ಗುರುಕಿರಣ್ ಪ್ರಕಾರ ಹರಿಕೃಷ್ಣ ಕನ್ನಡದ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್
ಕನ್ನಡದಲ್ಲಿ ಸದ್ಯ ಹೊಸ ಹೊಸ ಸಂಗೀತ ನಿರ್ದೇಶಕರ ಆಗಮನ ಆಗುತ್ತಿದೆ. ಹಂಸಲೇಖ ನಂತರ ಗುರುಕಿರಣ್ ಕನ್ನಡದಲ್ಲಿ ಸಿಕ್ಕಾಪಟ್ಟೆ ಬಿಜಿ ಇದ್ದ ಮ್ಯೂಸಿಕ್ ಡೈರೆಕ್ಟರ್ ಆಗಿದ್ದರು. ಅವರ ಬಳಿಕ ಈಗ ಅರ್ಜುನ್ ಜನ್ಯ ಮತ್ತು ಹರಿಕೃಷ್ಣ ಬಹು ಬೇಡಿಕೆಯ ಸಂಗೀತ ನಿರ್ದೇಶಕರಾಗಿದ್ದಾರೆ. ಗುರುಕಿರಣ್ ಪ್ರಕಾರ ಹರಿಕೃಷ್ಣ ಸದ್ಯ ಕನ್ನಡದ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಆಗಿದ್ದಾರೆ.
ಉಪೇಂದ್ರ ಜೊತೆಗೆ ಇತ್ತೀಚಿಗಷ್ಟೆ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಬಂದಿದ್ದ ಗುರುಕಿರಣ್ ಒಂದು ಪ್ರಶ್ನೆಗೆ ಹರಿಕೃಷ್ಣ ಹೆಸರನ್ನು ತೆಗೆದುಕೊಂಡರು. ಶಿವಣ್ಣ ತಮ್ಮ ಪ್ರಶ್ನೆಯಲ್ಲಿ 'ಅರ್ಜುನ್ ಜನ್ಯ, ಹರಿಕೃಷ್ಣ, ಸಾಧು ಕೋಕಿಲ, ಕೆ.ಕಲ್ಯಾಣ್ ಈ ಸಂಗೀತ ನಿರ್ದೇಶಕರಿಗೆ ರಾಂಕ್ ಕೊಡಿ' ಎಂದರು. ಆಗ ಗುರುಕಿರಣ್ ಹರಿಕೃಷ್ಣ ಹೆಸರನ್ನು ಮೊದಲು ಹೇಳಿದರು.

ಎರಡನೇ ಹೆಸರನ್ನಾಗಿ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಹೆಸರನ್ನು ನಂತರ ಸಾಧು ಕೋಕಿಲ ಹಾಗೂ ಕೊನೆಯದಾಗಿ ಕೆ.ಕಲ್ಯಾಣ್ ಹೆಸರನ್ನು ಗುರುಕಿರಣ್ ಹೇಳಿದರು. ಅಂದಹಾಗೆ, ಈ ಹಿಂದೆ ಒಮ್ಮೆ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಮಾತನಾಡುವಾಗ ಗುರು ಇಂದಿನ ಮ್ಯೂಸಿಕ್ ಡೈರೆಕ್ಟರ್ ಗಳಲ್ಲಿ ಚರಣ್ ರಾಜ್ ಮತ್ತು ವಾಸುಕಿ ವೈಭವ್ ಒಳ್ಳೆಯ ಪ್ರತಿಭೆ ಇರುವ ಮ್ಯೂಸಿಷಿಯನ್ಸ್ ಗಳು ಎಂದು ಹೊಗಳಿದ್ದರು.


Click it and Unblock the Notifications











