ನನ್ನ ಮುಖ, ನನ್ನ ಇಷ್ಟ ; ಪ್ಲಾಸ್ಟಿಕ್ ಸರ್ಜರಿ ವದಂತಿ - ಉರಿದು ಬಿದ್ದ ನಟಿ

ಸೆಲೆಬ್ರೆಟಿಗಳಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದರೆ ಸಾಕು ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇದಕ್ಕೆ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳಿವೆ. ದೊಡ್ಡ ದೊಡ್ಡ ನಾಯಕಿಯರು ಈ ಪ್ರಯತ್ನ ಮಾಡಿದ್ದಾರೆ .ಕೆಲವರು ತಾವು ಪ್ಲಾಸ್ಟಿಕ್ ಸರ್ಜರಿಗೊಳಗಾದ ವಿಚಾರವನ್ನು ಒಪ್ಪಿಕೊಂಡರೆ...

ಇನ್ನೂ ಕೆಲವರು ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದಾರೆ. ಮತ್ತೂ ಕೆಲವರು ತಮ್ಮ ವಿರುದ್ಧ ಕೇಳಿ ಬಂದ ಈ ಮಾತುಗಳನ್ನು ಕೇಳಿ ಉರಿದು ಬಿದ್ದಿದ್ದಾರೆ. ಸದ್ಯ ಇದೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಚೆಲುವೆಯರ ಸಾಲಿನಲ್ಲಿ ಪ್ರಿಯಾಂಕ ಚಹರ್ ಚೌಧರಿಯ ಹೆಸರು ಕೂಡ ಕೇಳಿ ಬಂದಿದ್ದು ತಮ್ಮ ಕುರಿತು ಸಾರ್ವತ್ರಿಕ ವಲಯದಲ್ಲಿ ನಡೆಯುತ್ತಿರುವ ಈ ಚರ್ಚೆಯನ್ನು ಗಮನಿಸಿ ಪ್ರಿಯಾಂಕ ಚಹರ್ ಚೌಧರಿ ಉತ್ತರವನ್ನು ಕೂಡ ನೀಡಿದ್ದಾರೆ.

Guys It s My Face Priyanka Chahar Choudhary Slams Plastic Surgery Rumors With A Bold Reality Check

ಹೌದು, ಪ್ರಿಯಾಂಕ ಚಹರ್ ಚೌಧರಿ.. ಹಿಂದಿ ಕಿರುತೆರೆಯ ಚೆಲುವೆ. 2019ರಲ್ಲಿ ''ಘಟ್ ಬಂಧನ್'' ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶ ಮಾಡಿದ ಪ್ರಿಯಾಂಕ ಆ ನಂತರ ''ಯೇ ಹೈ ಚಾಹತೇ''.. ''ಉದಾರಿಯಾ''.. ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿ ಬರುವ ಹಿಂದಿಯ ''ಬಿಗ್ ಬಾಸ್'' 16ನೇ ಸೀಸನ್‌ನಲ್ಲಿ ಕೂಡ ಭಾಗವಹಿಸಿದರು. ಎರಡನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು.

ಇಂಥಾ ಪ್ರಿಯಾಂಕ ಚಹರ್ ಚೌಧರಿ ಹಿಂದಿ ಕಿರುತೆರೆಯ ಪ್ರಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಅವರ ಖ್ಯಾತ ಧಾರಾವಾಹಿ ''ನಾಗಿನ್ 7''ರಲ್ಲಿ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ನಾಗಿನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆ ಸಂಭ್ರಮದ ಅಲೆಯಲ್ಲಿರುವ ಪ್ರಿಯಾಂಕ ಸದ್ಯ ಹಲವರಿಗೆ ಸಂದರ್ಶನ ನೀಡುತ್ತಿದ್ದಾರೆ. ತಮ್ಮ ಸಂಭ್ರಮ ಹಂಚಿಕೊಳ್ತಿದ್ದಾರೆ.

