Mokshitha Pai: ಮೋಕ್ಷಿತಾ ಪೈ ಮನೆಯಲ್ಲಿ ಹಬ್ಬದ ಸಂಭ್ರಮ, ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್
ಕನ್ನಡ ಕಿರುತೆರೆಯ ಪಾರು ಧಾರವಾಹಿ ಮೂಲಕ ಎಲ್ಲರ ಮನೆ ಮಾತಾದ ನಟಿ ಮೋಕ್ಷಿತಾ ಪೈ. ಇವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುತ್ತಾರೆ. ಯಾವುದಾದರೂ ಉತ್ತಮ ಪ್ರವಾಸಿ ತಾಣಗಳಿಗೆ ಗೆಳೆಯರು ಹಾಗೂ ತನ್ನ ಕುಟುಂಬದ ಜೊತೆ ಅಲ್ಲಿಗೆ ಹೋಗಿ ಎಂಜಾಯ್ ಮಾಡುತ್ತ ಇರುತ್ತಾರೆ.
ಆ ವಿಡಿಯೋ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಇರುತ್ತಾರೆ. ಮೋಕ್ಷಿತಾ ನಗು ಮೊಗದ ಚೆಲುವೆ ಎಂದರೆ ತಪ್ಪಾಗದು. ಪಾರು ಧಾರವಾಹಿ ಈ ನಟಿಗೆ ಹೆಸರನ್ನು ತಂದುಕೊಟ್ಟಿದೆ. ಅಖೀಲಾಂಡೇಶ್ವರಿ ಅವರ ಮುದ್ದಿನ ಸೊಸೆಯಾಗಿ ಇರುವ ಪಾರು ತ್ಯಾಗಮಯಿ. ತನ್ನ ಸ್ವಂತ ಮಗುವನ್ನೇ ಬೇರೆಯವರಿಗೆ ಕೊಡುತ್ತಾಳೆ.

ಆಕೆಗೆ ತನ್ನ ಜೀವನ ಹೇಗೆ ಇದ್ದರೂ ಪರವಾಗಿಲ್ಲ. ಆದರೆ ಬೇರೆಯವರು ಚೆನ್ನಾಗಿ ಇರಬೇಕು ಎಂಬುವುದು ಬಹುದೊಡ್ಡ ಬಯಕೆ ಆಕೆಗೆ. ಆದರೆ ಆಕೆಯ ಗಂಡನಿಗೆ ಈ ವಿಚಾರ ಆತನ ಮಾವನ ಮೂಲಕ ತಿಳಿದಿದೆ. ಇನ್ನೂ ಮೋಕ್ಷಿತ ನಟನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ . ಬಹಳ ಶ್ರದ್ಧೆಯಿಂದ ಇರುವ ಇವರು ಮನೆಯಲ್ಲಿ ಕೂಡ ಅಷ್ಟೇ ಪ್ರೀತಿಯಿಂದ ಇರುತ್ತಾರೆ.
ಅಮ್ಮನ ರೀತಿ ತಮ್ಮನ ಆರೈಕೆ
ಮೋಕ್ಷಿತಾಗೆ ತನ್ನ ತಮ್ಮ ಎಂದರೆ ಬಹಳ ಪ್ರೀತಿ. ಆಕೆ ತಮ್ಮನನ್ನು ಅಮ್ಮನ ರೀತಿ ನೋಡಿಕೊಳ್ಳುತ್ತಾರೆ. ಇನ್ನೂ ಮೋಕ್ಷಿತಾ ಪೈ ಮನೆಯಲ್ಲಿ ಅದ್ಧೂರಿಯಾಗಿ ಗೌರಿ ಗಣೇಶ ಹಬ್ಬವನ್ನು ಆಚರಣೆ ಮಾಡಿದ್ದಾರೆ. ದೇವರಿಗೆ ನೈವೇದ್ಯ ಇಟ್ಟು, ಹೂವುಗಳಿಂದ ಅಲಂಕಾರ ಮಾಡಿ ಪೂಜೆ ಮಾಡಿದ್ದಾರೆ ಮೋಕ್ಷಿತಾ. ನಟಿ ಮೋಕ್ಷಿತಾ ಪೈ ಮನೆಯಲ್ಲಿ ಪೂಜೆ ಮಾಡುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೋಕ್ಷಿತಾ ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷ್
ಫೋಟೋಗಳನ್ನು ಹಂಚಿಕೊಂಡಿರುವ ನಟಿ ಮೋಕ್ಷಿತಾ ಪೈ ಅದರ ಜೊತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.. ನಮ್ಮ ಮನೆಯ ಗೌರಿ ಪೂಜೆ ಎಂದು ಬರೆದುಕೊಂಡು ಇದ್ದಾರೆ. ಸಾಂಪ್ರದಾಯಿಕವಾಗಿ ಸೀರೆಯಲ್ಲಿ ಕಾಣಿಸಿಕೊಂಡಿರುವ ನಟಿ. ನೋಡಲು ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ನಟಿಯನ್ನು ಸೀರೆಯಲ್ಲಿ ನೋಡಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಮೋಕ್ಷಿತಾ ನೋಡಲು ಮುದ್ದು ಮುದ್ದಾಗಿದ್ದು ಎಲ್ಲರ ಗಮನ ಸೆಳೆದಿದ್ದಾರೆ.

ಮುಗ್ಧ ಮನಸ್ಸಿನ ಚೆಲುವೆ ಪಾರು
ಇನ್ನೂ ಪಾರು ಧಾರಾವಾಹಿಯಲ್ಲಿ ಮುಗ್ಧ ಮನಸ್ಸಿನ ಮುದ್ದು ಚೆಲುವೆಯಾಗಿ ಕಾಣಿಸಿಕೊಂಡಿದ್ದಾರೆ ಮೋಕ್ಷಿತಾ ಪೈ. ನೋಡುಗರನ್ನು ಥಟ್ಟನೆ ಸೆಳೆಯುವ ನೋಟ, ನಗುಮೊಗದ ಚೆಲುವೆ. ಇನ್ನೂ ಮೋಕ್ಷಿತ ಮನೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದು ನೋಡುಗರ ಮನಸ್ಸನ್ನು ಸೆಳೆಯುತ್ತಿದ್ದಾರೆ. ಗೌರಿ ಗಣೇಶ ದೇವರಿಗೆ ಪೂಜೆ ಸಲ್ಲಿಸಿದ ನಟಿ ಹಬ್ಬದ ಖುಷಿಯಲ್ಲಿ ಇದ್ದಾರೆ.
ಸೀರೆಯುಟ್ಟು ದೇವರಿಗೆ ಪೂಜೆ ಮಾಡುತ್ತಿರುವ ಫೋಟೋ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಈ ಫೋಟೋಗೆ ಸಾಕಷ್ಟು ಅಭಿಮಾನಿಗಳು ಲೈಕ್ ಕಾಮೆಂಟ್‌ಗಳನ್ನ ಮಾಡಿದ್ದಾರೆ. ಕೆಂಪು - ಗುಲಾಬಿ ಮಿಶ್ರಿತ ಸೀರೆಯಲ್ಲಿ , ಸ್ಲಿವ್ ಲೆಸ್ ಬೌಸ್ ಧರಿಸಿರುವ ಅವರು ಸರಳ ಸುಂದರಿಯಂತೆ ಕಾಣುತ್ತಿದ್ದಾರೆ.


Click it and Unblock the Notifications











