ಉಪೇಂದ್ರ ರಾಜಕೀಯಕ್ಕೆ ಬರುವುದು ಗುರುಕಿರಣ್ ಗೆ ಇಷ್ಟ ಇರಲಿಲ್ಲ ಯಾಕೆ?

By Naveen

ನಟ ಉಪೇಂದ್ರ ಸಿನಿಮಾ ಬಿಟ್ಟು ಪ್ರಜಾಕೀಯ ಶುರು ಮಾಡಿದ್ದಾರೆ. ಉಪೇಂದ್ರ ಅವರ ಈ ಹೊಸ ಆಲೋಚನೆಗೆ ರಾಜ್ಯದೆಲ್ಲಡೆ ದೊಡ್ಡ ಪ್ರತಿಕ್ರಿಯೆ ಸಿಗುತ್ತಿದೆ. ಸಾಮಾನ್ಯ ಜನರಿಗೆ ಉಪೇಂದ್ರ ಅವರ ಐಡಿಯಾಗಳು ಇಷ್ಟ ಆಗುತ್ತಿದೆ. ಆದರೆ ಉಪೇಂದ್ರ ಪಾಲಿಟಿಕ್ಸ್ ಗೆ ಬರುವುದು ಅವರ ಗೆಳೆಯ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಇಷ್ಟ ಇರಲಿಲ್ಲವಂತೆ.

ಶಿವರಾಜ್ ಕುಮಾರ್ ನಡೆಸಿಕೊಂಡುತ್ತಿರುವ, ಸ್ಟಾರ್ ಸುವರ್ಣ ವಾಹಿನಿ ಮತ್ತು viu (ಮಿಯು) ಅಪ್ ನಲ್ಲಿ ಪ್ರಸಾರ ಪ್ರಸಾರ ಆಗುತ್ತಿರುವ ಹೊಸ ಕಾರ್ಯಕ್ರಮ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಮೊದಲ ಸಂಚಿಕೆಯ ಅತಿಥಿಯಾಗಿ ಉಪೇಂದ್ರ ಮತ್ತು ಗುರುಕಿರಣ್ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಎಲ್ಲಿಯೂ ರಿವೀಲ್ ಆಗದ ಅನೇಕ ವಿಷಯಗಳನ್ನು ಉಪೇಂದ್ರ ಮತ್ತು ಗುರುಕಿರಣ್ ಇಬ್ಬರು ಶಿವಣ್ಣನ ಮುಂದೆ ಹಂಚಿಕೊಂಡರು. ಅದರಲ್ಲಿಯೂ ಉಪೇಂದ್ರ ಅವರ ೦ಪಾಲಿಟಿಕ್ಸ್ ಎಂಟ್ರಿಯ ಬಗ್ಗೆ ಗುರುಕಿರಣ್ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಮುಂದೆ ಓದಿ...

ನನಗೆ ಇಷ್ಟ ಇರಲಿಲ್ಲ

ನನಗೆ ಇಷ್ಟ ಇರಲಿಲ್ಲ

ಶಿವಣ್ಣ ಕಾರ್ಯಕ್ರಮದ ಮೊದಲ ಸುತ್ತಿನಲ್ಲಿ ಗುರುಕಿರಣ್ ಅವರಿಗೆ 'ನಿಮಗೆ ಉಪೇಂದ್ರ ಪಾಲಿಟಿಕ್ಸ್ ಗೆ ಬಂದಿರುವುದು ಇಷ್ಟನಾ ?' ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಗುರುಕಿರಣ್ ಯೋಚನೆ ಮಾಡಿ 'ಇಲ್ಲ ನನಗೆ ಇಷ್ಟ ಇರಲಿಲ್ಲ' ಅಂತ ಹೇಳಿದರು.

