Gowri-Ganesha: 'ಪುಣ್ಯವತಿ' ಸೆಟ್‌ನಲ್ಲಿ ಗಣೇಶ ಸಂಭ್ರಮ .. ನಂದನ್-ಪದ್ಮಿನಿ ಮೇಲೆ ಎಲ್ಲರ ಕಣ್ಣು!

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ ಬರುತ್ತಿರುವ 'ಪುಣ್ಯವತಿ'ಯಲ್ಲಿ ಹೊಸ ಹೊಸ ಟ್ವಿಸ್ಟ್ ಕೊಡುತ್ತಿದೆ. ಪ್ರೀತಿ ಮಾಡಿದ ಹುಡುಗಿ ಪದ್ಮಿನಿ. ಆದರೆ ನಂದನ್ ತಾಳಿ ಕಟ್ಟಿರುವುದು ಪೂರ್ವಿಗೆ. ಹೀಗಾಗಿ ಈ ತಾಳಿಯನ್ನು ತೆಗೆದು ಮತ್ತೆ ಪದ್ಮಿನಿಗೆ ಕಟ್ಟಬೇಕು ಎಂಬುದೇ ನಂದನ್ ಮನದಾಸೆ. ಆದರೆ, ಆ ತಾಳಿಯನ್ನು ತೆಗೆಯುವುದು ಅಷ್ಟು ಸಲೀಸು ಅಲ್ಲ.

ನಂದನ್ ಮತ್ತು ಪದ್ಮಿನಿಗೆ ಸಹಾಯ ಮಾಡಲೆಂದೇ ಚಿನ್ನು ಮತ್ತು ಗೊಂಬೆ ಬಂದಿದ್ದಾರೆ. ಅವರ ಜೀವನದಲ್ಲೂ ಇಂಥದ್ದೇ ಆಗಿದೆ. ಆದರೆ, ಅದು ಗೊಂಬೆಗೆ ತಿಳಿದಿಲ್ಲ. ಈಗ ನಂದನ್ ಮತ್ತು ಪದ್ಮಿನಿಯನ್ನು ಒಂದು ಮಾಡಲು ಹೊರಟಿದ್ದಾರೆ. ಮನೆಯಲ್ಲಿ ಗಣೇಶೋತ್ಸವದ ಸಂಭ್ರಮಕ್ಕೆ ಎಲ್ಲರು ಸಾಕ್ಷಿಯಾಗಿದ್ದಾರೆ.

gowri-ganesh-festival-punyavathi-serial

'ಪುಣ್ಯವತಿ' ಸೆಟ್‌ನಲ್ಲಿ ಗಣೇಶೋತ್ಸವ

ನಾಳೆ ಅಂದರೆ ಸೆ.18ಕ್ಕೆ ರಾಜ್ಯಾದ್ಯಂತ ಅದ್ದೂರಿ ಗಣೇಶೋತ್ಸವ ನೆರವೇರಲಿದೆ. ಕೆಲವೊಂದು ಕಡೆ 19 ರಂದು ಗಣೇಶನನ್ನು ಕೂರಿಸುತ್ತಾರೆ. ಇತ್ತೀಚೆಗೆ ಧಾರಾವಾಹಿಗಳ ಜಮಾನವೂ ಬದಲಾಗಿದೆ. ಪ್ರತಿಯೊಂದು ಹಬ್ಬವನ್ನು ಧಾರಾವಾಹಿಗಳಲ್ಲಿ ಅದ್ದೂರಿಯಾಗಿ ಆಚರಿಸುತ್ತಾರೆ. ಹಬ್ಬದೂಟ ಮಾಡುತ್ತಾರೆ. ಈಗ ಗಣೇಶನ ಹಬ್ಬವನ್ನು 'ಪುಣ್ಯವತಿ' ಸೆಟ್‌ನಲ್ಲಿ ಆಚರಣೆ ಮಾಡಲಾಗುತ್ತಿದೆ. ಆ ಎಪಿಸೋಡಿನ ಒಂದು ಸಣ್ಣ ಝಲಕ್ ಅನ್ನು ಪದ್ಮಿನಿ ಅಲಿಯಾಸ್ ಪ್ರಿಯಾಂಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಗಣೇಶನ ಮುಂದೆ ಫ್ಯಾಮಿಲಿ ಡ್ಯಾನ್ಸ್

