Mouna Guddemane: ರೆಡ್ ಸೀರೆಯಲ್ಲಿ ಮೌನ ಗುಡ್ಡೆಮನೆ ಮಿಂಚಿಂಗ್; ಸಿಂಪಲ್ ಆಗಿರುವ ಈ ಸೀರೆ ಬೆಲೆ ಎಷ್ಟು?
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಸ್ಟ್ರಾಂಗ್ ಆಗ್ತಾ ಇದೆ. ಅದರಲ್ಲೂ ಕಿರುತೆರೆ, ಹಿರಿತೆರೆ ಸೆಲೆಬ್ರೆಟಿಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗ್ತಾ ಇದಾರೆ. ಸೆಲೆಬ್ರೆಟಿಗಳು ಅಂದ್ರೆ ಕೇಳ್ಬೇಕಾ..? ಫಾಲೋವರ್ಸ್ ಕೂಡ ಜೋರಾಗಿಯೇ ಇರುತ್ತಾರೆ. ತಮ್ಮ ನೆಚ್ಚಿನ ನಟಿಮಣಿಯರ ಪೇಜ್‌ನ ಫಾಲೋ ಮಾಡಿ, ಅವರ ದಿನಚರಿಯನ್ನು ನೋಡುತ್ತಾ ಇರುತ್ತಾರೆ. ಸೆಲೆಬ್ರೆಟಿಗಳು ಕೂಡ ತಮ್ಮ ಫ್ಯಾನ್ಸ್‌ಗಾಗಿ ಆಗಾಗ ಲೈವ್ ಬಂದು ಮಾತಾಡ್ತಾ ಇರುತ್ತಾರೆ.
ಸೆಲೆಬ್ರೆಟಿಗಳು ಲೈಫ್ ಸ್ಟೈಲ್ ಹೇಗಿರುತ್ತೆ..? ಅವರು ಹಾಕುವ ಬಟ್ಟೆಗಳು ಎಷ್ಟು ದುಬಾರಿ ಎಂಬೆಲ್ಲಾ ಪ್ರಶ್ನೆಗಳು ಬರುವುದು ಸರ್ವೇ ಸಾಮಾನ್ಯ. ಯಾಕಂದ್ರೆ ಇತ್ತಿಚಿನ ಲೈಫ್ ತುಂಬಾನೇ ದುಬಾರಿಯಾಗಿದೆ. ಈ ದುಬಾರಿ ಜೀವನದಲ್ಲಿ ಜನಸಾಮಾನ್ಯರೇ ಕಾಸ್ಟ್ಲೀ ಲೈಫ್ ಲೀಡ್ ಮಾಡುವಾಗ, ಇನ್ನು ಸೆಲೆಬ್ರೆಟಿಗಳ ಲೈಫ್ ಹೇಗಿರುತ್ತೆ ಎಂಬ ಕುತೂಹಲಕ್ಕೆ ಸಣ್ಣ ಮಟ್ಟದ ಬ್ರೇಕ್ ಹಾಕುವುದೇ ಈ ಸುದ್ದಿ. ಅಂದ್ರೆ ಮೌನ ಗುಡ್ಡೆಮನೆ ಹಾಕಿದ ಆ ಒಂದು ಸೀರೆಯ ವಿಶೇಷತೆ, ಬೆಲೆ ತಿಳಿಸುವ ಸ್ಟೋರಿ ಇದು.

