Suraj Holalu: ಮತ್ತೆ ನಾಯಕನಾಗಿ ಮಿಂಚುತ್ತಿರುವ ಬಾದ್‌ಶಾ ಕಿಚ್ಚ ಸುದೀಪ್ ಅಭಿಮಾನಿ

By ಪ್ರಿಯಾ ದೊರೆ

'ಯಾರೇ ನೀ ಮೋಹಿನಿ', 'ಕುಲವಧು' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಮಿಂಚಿದ್ದ ನಟ ಸೂರಜ್ ಹೊಳಲು ಈಗ 'ಗೃಹಪ್ರವೇಶ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ಸೂರಜ್ ಅವರು ಪರಭಾಷೆಗಳಲ್ಲೂ ನಟಿಸಿದ್ದಾರೆ. ಇಂಜಿನಿಯರಿಂಗ್ ಓದಿ ನಟನಾಗಲು ಬಂದ ಸೂರಜ್‌ಗೆ ಬಾದ್‌ಶಾ ಕಿಚ್ಚ ಸುದೀಪ್ ಅವರೇ ಸ್ಪೂರ್ತಿ ಅಂತೆ. ಸೂರಜ್ ಈಗ ಮಿಥುನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಕಿರುತೆರೆ ಜೊತೆಗೆ ಸ್ಯಾಂಡಲ್‌ವುಡ್‌ನಲ್ಲೂ ಕಾಣಿಸಿಕೊಂಡಿರುವ ಉತ್ತಮವಾದ ಸಿನಿಮಾ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. ಸೂರಜ್ ಹೊಳಲು ಒಳ್ಳೆ ಉದ್ಯೋಗಕ್ಕಾಗಿ ಕಂಪ್ಯೂಟರ್ ಎಂಜಿನಿಯರಿಂಗ್ ಓದಿ ಕೆಲಸಕ್ಕೆ ಸೇರಿದರು. ಆದರೆ, ಅವರಿಗೆ ಕೆಲವೇ ಸಮಯದಲ್ಲಿ ಆ ಕೆಲಸ ಅವರಿಗೆ ಬೋರ್ ಎನಿಸಲು ಶುರುವಾಯ್ತು. ಅದರ ಜೊತೆಗೆ ಅವರಿಗೆ ಇದಲ್ಲ ಅವರ ಜೀವನ ಎನಿಸಿ ಹೀರೋ ಆಗಬೇಕು. ನಾನು ಒಳ್ಯ ಕಲಾವಿದನಾಗಿ ಮಿಂಚಬೇಕು ಎಂದು ಬಯಸಿದರು.

Gruhapravesha serial Fame Actor Suraj Holalu Biography and Career

ಕಿಚ್ಚ ಸುದೀಪ್ ಅವರ ನಟನೆಯೂ ಸೂರಜ್ ಅವರಿಗೆ ಸ್ಫೂರ್ತಿ ನೀಡಿತು. ತಾವೂ ಕೂಡ ಕಿಚ್ಚ ಸುದೀಪ್ ಅವರಂತೆ ನಾಯಕ ನಟನಾಗಬೇಕು ಎಂದು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟೇ ಬಿಟ್ಟರು. ಇವರ ಮೊದಲ ಧಾರಾವಾಹಿಯೇ ಹೆಸರನ್ನು ತಂದುಕೊಟ್ಟಿತು.

Gruhapravesha serial Fame Actor Suraj Holalu Biography and Career


ಪರಭಾಷೆಯಲ್ಲೂ ನಟಿಸಿರುವ ಸೂರಜ್

ಸಕಲೇಶಪುರ ಮೂಲದ ಸೂರಜ್, 'ಕುಲವಧು' ಧಾರಾವಾಹಿಯಲ್ಲಿ ಗೌರವ್ ಪಾತ್ರದ ಮೂಲಕ ಮಿಂಚಿದರು. 'ಕುಲವಧು' ಧಾರಾವಾಹಿ ಗೌರವ್, ದಿಶಾ ಮದನ್, ದೀಪಿಕಾ, ಅಮೃತಾ ರಾಮಮೂರ್ತಿ ಹೀಗೆ ಹಲವರನ್ನು ಕಿರುತೆರೆಯಲ್ಲಿ ಚಿರಪರಿಚಿತರನ್ನಾಗಿ ಮಾಡಿತು. ನಂತರ 'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಂಡರು. ಇದರಲ್ಲಿ ಸೂರಜ್, ಮುತ್ತು ಮಾಮ ಪಾತ್ರದಲ್ಲಿ ಮನೆಮಾತಾದರು. ಮೂರು ವರ್ಷಗಳ ಕಾಲ ಮೂಡಿ ಬಂದ ಈ ಧಾರಾವಾಹಿ ಪ್ರಸಾರ ಕಾಣುವಾಗಲೇ, ಸೂರಜ್‌ಗೆ ತೆಲುಗು ಕಿರುತೆರೆಯಿಂದ ಆಫರ್ ಬಂತು.


