'ಮತ್ತೆ ಮಾಯಾಮೃಗ' ಮನಸೆಳದ ದಿವ್ಯಶ್ರೀ: 'ಗೃಹಪ್ರವೇಶ' ಸೀರಿಯಲ್‌ನಲ್ಲೇನು ಪಾತ್ರ?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಗೃಹಪ್ರವೇಶ'ದಲ್ಲಿ ನಾಯಕಿ ರಾಗಿಣಿ ಚಿಕ್ಕಮ್ಮ ಶಾಂಭವಿ ಆಗಿ ಅಭಿನಯಿಸುತ್ತಿರುವ ದಿವ್ಯಶ್ರೀನಾಯಕ್ ಸುಳ್ಯ ಕಿರುತೆರೆಗೆ ಹೊಸಬರು ಹೊರತು ನಟನಾ ಕ್ಷೇತ್ರಕ್ಕಲ್ಲ.

'ಅಂತರ್ಮುಖ' ಎನ್ನುವ ಕಲಾತ್ಮಕ ಸಿನಿಮಾದಲ್ಲಿ ನಟಿಸುವ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿದ್ದಾರೆ. ದಿವ್ಯಶ್ರೀ ನಾಯಕ್ ಕೇವಲ ಸಿನಿಮಾ ಹಾಗೂ ಕಿರುತೆರೆಯಲ್ಲಷ್ಟೇ ಅಲ್ಲ ರಂಗಭೂಮಿ ಕಲಾವಿದೆಯೂ ಹೌದು.

Seetha Rama Serial actress Divyashree is a theatre actress who is charming in a negative role.

'ಗೃಹಪ್ರವೇಶ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸಿ ವೀಕ್ಷಕರ ಮನ ಸೆಳೆಯುತ್ತಿರುವ ದಿವ್ಯಶ್ರೀ ನಾಯಕ್ ಅವರು ಮೊದಲು ಕಿರುತೆರೆಗೆ ಕಾಲಿಟ್ಟಿದ್ದು 'ಮತ್ತೆ ಮಾಯಾಮೃಗ' ಧಾರಾವಾಹಿಯ ಮೂಲಕ. ಸಿರಿ ಕನ್ನಡದಲ್ಲಿ ಟಿ.ಎನ್.ಸೀತಾರಾಮ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ 'ಮತ್ತೆ ಮಯಾಮೃಗ'ದಲ್ಲಿ ವೈಜಯಂತಿ ಪಾತ್ರಕ್ಕೆ ಜೀವ ತುಂಬುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ದಿವ್ಯಶ್ರೀ ಎರಡನೇ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.

ರಂಗಭೂಮಿಯತ್ತ ಆಸಕ್ತಿ ಇತ್ತು

"ನಾನು ಚೆಂಡೆ ಕಲಾವಿದಳಾಗಿದ್ದೆ. ಹಾಗಾಗಿ ನನಗೆ ಕಲೆಯ ಬಗ್ಗೆ ವಿಶೇಷ ಆಸಕ್ತಿ ಇತ್ತು. ಅದರಲ್ಲೂ ರಂಗಭೂಮಿ ಕಲಾವಿದೆಯಾಗಬೇಕು ಎಂಬುದೇ ನನ್ನ ಕನಸಾಗಿತ್ತು. ರಂಗಭೂಮಿಯೇ ಸೇರಿಕೊಂಡೆ. ರಂಗಭೂಮಿಯಲ್ಲಿ ಪಳಗಿದ ನನಗೆ ನನ್ನ ಫ್ರೆಂಡ್ ರೆಫರೆನ್ಸ್ ಮೂಲಕ ಮತ್ತೆ 'ಮಾಯಾಮೃಗ'ದಲ್ಲಿ ನಟಿಸುವ ಅವಕಾಶ ದೊರಕಿತು. ಇದೀಗ ಗೃಹಪ್ರವೇಶದಲ್ಲಿ ನಟಿಸುತ್ತಿದ್ದೇನೆ. ಚಾನೆಲ್‌ನಲ್ಲಿ ಇದ್ದ ನನ್ನ ಪ್ರೊಫೈಲ್ ನೋಡಿ ಗೃಹಪ್ರವೇಶದ ಪ್ರೊಡಕ್ಷನ್ ಮ್ಯಾನೇಜರ್ ಕಾಲ್ ಮಾಡಿ ಆಫರ್ ನೀಡಿದರು" ಎಂದು ನಟನಾ ಪಯಣದ ಬಗ್ಗೆ ಫಿಲ್ಮಿಬೀಟ್ ಜೊತೆಗೆ ದಿವ್ಯಶ್ರೀ ನಾಯಕ್ ಮಾಹಿತಿ ಹಂಚಿಕೊಂಡಿದ್ದಾರೆ.