ಮಾಡ್ರನ್ ಹುಡುಗಿ ಫುಲ್ ಟ್ರೆಡಿಷನಲ್
ಮಾನ್ಯತಾ ಮಗಳಾಗಿದ್ದಾಗ ಚಾರು ಫುಲ್ ಮಾಡ್ರನ್ ಹುಡುಗಿ. ಸ್ಟೈಲಿಶ್ ಲುಕ್, ಸಂಜೆ ಆದ್ರೆ ಪಬ್ ಇದೇ ಮಾಡಿಕೊಂಡು ಇದ್ದದ್ದು. ಆದರೆ ಅದ್ಯಾವಾಗ ರಾಮಾಚಾರಿಯನ್ನು ಮದುವೆಯಾದಳೊ ಅಲ್ಲಿಂದ ಸಂಪ್ರದಾಯಸ್ಥ ಕುಟುಂಬದ ಮಗಳು ಹೇಗಿರಬೇಕೋ ಹಾಗೇ ಇದ್ದಾಳೆ. ಪ್ರತಿದಿನ ಚಾರು ಸೀರೆ ಉಟ್ಟು, ದೇವರ ಪೂಜೆ, ಪುನಸ್ಕಾರ ಅಂತ ನಾರಾಯಣಾಚಾರ್ಯರ ಸಂಪ್ರದಾಯ ಕಾಪಾಡುತ್ತಿದ್ದಾಳೆ. ಆದರೆ ಚಾರು ಉಡುವ ಸೀರೆ ಮೇಲೆ ಸಾಕಷ್ಟು ಜನ ಕಣ್ಣಿರುವುದಂತು ಸತ್ಯ.
ರೆಡ್ ಸೀರೆಯಲ್ಲಿ ಮಿಂಚಿದ ಮೌನ
ಚಾರು ಅಲಿಯಾಸ್ ಮೌನ ಗುಡ್ಡೆಮನೆ ಇತ್ತಿಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಅದು ರೆಡ್ ಸೀರೆಯುಟ್ಟು ನೀಡಿರುವ ಪೋಸ್. ಈ ವಿಡಿಯೋ ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅದಕ್ಕೆ ಕಮೆಂಟ್ ಬಾಕ್ಸ್‌ನಲ್ಲಿ ಪ್ರೆಟಿ ಗರ್ಲ್, ಕ್ವೀನ್, ಬ್ಯೂಟಿ ಅಂತೆಲ್ಲಾ ಕಮೆಂಟ್ ಹಾಕಿದ್ದಾರೆ.

ಸಿಂಪಲ್ ಸೀರೆ ಬೆಲೆ ಎಷ್ಟು?
ಮೌನ ಗುಡ್ಡೆಮನೆ ಹಾಕಿರುವ ರೆಡ್ ಸೀರೆ ನೋಡುವುದಕ್ಕೆ ತುಂಬಾ ಸಿಂಪಲ್ ಆಗಿದೆ. ಈ ಸೀರೆಯನ್ನ ಹೆಚ್ಚು ಪಾರ್ಟಿಗಳಿಗೆ ವೇರ್ ಮಾಡಬಹುದು. ಕೆಲವೊಂದು ಸಭೆ ಸಮಾರಂಭಗಳಿಗೆ ಹಾಕಿದ್ರು ನೀವೇ ಹೈಲೇಟ್ ಆಗ್ತೀರಿ. ಯಾಕಂದ್ರೆ ಆ ಸೀರೆಯ ಲುಕ್ ಅಷ್ಟು ಅದ್ಭುತವಾಗಿ ಕಾಣುತ್ತೆ. ರೆಡ್ ಸೀರೆಗೆ ಮರೂನ್ ಕಲರ್ ಚುಮ್ಕಿ ಜೋಡಿಸಲಾಗಿದೆ. ಆದರೆ ಇದರ ಬೆಲೆ ಕೇಳಿದ್ರೆ ಕೊಂಚ ತಲೆ ತಿರುಗೋದು ಗ್ಯಾರಂಟಿ. ಬರೋಬ್ಬರಿ 22,500 ರೂಪಾಯಿ.
ಮಾಯಾ ಡಿಸೈನ್ ಮಾಡಿರುವ ಸೀರೆ
ಈ ಸೀರೆಯನ್ನು ತಯಾರು ಮಾಡಿದವರು ಮಾಯಾ ಎಂಬುವವರು. ಅವರದ್ದೆ ಬೂಟಿಕ್ ಕೂಡ ಇದೆ. ಅಲ್ಲಿಯೇ ತಯಾರಾದ ಸೀರೆಯಾಗಿದೆ. ಸದ್ಯ ಈ ಸೀರೆಗೆ ಡಿಮ್ಯಾಂಡ್ ಕೂಡ ಜಾಸ್ತಿ ಇದೆ. ಹಲವು ಸೆಲೆಬ್ರೆಟಿಗಳು ಇದೇ ಥರದ ಸೀರೆ ಬೇಕು, ಬ್ಲೌಸ್ ಡಿಸೈನ್ ಬೇಕು ಅಂತ ಡಿಮ್ಯಾಂಡ್ ಮಾಡಿಸಿಕೊಂಡು ರೆಡಿ ಮಾಡಿಸಿಕೊಂಡಿರುವ ಉದಾಹರಣೆಯೂ ಇದೆ.


Click it and Unblock the Notifications