ಸಿನಿಮಾದಲ್ಲಿ ನಟಿಸುವ ಆಸೆ

ತೆಲುಗಿನಲ್ಲಿ 'ಚಿಟ್ಟಿತಲ್ಲಿ' ಎಂಬ ಧಾರಾವಾಹಿಗೂ ಸೂರಜ್ ಬಣ್ಣ ಹಚ್ಚಿದರು. ಬಳಿಕ ಸೂರಜ್, ರವಿ ಬೆಳಗೆರೆಯವರ ಹೇಳಿ ಹೋಗು ಕಾರಣ ಕಾದಂಬರಿ ಆಧರಿತ ಧಾರಾವಾಹಿಯಲ್ಲಿ ನಟಿಸಿದರು. ಇದರಲ್ಲಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದರು. ಇನ್ನು ಡ್ಯಾನ್ಸಿಂಗ್ ಚಾಂಪಿಯನ್‌ ಶೋನಲ್ಲಿ ಭಾಗವಹಿಸಿ ತಮ್ಮ ನೃತ್ಯ ಕಲೆಯನ್ನು ವೀಕ್ಷಕರಿಗೆ ತಿಳಿಸಿಕೊಟ್ಟರು. ಸ್ಯಾಂಡಲ್‌ವುಡ್‌ಗೂ ಪಾದಾರ್ಪಣೆ ಮಾಡಿ, 'ಕಿಸ್' ಚಿತ್ರದಲ್ಲಿ ನಟಿಸಿದರು. ಒಳ್ಳೆ ಸಿನಿಮಾಗಳಲ್ಲಿ ನಟಿಸುವ ಆಸೆ ಹೊಂದಿರುವ ಸೂರಜ್, ಉತ್ತಮ ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ.

ಸೂರಜ್ ಹೊಳಲು ಕಂಬ್ಯಾಕ್

ಇತ್ತೀಚೆಗೆ ಕಿರುತೆರೆಯಿಂದ ಕೊಂಚ ಬ್ರೇಕ್ ಪಡೆದಿದ್ದ ಸೂರಜ್ ಹೊಲಲು ಮತ್ತೆ ವಾಪಸ್ ಆಗಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಹಾಗೂ 'ಗೃಹಪ್ರವೇಶ' ಧಾರಾವಾಹಿ ಮೂಲಕ ವೀಕ್ಷಕರ ಮುಂದೆ ಬಂದಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸ್ನೇಹಳನ್ನು ಮದುವೆಯಾಗುವ ಹುಡುಗನಾಗಿ ಗೆಸ್ಟ್ ರೋಲ್ ಮಾಡಿದ್ದರು. ಭುವನ್ ಪಾತ್ರದಲ್ಲಿ ನಟಿಸಿ ವೀಕ್ಷಕರಿಗೆ ಖುಷಿ ಕೊಟ್ಟರು.

ಮುತ್ತು ಮಾಮ ಈಗ ಮಿಥುನ್

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಗೃಹಪ್ರವೇಶ' ಧಾರಾವಾಹಿ ಮೂಲಕ ನಾಯಕನಾಗಿ ಮಿಂಚುತ್ತಿದ್ದಾರೆ. ಇದರಲ್ಲಿ ಮಿಥುನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಕಥೆ ಅದ್ಭುತವಾಗಿ ಮೂಡಿ ಬರುತ್ತಿದೆ. 'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ಮುತ್ತು ಮಾಮನಾಗಿ ಮಿಂಚಿದ್ದ ಸೂರಜ್ ಈಗ 'ಗೃಹಪ್ರವೇಶ' ಸೀರಿಯಲ್ ಮೂಲಕ ಮಿಥುನ್ ಆಗಿ ವೀಕ್ಷಕರನ್ನು ಹೇಗೆ ರಂಜಿಸುತ್ತಾರೆ ಅಂತ ಕಾದು ನೋಡಬೇಕಿದೆ.

More from Filmibeat

English summary
Gruhapravesha serial Fame Actor Suraj Holalu Biography and Career. here is details about Actor suraj holalu life story and small screen journey. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X