Seetha Rama Serial actress Divyashree is a theatre actress who is charming in a negative role.

'ಮತ್ತೆ ಮಾಯಾಮೃಗ' ನನ್ನ ಭಾಗ್ಯ

"ಮತ್ತೆ ಮಾಯಾಮೃಗ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಾಗ ನಾನು ಕಳೆದುಹೋಗಿ ಬಿಟ್ಟಿದೆ. ಟಿ.ಎನ್.ಸೀತಾರಾಮ್ ಅವರ ಧಾರಾವಾಹಿಯಲ್ಲಿ ನಟಿಸಬೇಕು ಎಂಬುದು ಹಲವು ಕಲಾವಿದರುಗಳು ಕಾಯುತ್ತಿರುತ್ತಾರೆ. ಆದರೆ ನನಗೆ ಫಸ್ಟ್ ಆಡಿಶನ್‌ನಲ್ಲಿ ಆಯ್ಕೆಯಾಗಿ ಫಸ್ಟ್ ಸೀರಿಯಲ್‌ನಲ್ಲೇ ಟಿ.ಎನ್. ಸೀತಾರಾಮ್ ಅವರೊಂದಿಗೆ ನಟಿಸುವ ಅವಕಾಶ ದೊರಕಿದೆ. ಸಿಕ್ಕಾಪಟ್ಟೆ ಖುಷಿ ಆಯ್ತು. ಜೊತೆಗೆ ಸೀತಾರಾಮ್ ಸರ್ ಅವರ ಬ್ಯಾನರ್‌ಗೂ ಒಂದು ಹೆಸರಿದೆ. ಜೊತೆಗೆ ಅವರ ಕೈಯಿಂದ ಕಲಿಯುವುದು ಬಹಳಷ್ಟಿದೆ" ಎಂದು ಸಂತಸ ವ್ಯಕ್ತಪಡಿಸುತ್ತಾರೆ ದಿವ್ಯಶ್ರೀ ನಾಯಕ್.

ಇದೊಂದು ಹೊಸ ಅನುಭವ

"ಕಿರುತೆರೆ ಚೆನ್ನಾಗಿದೆ. ಇಂಡಸ್ಟ್ರಿಯಲ್ಲಿ ನನ್ನ ಹಲವು ಸ್ನೇಹಿತರಿದ್ದಾರೆ. ಜೊತೆಗೆ ರಂಗಭೂಮಿ ಕಲಾವಿದೆಯಾಗಿದ್ದ ಕಾರಣ ಎಲ್ಲವೂ ನೋಡಿ ಗೊತ್ತಿದೆ. ಆದರೆ, ಇದೀಗ ನಾನೇ ಕಿರುತೆರೆಯ ಭಾಗವಾಗಿರುವುದು ನಿಜಕ್ಕೂ ನನಗೆ ಹೊಸ ಅನುಭವ. ಪ್ರತಿದಿನವೂ ಹೊಸತನ್ನು ಕಲಿಯುವುದು ಇರುತ್ತದೆ. ಹಗಲು ರಾತ್ರಿ ಎನ್ನದೇ ಶೂಟಿಂಗ್, ಹಾರ್ಡ್ ವರ್ಕ್ ಇದೆಲ್ಲಾ ಒಂದು ರೀತಿಯ ಹೊಸ ಅನುಭವ. ತುಂಬಾ ಖುಷಿಯಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುತ್ತಾ ಹೇಳುತ್ತಾರೆ ದಿವ್ಯಶ್ರೀ ನಾಯಕ್.

ಸಿನಿಮಾದಲ್ಲಿಯೂ ಮೋಡಿ

ಕಲಾತ್ಮಕ ಸಿನಿಮಾ 'ಅಂತರ್ಮುಖ'ದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ದಿವ್ಯಶ್ರೀ ನಾಯಕ್ ಕೋಸ್ಟಲ್‌ವುಡ್‌ನಲ್ಲೂ ಮೋಡಿ ಮಾಡಿದ್ದಾರೆ. ಶಿವಧ್ವಜ್ ನಿರ್ದೇಶನದ ತುಳು ಸಿನಿಮಾ 'ಕೊರಮ್ಮ'ದಲ್ಲಿಯೂ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ.

More from Filmibeat

English summary
Actress Divyasree, who entered the acting field through artistic cinema, is now busy on television, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X