'ಪುಣ್ಯವತಿ' ಸೆಟ್‌ನಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ಬೇರೆ ಧಾರಾವಾಹಿಗಳಲ್ಲಿ ಮನೆಯೊಳಗೆ ಅಥವಾ ಊರೊಳಗೆ ಗಣಪತಿ ಇಟ್ಟು ಪೂಜಿಸುವ ದೃಶ್ಯವನ್ನು ನೋಡಿದ್ದೇವೆ. ದೊಡ್ಡ ಮನೆತನ ಎಂದೇ ಧಾರಾವಾಹಿಯಲ್ಲಿ ತೋರಿಸಲಾಗಿದೆ. ಅದಕ್ಕೆ ತಕ್ಕನಾಗಿಯೇ ಅದ್ದೂರಿ ಸೆಟ್ ಹಾಕಿ, ಗಣಪನನ್ನು ಕೂರಿಸಲಾಗಿದೆ. ಈ ವೇಳೆ ಇಡೀ ತಂಡದವರು ಸೇರಿ ರೀಲ್ಸ್ ಮಾಡಿದ್ದಾರೆ. ಅನಿರುದ್ಧ್ ಹಾಗೂ ರಕ್ಷಿತಾ ಅವರ 'ನೀನೆಲ್ಲೋ ನಾನಲ್ಲೆ' ಸಿನಿಮಾದ ಸಂಥಿಂಗ್ ಸಂಥಿಂಗ್ ಹಾಡಿಗೆ ಎಲ್ಲೂ ಹೆಜ್ಜೆ ಹಾಕಿದ್ದಾರೆ. 'ನಮ್ಮ ಸೀರಿಯಲ್‌ನಲ್ಲಿ ಸಂಥಿಂಗ್ ಸಂಥಿಂಗ್' ಅಂತ ಕ್ಯಾಪ್ಶನ್ ಹಾಕಿದ್ದಾರೆ.

ಪದ್ಮಿನಿ ಲುಕ್‌ಗೆ ಫಿದಾ ಆದ ಮಂದಿ

ಹಬ್ಬ ಅಂದ್ರೆ ಕೇಳಬೇಕಾ. ಅಂದ ಚಂದವಾಗಿ ರೆಡಿಯಾಗಲೇಬೇಕು. ಎಲ್ಲರೂ ಸ್ಪೆಷಲ್ ಆಗಿ ರೆಡಿ ಆಗಿ ಡ್ಯಾನ್ಸ್ ಮಾಡಿದ್ದಾರೆ. ಆದರೆ, ನೆಟ್ಟಿಗರ ಕಣ್ಣು ಬಿದ್ದಿರುವುದು ಮಾತ್ರ ನಂದನ್ - ಪದ್ಮಿನಿ ಮೇಲೆ. ಪದ್ಮಿನಿ ಹಸಿರು ಬಣ್ಣದ ಸೀರೆಯುಟ್ಟು, ಮಲ್ಲಿಗೆ ದಿಂಡನ್ನು ಮುಡಿದಿದ್ದಾರೆ. ಇನ್ನು ನಂದನ್ ಗೋಲ್ಡನ್ ಕಲರ್‌ನ ಜುಬ್ಬಾ ಪೈಜಾಮ್ ತೊಟ್ಟಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ ಪದ್ಮಿನಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಪದ್ಮಿನಿ ಪ್ರೀತಿ ಉಳಿಸುತ್ತಾರಾ ಚಿನ್ನು -ಗೊಂಬೆ

ನಂದನ್ ತನ್ನ ಪ್ರೀತಿ ಉಳಿಸಿಕೊಳ್ಳುವುದಕ್ಕೆ ಸಾಕಷ್ಟು ಹೋರಾಟ ಮಾಡಿದ್ದ. ಪದ್ಮಿನಿ ತಾಳಿಗೆ ಬೆಲೆ ಕೊಟ್ಟು ಈ ಜೀವನ ಪೂರ್ವಿಗೆ ಸಿಗಬೇಕು ಎಂದು ಮನೆ ಬಿಟ್ಟು ಹೋಗಿದ್ದಳು. ಸದ್ಯ ಪ್ರೀತಿ ಅರ್ಥವಾಗಿ ಮತ್ತೆ ಮನೆಗೆ ಬಂದ ಮೇಲೆ, ಅಮ್ಮಾಜಿ ಬೇರೆಯದ್ದೇ ನಿರ್ಧಾರ ತೆಗೆದುಕೊಂಡಿದ್ದರು. ಇದನ್ನು ಪರಿಹಾರ ಮಾಡುವುದಕ್ಕೆ ಈಗ ಚಿನ್ನು ಮತ್ತು ಗೊಂಬೆ ಬಂದಿದ್ದಾರೆ. ಅಮ್ಮಾಜಿಯ ನಿರ್ಧಾರವನ್ನು ಬದಲಾಯಿಸಿ ಆಗಿದೆ. ಆದರೆ ಇದರ ನಡುವೆ ಪೂರ್ವಿ ಬೇರೆಯದ್ದೇ ರೀತಿ ಆಡುತ್ತಿದ್ದಾಳೆ. ಅಕ್ಕನ ಜೀವನಕ್ಕಿಂತ ಅವಳು ಬಯಸುವ ಹುಡುಗನನ್ನೇ ಬಯಸುತ್ತಿದ್ದಾಳೆ. ಇದು ನಂದನ್ ಮತ್ತು ಪದ್ಮಿನಿಯ ಜೀವನದ ಪ್ರಶ್ನೆಯಾಗಿದೆ.

More from Filmibeat

English summary
Gowri-Ganesha festival celebration in Punyavathi serial set
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X