Annayya serial: 'ಅಣ್ಣಯ್ಯ'ನ ಮುದ್ದು ತಂಗಿ ದರ್ಶನ್ ಜೊತೆಗೂ ನಟಿಸಿದ್ದಾಳೆ!

By ಎಸ್ ಸುಮಂತ್

ನಟ-ನಟಿಯರ ಚಿಕ್ಕ ವಯಸ್ಸಿನ ಫೋಟೋಗಳನ್ನು ನೋಡುವುದಕ್ಕೇನೆ ಚೆಂದ. ಎಷ್ಟೇ ಆಗಲಿ ಬಣ್ಣದ ಲೋಕದಲ್ಲಿ ಇರುವವರು. ಬ್ಯೂಟಿಯನ್ನು ಅಚ್ಚುಕಟ್ಟಾಗಿಯೇ ಮೆಂಟೈನ್ ಮಾಡುತ್ತಾರೆ. ಹೀಗಾಗಿ ದಿನೇ ದಿನೇ ಅಂದ ಹೆಚ್ಚಾಗುತ್ತದೆ. ಹೀಗಾಗಿ ಹಳೆಯ ಫೋಟೋಗಳನ್ನು ನೋಡಿದಾಗ ಗುರುತಿಸುವುದು ಕೊಂಚ ಕಷ್ಟವಾಗಬಹುದು. ಆದರೆ ನಿಮ್ಮ ಕಣ್ಣಿಗೊಂದು ಸವಾಲು ಅಂತಾನೇ ಅಂದುಕೊಳ್ಳಿ. ಪೂರ್ತಿ ಸ್ಟೋರಿ ಓದುವ ಮೊದಲೇ ಇವರು ಯಾರೆಂದು ಅಂದಾಜಿಸಬೇಕು.

ಜೀ ಕನ್ನಡದಲ್ಲಿ ಕಳೆದ ಕೆಲ ದಿನಗಳ ಹಿಂದೆ 'ಅಣ್ಣಯ್ಯ' ಎಂಬ ಹೊಸ ಸೀರಿಯಲ್ ಶುರುವಾಗಿದೆ. 'ಅಣ್ಣಯ್ಯ' ಎಂದಾಕ್ಷಣ ರವಿಚಂದ್ರನ್ ಅವರ ಸಿನಿಮಾವೇ ಕಣ್ಣ ಮುಂದೆ ಬರುತ್ತದೆ. ಇದೀಗ ಧಾರಾವಾಹಿ ಕೂಡ ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿಯಾಗಿದೆ. ಅದರಲ್ಲಿ 'ಅಣ್ಣಯ್ಯ'ನ ತಂಗಿಯರಲ್ಲಿ ಈ ನಟಿಯೂ ಒಬ್ಬರು.

Guess This Tv Actress She Also Acted With Darshan

'ಕಾಟೇರ' ಚಿತ್ರದ ಜೂನಿಯರ್

ದರ್ಶನ್ ಅವರ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿದರೆ ಸಾಕು ಎಂದೇ ಹಲವರು ಕಾಯುತ್ತಿರುತ್ತಾರೆ. 'ಕಾಟೇರ' ಸಿನಿಮಾ ಕಳೆದ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಆಗಿತ್ತು. ಆರಾಧನಾ ರಾಮ್ ಅವರ ಡೆಬ್ಯೂ ಸಿನಿಮಾ. ಜೂನಿಯರ್ ಆರಾಧನಾ ಆಗಿ ಅಂಕಿತಾ ಗೌಡ ಕಾಣಿಸಿಕೊಂಡಿದ್ದರು. 'ಕಾಟೇರ' ಸಿನಿಮಾದಲ್ಲಿ ಅಂಕಿತಾ ನಟನೆಗೆ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿತ್ತು.