ಒಳ್ಳೆಯ ನಿರ್ದೇಶಕನನ್ನು ಚಿತ್ರರಂಗ ಕಳೆದುಕೊಳ್ಳುತ್ತದೆ

ಒಳ್ಳೆಯ ನಿರ್ದೇಶಕನನ್ನು ಚಿತ್ರರಂಗ ಕಳೆದುಕೊಳ್ಳುತ್ತದೆ

''ಉಪ್ಪಿ ರಾಜಕೀಯಕ್ಕೆ ಬರುವುದು ನನಗೆ ಇಷ್ಟ ಇರಲಿಲ್ಲ. ಯಾಕೆಂದರೆ ಕನ್ನಡ ಚಿತ್ರರಂಗ ಒಬ್ಬ ಒಳ್ಳೆಯ ನಿರ್ದೇಶಕನನ್ನು ಕಳೆದುಕೊಳ್ಳುತ್ತದೆಯಾ ಎನ್ನುವ ಬೇಸರ ಇದೆ. ಜೊತೆಗೆ ವೈಯಕ್ತಿಕವಾಗಿ ನಾನು ಕೂಡ ಅವರ ಜೊತೆಗೆ ಸಿನಿಮಾಗಳನ್ನು ಮಾಡಬೇಕು.'' ಎಂದು ಗುರುಕಿರಣ್ ಹೇಳಿಕೊಂಡಿದ್ದಾರೆ.

ಒಂದರಲ್ಲಿ ಗಮನ ಹರಿಸುತ್ತಾರೆ

ಒಂದರಲ್ಲಿ ಗಮನ ಹರಿಸುತ್ತಾರೆ

''ಪಾಲಿಟಿಕ್ಸ್ ಗೆ ಬಂದ ಮೇಲೆ ಮತ್ತೆ ಸಿನಿಮಾ ಮಾಡಬಾರದು ಅಂತ ಏನು ಇಲ್ಲ ಅಲ್ವಾ'' ಎಂದು ಮತ್ತೆ ಶಿವಣ್ಣ ಪ್ರಶ್ನೆ ಮಾಡಿದರು. ಆಗ ಗುರುಕಿರಣ್ ''ನನಗೆ ಉಪೇಂದ್ರ ಅವರ ಬಗ್ಗೆ ಗೊತ್ತು. ಅವರು ಒಂದರಲ್ಲಿ ಗಮನ ಹರಿಸಿದರೆ ಅದರಲ್ಲಿಯೇ ಇರುತ್ತಾರೆ. ಅದಕ್ಕೆ ನಟನೆ ಮಾಡುವಾಗ ನಿರ್ದೇಶನವನ್ನು ಹೆಚ್ಚು ಮಾಡಲಿಲ್ಲ. ಒಂದೇ ಬಾರಿ ಎರಡು ಕೆಲಸವನ್ನು ಅವರು ಮಾಡಲ್ಲ.'' ಎಂದು ಉತ್ತರಿಸಿದರು.

ಖಂಡಿತ ಗೆಲ್ಲುತ್ತಾರೆ

ಖಂಡಿತ ಗೆಲ್ಲುತ್ತಾರೆ

ಹಾಗಾದರೆ, 'ಉಪೇಂದ್ರ ಪಾಲಿಟಿಕ್ಸ್ ನಲ್ಲಿ ಗೆಲ್ಲುತ್ತಾರಾ ?' ಎಂದು ಶಿವಣ್ಣ ಕೇಳಿದಕ್ಕೆ ಗುರುಕಿರಣ್ ''ಉಪ್ಪಿ ಖಂಡಿತ ಗೆಲ್ಲುತ್ತಾರೆ. ಅವರ ಜೊತೆಗೆ ಎಂದಿಗೂ ನಾವು ಇದ್ದೇವೆ'' ಎಂದರು. ಗುರು ಮಾತು ಕೇಳಿ ಉಪ್ಪಿ ಖುಷಿಯಾಗಿ ಅವರನ್ನು ತಬ್ಬಿಕೊಂಡರು.

More from Filmibeat

English summary
Kannada music director Gurukiran spoke about Real star Upendra political entry in Star Suvarna's new show 'No1 yari with Shivanna'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X