Gowri Shankara: ಗೌರಿ ಮಾತಾಡೋದು ಯಾವಾಗ..? ಅನ್ಯಾಯ ಮೆಟ್ಟಿ ನಿಲ್ಲುವ ಸಮಯಕ್ಕಾಗಿ ವೀಕ್ಷಕರ ಕಾತರ!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತಿಚೆಗಷ್ಟೇ ಗೌರಿ ಶಂಕರ ಧಾರಾವಾಹಿ ಆರಂಭವಾಗಿದೆ. ಇದು ಗೌಡನ ಮನೆಯಲ್ಲಿ ನಡೆಯುವ ಹಲವು ರೀತಿಯ ಕಥೆ. ಗೌರಿ ಶಂಕರಿಗೆ ಹೆಂಡತಿಯಾದರೆ, ಶಂಕರನ ತಂಗಿ ಗೌರಿ ಮನೆಗೆ ಸೊಸೆಯಾಗಿ ಹೋಗಿದ್ದಾಳೆ. ಐಶ್ವರ್ಯಾಳಿಂದ ಗೌರಿಯ ತವರಲ್ಲಿ ನೆಮ್ಮದಿಯೇ ಇಲ್ಲದಂತೆ ಆಗಿದ್ದರೆ, ಇಲ್ಲಿನ ಶಂಕರನ ಅವ್ವನಿಂದ ಗೌರಿಗೆ ನೆಮ್ಮದಿ ಇಲ್ಲದಂತೆ ಆಗಿದೆ.
ಶಂಕರನ ಅವ್ವ ಸಿಕ್ಕಾಪಟ್ಟೆ ಘಾಟಿ. ತನ್ನ ಗಂಡನಿಗೆ ಬಿಟ್ಟರೆ ಬೇರೆ ಯಾರಿಗೂ ನಿಧಾನವಾಗಿ, ಸಮಾಧಾನವಾಗಿ ಮಾತನಾಡಿದ್ದೇ ಇಲ್ಲ. ಅವಳು ಒಂದೊಂದು ಮಾತು ಆಡುತ್ತಿದ್ದರೆ ಎದುರಿಗಿದ್ದವರು ಗಢಗಢ ಅಂತ ನಡುಗಬೇಕು, ಕಿವಿ ಮುಚ್ಚಿಕೊಂಡು ಓಡಿ ಹೋಗಬೇಕು ಅಷ್ಟು ಘಾಟಿಯಾಗಿ ಮಾತನಾಡುತ್ತಾಳೆ.

ಐಶ್ವರ್ಯಾ ನಾಟಕ
ಐಶ್ಚರ್ಯಾ ಹಾಗೂ ಗೌರಿ ಇಬ್ಬರದ್ದು ಒಂದೇ ಸಮಯಕ್ಕೆ ಮದುವೆಯಾಗಿದೆ. ಇಬ್ಬರು ಸೊಸೆಯಂದಿರು ತವರು ತೊರೆದು ಗಂಡನ ಮನೆಗೆ ಹೋಗಿದ್ದಾರೆ. ಗೌರಿ, ಹೊಸ ಮನೆಯ ಸಂಪ್ರದಾಯ, ಜನಗಳಿಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುವುದಕ್ಕೆ ಅಭ್ಯಾಸ ಮಾಡಿಕೊಂಡರೆ, ಐಶ್ವರ್ಯಾ ಎಲ್ಲದನ್ನು ಉಲ್ಟಾ ಮಾಡಿದ್ದಾಳೆ. ತವರು ಮನೆಯಲ್ಲಿ ಇದ್ದಷ್ಟೇ ರಫ್ ಆಗಿ ಇದ್ದಾಳೆ. ಎಲ್ಲರ ಮೇಲೂ ರೇಗಾಡಿಕೊಂಡು, ಕೂಗಾಡಿಕೊಂಡು ಇದ್ದಳು. ಈಗ ತವರು ಮನೆಗೆ ಬಂದು, ಇಲ್ಲಿಯೂ ರಂಪಾಟ ಶುರು ಮಾಡಿದ್ದಾಳೆ.
ಮನೆಯವರ ಮುಂದೆ ಐಸೂ ರಂಪಾಟ
ಐಶ್ವರ್ಯಾಗೆ ಇಬ್ಬರು ಅತ್ತಿಗೆಯಂದಿರು. ಸೊಸೆಯಂದಿರು ಹೇಳಿದ ಮಾತನ್ನು ಕೇಳಿಕೊಂಡು, ಅಡುಗೆ ಮನೆ ಕೆಲಸ ಮಾಡಿಕೊಂಡು ಬಿದ್ದಿರಬೇಕು. ಅದು ಗೌರಿಯ ಅತ್ತೆಯ ಮನೆಯವರು ನಡೆಸಿಕೊಂಡು ಬಂದಿರುವ ಪ್ರಾಬಲ್ಯ. ಕೆಲವೊಂದು ಸಲ ಗೌರಿಗೂ ಅದೇ ಆಗಿದೆ. ಆದರೆ ಶಂಕರ ಅಂಥ ಸಮಯದಲ್ಲಿ ಜೊತೆಗೆ ನಿಂತಿದ್ದಾನೆ. ಈಗ ಐಶ್ವರ್ಯಾ, ತನ್ನ ಅತ್ತಿಗೆ ಗೌರಿಯನ್ನು ಎಳೆದುಕೊಂಡು, ಮನೆಯಿಂದ ಹೊರಗೆ ಹಾಕಲು ಹೋಗಿದ್ದಾಳೆ.
ಗೌರಿ ಮೇಲೆ ಕೈ ಎತ್ತಲು ಹೋದ ರುದ್ರ
ಐಶ್ವರ್ಯಾ ಹುಚ್ಚಾಟಕ್ಕೆ ದೇವರೆ ಶಿಕ್ಷೆ ಕೊಟ್ಟಿದ್ದಾನೆ. ಗೌರಿಯನ್ನು ಎಳೆದು, ನೂಕಲು ಹೋದಾಗ ಆಯತಪ್ಪಿ ಐಶ್ವರ್ಯಾಳೆ ಗೋಡೆಗೆ ಹಣೆ ಹೊಡೆದುಕೊಂಡಿದ್ದಾಳೆ. ಅದು ರಕ್ತ ಬಂದಿದ್ದೆ ತಡ, ಜೋರಾಗಿ ಕಿರುಚುತ್ತಾ, ಇಡಿ ಮನೆಯವರನ್ನು ಕರೆದಿದ್ದಾಳೆ. ಮನೆಯವರ ಮುಂದೆ ಗೌರಿಯೇ ತನಗೆ ಹೊಡೆದಿದ್ದು ಎಂದು ನಾಟಕವಾಡಿದ್ದಾಳೆ.