ಆ ಪೈಕಿ ''ದಿ ಟೈಮ್ಸ್ ಆಫ್ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕ ತಮ್ಮ ವಿರುದ್ಧ ಕೇಳಿ ಬರುತ್ತಿರುವ ಪ್ಲಾಸ್ಟಿಕ್ ಮಾತುಗಳಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಪ್ರಿಯಾಂಕ ಚಹರ್ ಚೌಧರಿ ಈ ಮಾತು ಇಂದು ನಿನ್ನೆಯದ್ದಲ್ಲ. ಹಲವಾರು ದಿನಗಳಿಂದ ಕೇಳಿ ಬರುತ್ತಲೇ ಇದೆ ಎಂದು ಹೇಳಿದ್ದಾರೆ. ಕಳೆದ ವರ್ಷ ನನ್ನ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ನಾನ ಔಷಧಿಯನ್ನು ಹೆಚ್ಚೆಚ್ಚು ಸೇವಿಸಿದೆ ಎಂದು ಹೇಳಿರುವ ಪ್ರಿಯಾಂಕ ಆ್ಯಂಟಿಬಯಾಟಿಕ್‌ಗಳನ್ನು ತೆಗೆದುಕೊಂಡ ಹಿನ್ನೆಲೆ ನನ್ನ ತೂಕ ಕಡಿಮೆಯಾಯ್ತು, ಆದರೆ ಇದೇ ಸಮಯದಲ್ಲಿ ನನ್ನ ಮುಖ ಊದಿಕೊಂಡಿತ್ತು ಎಂದು ಹೇಳಿದ್ದಾರೆ. ಊದಿಕೊಂಡ ನನ್ನ ಮುಖವನ್ನು ನೋಡಿ ಜನ ಇಷ್ಟಾನುಸಾರ ಕಲ್ಪನೆ ಮಾಡಿಕೊಂಡರು ಎಂದಿದ್ದಾರೆ.

ಮುಂದುವರೆದು ಸೌಂದರ್ಯ ವರ್ಧನೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ಹೇಳಿರುವ ಪ್ರಿಯಾಂಕ, ಎಲ್ಲವೂ ವ್ಯೆಯಕ್ತಿಕ ಆಯ್ಕೆ, ನನ್ನ ಆಯ್ಕೆ. ನಾನು ಕಾಜಲ್ ಹಚ್ಚಿದರೂ ಅಥವಾ ಲೆನ್ಸ್‌ಗಳನ್ನು ಧರಿಸಿದರೂ ಕೂಡ ಜನರು ಮುಖಕ್ಕೆ ಏನೋ ಮಾಡಿಕೊಂಡಿದ್ದಾಳೆಂದು ಯೋಚನೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಇದು ನನ್ನ ಮುಖ, ನನಗೆ ನನ್ನದೇ ಆದ ವ್ಯಕ್ತಿತ್ವ ಇದೆ ಎಂದು ಕಿಡಿ ಕಾರಿದ್ದಾರೆ.

Guys It s My Face Priyanka Chahar Choudhary Slams Plastic Surgery Rumors With A Bold Reality Check

ರೂಪದ ಬಗ್ಗೆ ಜನ ಯಾಕೆ ಚರ್ಚೆ ಮಾಡಲು ಶುರು ಮಾಡುತ್ತಾರೆ ಎನ್ನುವುದೇ ನನಗೆ ಅರ್ಥವಾಗುವುದಿಲ್ಲ ಎಂದು ಹೇಳಿರುವ ಪ್ರಿಯಾಂಕ ಚೌಧರಿ ಎಲ್ಲರಿಗೂ ಅವರದ್ದೇ ಆದ ಸ್ವಾತಂತ್ರ್ಯ ಇರುತ್ತೆ, ಹಕ್ಕಿರುತ್ತೆ, ಅದನ್ನು ಇವರು ಅರ್ಥ ಮಾಡಿಕೊಳ್ಳದೇ ಸುಖಾ ಸುಮ್ಮನೆ ಟ್ರೋಲ್ ಮಾಡುತ್ತಾರೆ ಎಂದು ಗುಡುಗಿದ್ದಾರೆ. ನಿಜಾ ನಾವು ಸಾರ್ವಜನಿಕ ಕ್ಷೇತ್ರದಲ್ಲಿದ್ದೇವೆ, ಹಾಗೆಂದ ಮಾತ್ರಕ್ಕೆ ಬಾಯಿಗೆ ಬಂದಂತೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಕೂಡ ಹೇಳಿದ್ದಾರೆ. ನಾನು ಟ್ರೋಲ್‌ ಮತ್ತು ಅಪಹಾಸ್ಯವನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳುತ್ತೇನೆ, ಆದರೆ ಇಂತಹ ಕಾಮೆಂಟ್‌ಗಳನ್ನು ನಿಭಾಯಿಸಲು ಸಾಧ್ಯವಾಗದ ಅನೇಕ ಜನರು ನಮ್ಮ ನಡುವೆ ಇದ್ದಾರೆ ಎಂದು ಕೂಡ ಪ್ರಿಯಾಂಕ ಹೇಳಿದ್ದಾರೆ.

More from Filmibeat

English summary
Is Priyanka Chahar Choudhary’s new look natural? The Bigg Boss star reacts to plastic surgery allegations and cosmetic procedure rumors. Read her official statement on why "everyone has their own journey" regarding beauty and self-care.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X