸಾಕಿದ್ದಾರೆ. ಆಗಾಗ ಈ ಜೋಡಿ ಟ್ರಿಪ್ ಹೋಗಿ ಬರುತ್ತಿರುತ್ತಾರೆ.


Click it and Unblock the Notifications