ರುದ್ರನನ್ನು ತಡೆದ ಶಂಕರ
ಮೊದಲೇ ಘಾಟಿ ಅತ್ತೆ ಕೇಳಬೇಕಾ. ಮಗಳನ್ನು ವಹಿಸಿಕೊಂಡು ಬಾಯಿಗೆ ಬಂದ ಹಾಗೇ ಬೈದಿದ್ದಾಳೆ. ಅದೇ ಸಮಯಕ್ಕೆ ಅಲ್ಲಿಗೆ ಇನ್ನೊಬ್ಬ ಅಣ್ಣಯ್ಯ ಬೇರೆ ಬಂದಿದ್ದಾನೆ. ತಂಗ್ಯಮ್ಮ ಹೇಳುತ್ತಿರುವುದೆಲ್ಲಾ ಸತ್ಯ ಎಂದುಕೊಂಡು, ರುದ್ರ, ತನ್ನ ಪ್ರತಾಪ ತೋರಿಸಲು ಹೋಗಿದ್ದಾನೆ. ಗೌರಿಯ ಮೇಲೆ ಕೈ ಮಾಡಲು ಹೋಗಿದ್ದಾನೆ. ತಕ್ಷಣ ಬಂದ ಶಂಕರ, ರುದ್ರನನ್ನು ತಡೆದು ಎಚ್ಚರಿಕೆ ನೀಡಿದ್ದಾನೆ.
ಗೌರಿ ಮಾತನಾಡುವಂತೆ ಪ್ರೇಕ್ಷಕರ ಒತ್ತಾಯ
ಹೆಣ್ಣು ಮಕ್ಕಳು ಸ್ಟ್ರಾಂಗ್ ಆಗಿನೇ ಇರಬೇಕು. ಗಂಡನ ಮನೆಯವರು, ಗಂಡನಿಗೆ ಗೌರವ ಕೊಡಬೇಕು, ಪ್ರೀತಿ ನೀಡಬೇಕು. ಅದು ಆ ಕಡೆಯಿಂದಾನೂ ಅಷ್ಟೇ ಗೌರವಯುತವಾಗಿದ್ದಾಗ. ಆದರೆ ಅವರು ದಬ್ಬಾಳಿಕೆ ನಡೆಸುತ್ತಿರುವಾಗ ಇಷ್ಟೊಂದು ಸಹಿಸಿಕೊಂಡು, ಏನು ಮಾತನಾಡದೆ ಇದ್ದರೆ ಹೇಗೆ ಎಂಬುದು ನೋಡುಗರ ಪ್ರಶ್ನೆ. ಕೆಲವೊಂದು ಸಲವಷ್ಟೇ ಗೌರಿ ಧ್ವನಿ ಎತ್ತುತ್ತಾಳೆ. ಆದರೆ ಅನ್ಯಾಯವಾದಗಾ ಮೊದಲು ಧ್ವನಿ ಎತ್ತಿ ಎನ್ನುತ್ತಿದ್ದಾರೆ ಗೌರಿ ಶಂಕರನ ಅಭಿಮಾನಿಗಳು. ದಬ್ಬಾಳಿಕೆ ನಡೆಸುವ ಅತ್ತೆಯ ಸೊಕ್ಕನ್ನು ಗೌರಿ, ಯಾವಾಗ ಮುರಿಯುತ್ತಾಳೆ ಎಂದೇ ಎಲ್ಲರೂ ಕಾಯುತ್ತಿದ್ದಾರೆ.


Click it and Unblock the Notifications











