For Quick Alerts
ALLOW NOTIFICATIONS  
For Daily Alerts

ಶಶಿ ಕುಮಾರ್ ಪಾಲಿಗೆ ಮರುಜೀವ ಕೊಟ್ಟಿದ್ದು ಆ ವ್ಯಕ್ತಿ.!

|
Weekend With Ramesh Season 4: ಶಶಿಕುಮಾರ್‍ಗೆ ಒಂದೂ ಸಿನೆಮಾ ಸಿಗದಂತೆ ಮಾಡಿತ್ತು ಆ ವರದಿಗಳು |FILMIBEAT KANNADA

1998 ಜುಲೈ 31 ರಂದು ಬೆಂಗಳೂರಿನ ಶಿವಾನಂದ ವೃತ್ತದಲ್ಲಿ ಸುಪ್ರೀಂ ಹೀರೋ ