ಉಪೇಂದ್ರ ಮದುವೆ ಬಗ್ಗೆ ಗುರುಕಿರಣ್ ಬೇಸರ ಮಾಡಿಕೊಂಡಿದ್ದರು

By Naveen

ಉಪೇಂದ್ರ ಮತ್ತು ಗುರುಕಿರಣ್ ಇಬ್ಬರು ಆಪ್ತ ಸ್ನೇಹಿತರು. 'ಎ' ಸಿನಿಮಾದಿಂದ ಶುರುವಾದ ಇಬ್ಬರ ಸ್ನೇಹ ಇಂದಿಗೂ ಮುಂದುವರೆದಿದೆ. ಸಿನಿಮಾ ಮಾತ್ರವಲ್ಲದೆ ಉಪೇಂದ್ರ ಮತ್ತು ಗುರುಕಿರಣ್ ಇಬ್ಬರು ವೈಯಕ್ತಿಕವಾಗಿಯೂ ತುಂಬ ಚೆನ್ನಾಗಿ ಇದ್ದಾರೆ. ಇಂತಹ ಸ್ನೇಹ ಇದ್ದರೂ ಕೂಡ ಉಪೇಂದ್ರ ತಮ್ಮ ಮದುವೆ ಬಗ್ಗೆ ಗುರುಕಿರಣ್ ಅವರಿಗೆ ಏನು ಹೇಳಿರಲಿಲ್ಲವಂತೆ. ಈ ವಿಷಯವನ್ನು ಈಗ ಸ್ವತಃ ಗುರುಕಿರಣ್ ಹೇಳಿಕೊಂಡಿದ್ದಾರೆ.

ಸ್ಟಾರ್ ಸುವರ್ಣ ಮತ್ತು ವಿಯು ಅಪ್ ನಲ್ಲಿ ಪ್ರಸಾರ ಆಗುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಮೊದಲ ಅತಿಥಿಯಾಗಿ ಉಪೇಂದ್ರ ಮತ್ತು ಗುರುಕಿರಣ್ ಆಗಮಿಸಿದ್ದರು. ಈ ವೇಳೆ ಉಪೇಂದ್ರ ಮತ್ತು ಗುರುಕಿರಣ್ ಇಬ್ಬರು ಓಪನ್ ಆಗಿ ಮಾಡಿದ್ದರು. ಇಬ್ಬರ ಸ್ನೇಹದ ಬಗ್ಗೆ ತಿಳಿಯದ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮದ ಶುರುವಿನಲ್ಲಿ ಶಿವಣ್ಣನ ಪ್ರಶ್ನೆಗೆ ಉತ್ತರಿಸಿ ಗುರು ಉಪ್ಪಿ ಅವರ ಮದುವೆ ಬಗ್ಗೆ ಮಾತನಾಡಿದರು. ಮುಂದೆ ಓದಿ..

ಉಪೇಂದ್ರ ಸ್ವಲ್ಪ ಸೀಕ್ರೆಟಿವ್

ಉಪೇಂದ್ರ ಸ್ವಲ್ಪ ಸೀಕ್ರೆಟಿವ್

ಕಾರ್ಯಕ್ರಮದಲ್ಲಿ ಶಿವಣ್ಣ ಗುರುಕಿರಣ್ ಅವರಿಗೆ ಒಂದು ಪ್ರಶ್ನೆ ಕೇಳಿದರು. 'ನಿಮಗೆ ಉಪೇಂದ್ರ ಅವರಲ್ಲಿ ಇರುವ ಯಾವ ಗುಣ ಇಷ್ಟ ಆಗುವುದಿಲ್ಲ?' ಎಂದು ಶಿವಣ್ಣ ಕೇಳಿದರು. ಆಗ ಗುರುಕಿರಣ್ ''ಉಪೇಂದ್ರ ಅವರು ಸ್ವಲ್ಪ ಸೀಕ್ರೆಟಿವ್ ಅವರು ಹೆಚ್ಚು ಏನು ಹೇಳುವುದಿಲ್ಲ.'' ಈ ಅಂಶ ಇಷ್ಟ ಆಗುವುದಿಲ್ಲ ಎಂದರು.

ಮದುವೆ ವಿಷಯ ಹೇಳಿರಲಿಲ್ಲ

ಮದುವೆ ವಿಷಯ ಹೇಳಿರಲಿಲ್ಲ

''ಉಪ್ಪಿ ಅವರ ಮದುವೆ ಸಮಯದಲ್ಲಿಯೂ ನನಗೆ ಏನು ಹೇಳಿರಲಿಲ್ಲ. ಮದುವೆ ಆಗುವ ಹಿಂದಿನ ದಿನ ಜೊತೆಗೆ ಇದ್ವಿ ಆದರೂ ಮದುವೆ ಇರುವ ವಿಷಯ ಹೇಳಿರಲಿಲ್ಲ. ಅದು ಮನಸಿನಲ್ಲಿ ಯಾವಾಗಲೂ ಕೊರೆಯುತ್ತದೆ'' ಎಂದು ಗುರು ಹೇಳಿದ್ದಾರೆ.

ನನಗೂ ಹೇಳಿರಲಿಲ್ಲ

ನನಗೂ ಹೇಳಿರಲಿಲ್ಲ

ಗುರು ಉತ್ತರಕ್ಕೆ ಪ್ರತಿಕ್ರಿಯೆ ನೀಡಿದ ಶಿವಣ್ಣ ''ನನಗೆ ಉಪ್ಪಿ ಎಷ್ಟು ಹತ್ತಿರ. ಆದರೂ ಉಪ್ಪಿ ನನಗೆ ಕೂಡ ಮದುವೆ ವಿಷಯ ಹೇಳಿರಲ್ಲ.. ಎಂದು ನಕ್ಕರು. ಕೆಲವು ಸಂದರ್ಭದಲ್ಲಿ ಹಾಗೆ ಆಗುತ್ತದೆ'' ಎಂದು ಗುರುಕಿರಣ್ ಅವರನ್ನು ಶಿವಣ್ಣ ಸಮಾಧಾನ ಮಾಡಿದರು.

ನಾನು ಅವರ ಜೊತೆಗೆ ಇನ್ನೂ ಸಿನಿಮಾ ಮಾಡಬೇಕು

ನಾನು ಅವರ ಜೊತೆಗೆ ಇನ್ನೂ ಸಿನಿಮಾ ಮಾಡಬೇಕು

ಇದೇ ಕಾರ್ಯಕ್ರಮದಲ್ಲಿ ಗುರುಕಿರಣ್ ''ಉಪ್ಪಿ ರಾಜಕೀಯಕ್ಕೆ ಬರುವುದು ನನಗೆ ಇಷ್ಟ ಇರಲಿಲ್ಲ. ಯಾಕೆಂದರೆ ಕನ್ನಡ ಚಿತ್ರರಂಗ ಒಬ್ಬ ಒಳ್ಳೆಯ ನಿರ್ದೇಶಕನನ್ನು ಕಳೆದುಕೊಳ್ಳುತ್ತದೆಯಾ ಎನ್ನುವ ಬೇಸರ ಇದೆ. ಜೊತೆಗೆ ವೈಯಕ್ತಿಕವಾಗಿ ನಾನು ಕೂಡ ಅವರ ಜೊತೆಗೆ ಸಿನಿಮಾಗಳನ್ನು ಮಾಡಬೇಕು.'' ಎಂದು ಹೇಳಿಕೊಂಡಿದ್ದಾರೆ.

More from Filmibeat

English summary
Kannada musc director Gurukiran spoke about Real star Upendra marriage in Star Suvarna's new show 'No1 yari with Shivanna'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X