ರಮ್ಯಾ ಪಾತ್ರದಲ್ಲಿ ಅಂಕಿತಾ

ಜೀ ಕನ್ನಡದ 'ಅಣ್ಣಯ್ಯ' ಧಾರಾವಾಹಿಗೂ ಉತ್ತಮ ರೆಸ್ಪಾನ್ಸ್ ಇದೆ. ನಾಲ್ಕು ತಂಗಿಯರನ್ನು ಓದಿಸಿ, ಬರೆಸಿ, ಒಂದೊಳ್ಳೆ ಜೀವನ ಕಟ್ಟಿಕೊಡುವುದಕ್ಕೆ ಅಣ್ಣಯ್ಯ ಹಗಲು ರಾತ್ರಿ ಕಷ್ಟಪಡುತ್ತಿದ್ದಾನೆ. ಅಣ್ಣಯ್ಯನ ಹೆಗಲಿಗೆ ತಂಗಿಯಂದಿರು ನಿಂತಿದ್ದಾರೆ. ಹೀಗಾಗಿ ಅದೊಂದು ಸುಂದರ ಕುಟುಂಬವಾಗಿದೆ. ಅದರಲ್ಲಿ ರಮ್ಯಾ ಪಾತ್ರದಲ್ಲಿ ಅಂಕಿತಾ ಕಾಣಿಸಿಕೊಂಡಿದ್ದಾರೆ. ಮೂರು ಜನ ಸ್ವಂತ ತಂಗಿಯರ ನಡುವೆ ರಮ್ಯಾ ಎಲ್ಲೋ ಸಿಕ್ಕಿದವಳಾಗಿರುತ್ತಾಳೆ. ಆದರೂ ಅವಳನ್ನು ಸ್ವಂತ ತಂಗಿಯಂತೆಯೇ ಸಾಕಿರುತ್ತಾನೆ ಅಣ್ಣಯ್ಯ.

ಮೊದಲಿನಿಂದಲೂ ನಟನೆಯಲ್ಲಿ ಬ್ಯುಸಿ

ಅಂಕಿತಾ ಗೌಡ ಮೊದಲಿನಿಂದಲೂ ಸೀರಿಯಲ್, ಸಿನಿಮಾದಲ್ಲಿ ನಟನೆ ಮಾಡಿಕೊಂಡೆ ಬಂದಿದ್ದಾರೆ. ಅವರ ಸೋಷಿಯಲ್ ಮೀಡಿಯಾ ನೋಡಿದರೇನೆ ಅದರ ಮಾಹಿತಿ‌ ಸಿಗುತ್ತದೆ. ಮಂಡ್ಯದವರಾದ ಅಂಕಿತಾ ಈಗ ನಟನೆಗಾಗಿ ಬೆಂಗಳೂರಿನಲ್ಲಿ ಇದ್ದಾರೆ. ಓದುವುದರ ಜೊತೆಗೆ ನಟನೆಯಲ್ಲೂ ಬ್ಯುಸಿಯಾಗಿದ್ದಾರೆ. ಬಾಲ ನಟಿಯಾಗಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕುಲವಧು ಸೇರಿದಂತೆ ಹಲವು ಧಾರಾವಾಹಿಗಳು, ಶಾರ್ಟ್ ಮೂವೀಸ್, ಸಿನಿಮಾಗಳಲ್ಲಿ ನಟಿಸಿರುವ ಅಂಕಿತಾ, ಬಿಗ್ ಸ್ಟಾರ್ಸ್‌ ಜೊತೆಗೇನೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಇಂಡಸ್ಟ್ರಿಯಲ್ಲಿ ಎಲ್ಲರಿಗೂ ಚಿರಪರಿಚಿತ ಈ ಬಾಲ ನಟಿ.

Guess This Tv Actress She Also Acted With Darshan

'ಅಣ್ಣಯ್ಯ' ಟೀಂನಲ್ಲಿ ಮುದ್ದಿನ ಹುಡುಗಿ

'ಅಣ್ಣಯ್ಯ' ಸೀರಿಯಲ್‌ನಲ್ಲಿ ಈಗ ಫುಲ್ ಬ್ಯುಸಿಯಾಗಿರುವ ಅಂಕಿತಾ ಗೌಡ ಸೋಷಿಯಲ್ ಮೀಡಿಯಾದಲ್ಲೂ ಫುಲ್ ಆಕ್ಟೀವ್. ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಯಾಕೆ ತಾವೂ ಯಾವೆಲ್ಲಾ ಸ್ಟಾರ್ಸ್‌ ಜೊತೆಗೆ ನಟಿಸಿದ್ದಾರೋ ಆ ಎಲ್ಲರ ಜೊತೆಗೂ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಇನ್ನು 'ಅಣ್ಣಯ್ಯ' ಶೂಟಿಂಗ್ ಸಮಯದಲ್ಲಿ ಬಿಡುವು ಸಿಕ್ಕಾಗೆಲ್ಲಾ ರೀಲ್ಸ್ ಮಾಡುತ್ತಾ ಎಲ್ಲರೂ ಕ್ಲೋಸ್ ಆಗಿದ್ದಾರೆ. ಈಗ ರಿಯಲ್ ಆಗಿನೂ ಶಿವಣ್ಣನ ತಂಗಿಯರು ಬಹಳ ಆತ್ಮೀಯವಾಗಿದ್ದಾರಂತೆ. ಅಂಕಿತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಆ ಫೋಟೋಗಳನ್ನು ಹಾಕಿಕೊಂಡಿದ್ದಾರೆ.

More from Filmibeat

English summary
Zee kannada serial Annaiah; Here is the details about actress Ramya real life;
Read more about: filmibeat news sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X