For Quick Alerts
  ALLOW NOTIFICATIONS  
  For Daily Alerts

  ಸುವರ್ಣ ನ್ಯೂಸ್ ಗೆ ಗೌರೀಶ್ ಅಕ್ಕಿ ರಾಜೀನಾಮೆ

  By Rajendra
  |
  ಪತ್ರಕರ್ತ ಗೌರೀಶ್ ಅಕ್ಕಿ ಅವರು ಸುವರ್ಣ ಸುದ್ದಿ ವಾಹಿನಿಗೆ ರಾಜೀನಾಮೆ ಪತ್ರ ಕೊಟ್ಟಿದ್ದಾರೆ. ಮುಂದಿನ ಅವರ ಹಾದಿ ಬೆಳ್ಳಿಪರದೆಯತ್ತ ಸಾಗಿದೆ. ಈಗವರು ಸಿನಿಮಾ ನಿರ್ದೇಶನಕ್ಕೆ ಕೈಹಾಕಿದ್ದು ಅವರ ನಿರ್ದೇಶನದ ಚಿತ್ರ ಜುಲೈನಲ್ಲಿ ಸೆಟ್ಟೇರಲಿದೆ.

  ತಮ್ಮ ಫೇಸ್ ಬುಕ್ ಖಾತೆಯಲ್ಲಿ ಒಂದು ಸಂದೇಶವನ್ನೂ ಹಾಕಿದ್ದಾರೆ ಓದಿ. "ಲೈಫು ಹಾಗೇನೆ.....ನನ್ನ ಮೂರು ವರ್ಷ , ಮೂರು ತಿಂಗಳ ವೃತ್ತಿ ಸಂಗಾತಿ ಸುವರ್ಣ ನ್ಯೂಸ್ ಗೆ ಈಗ ವಿದಾಯ ಹೇಳೋ ಸಮಯ....

  ಹೌದು ,ಇಂದು ಸುವರ್ಣ ನ್ಯೂಸ್ ನಲ್ಲಿ ನನ್ನ ಕೊನೆ ದಿನ..ನಿನ್ನೆ ಪ್ರಸಾರಗೊಂಡ ಬುಲ್ ಬುಲ್ ಕಾರ್ಯಕ್ರಮ ಇಲ್ಲಿ ನನ್ನ ಮಾಡಿರೋ ಕೊನೆ ಕಾರ್ಯಕ್ರಮ...ಮುಂದೆ ಏನು, ಎತ್ತ.. ಸದ್ಯಕ್ಕೆ ಎಲ್ಲೂ ಇಲ್ಲ...ಸುಮಾರು 14 ವರ್ಷಗಳ ನ್ಯೂಸ್ ಜೀವನಕ್ಕೆ ಸದ್ಯಕ್ಕೆ ವಿರಾಮ...

  ಕೆಲವೊಂದು ಕನಸುಗಳಿವೆ, ಬೆನ್ನಟ್ಟಿ ಹೋಗಬೇಕಾಗಿದೆ..ಇರುವುದೊಂದೆ ಜೀವನ..ಶೋಧಿಸಬೇಕಾಗಿದೆ.. ನಾನೆಲ್ಲೆ ಹೋದರೂ ಫೇಸ್ ಬುಕ್ ಮೂಲಕ ನಿಮ್ಮ ಜೊತೆಗೆ ಇದ್ದೆ ಇರುತ್ತೇನೆ....ಸ್ಪಂದನೆಗೆ ಧನ್ಯವಾದ.. ನನ್ನ ಮುಂದಿನ ಎಲ್ಲ ಯೋಜನೆಗಳಿಗೆ, ಕನಸುಗಳಿಗೆ ನಿಮ್ಮ ಶುಭ ಹಾರೈಕೆ ಸದಾ ಇರಲಿ.."

  ಈಗವರು ಆಯ್ಕೆ ಮಾಡಿಕೊಂಡಿರುವ ಕಥೆ ಗಾಂಧಿನಗರಕ್ಕೆ ಸಂಬಂಧಪಟ್ಟಿದ್ದು. ಹಾಗಾಗಿ ಚಿತ್ರಕ್ಕೆ "ಸಿನಿಮಾ ಮೈ ಡಾರ್ಲಿಂಗ್" ಎಂದು ಹೆಸರಿಟ್ಟಿದ್ದಾರೆ. ಗಾಂಧಿನಗರದ ಸುತ್ತ ಸುತ್ತವ ಕಥೆ ಇದು ಎನ್ನಲಾಗಿದೆ. 'ಅಗಮ್ಯ' ಚಿತ್ರದಲ್ಲಿ ಅಭಿನಯಿಸಿದ್ದ ಬಿಹಾನ್ ಗೌಡ ಚಿತ್ರದ ನಾಯಕ ನಟ.

  ಈ ಚಿತ್ರದ ಇನ್ನೊಬ್ಬ ನಾಯಕ ನಟ 'ಮಧುರ ಪ್ರೇಮ ಕಾವ್ಯ' ಚಿತ್ರದಲ್ಲಿ ಅಭಿನಯಿಸಿದ್ದ ಮನೋಜವಂ. ಚಿತ್ರದಲ್ಲಿ ರಂಗಾಯಣ ರಘು ಅವರು ಪ್ರಮುಖ ಪಾತ್ರವೊಂದನ್ನು ಪೋಷಿಸಲಿದ್ದಾರೆ. ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕು.

  ಸುದೀರ್ಘ ಸಮಯದ ಬಳಿಕ ರಘು ದೀಕ್ಷಿತ್ ಸಂಗೀತ ಸಂಯೋಜಿಸುತ್ತಿದ್ದಾರೆ. ಉಳಿದಂತೆ ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಕಳೆದ ಮೂರು ವರ್ಷಗಳಿಂದ ಸುವರ್ಣ ಸುದ್ದಿ ವಾಹಿನಿಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಗೌರೀಶ್ ಕಾರ್ಯನಿರ್ವಹಿಸಿದ್ದಾರೆ.

  ಟಿವಿ9 ಕನ್ನಡ, ಈಟಿವಿ ಕನ್ನಡ ವಾಹಿನಿಯಲ್ಲೂ ಅವರು ನಿರೂಪಕರಾಗಿ, ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಕೆಲಸ ನಿರ್ವಹಿಸಿದ್ದರು. ಈಗ ಅವರ ಪಯಣ ಬೆಳ್ಳಿತೆರೆ ಕಡೆಗೆ ಸಾಗಿದೆ. ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮ ಎರಡರಲ್ಲೂ ಪಳಗಿದ್ದ ಗೌರೀಶ್ ಬೆಳ್ಳಿತೆರೆಯ ಮೇಲೆ ಏನು ಮ್ಯಾಜಿಕ್ ಮಾಡಲಿದ್ದಾರೆ ಎಂಬ ಕುತೂಹಲವಿದ್ದೇ ಇದೆ.

  English summary
  TV journalist Gowrish Akki has resigns his job in Suvarna News channel. He is directing a film titled as 'Cinema My Darling.' The shooting starts from July, It's a story on Gandhinagar, Kannada film industry. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X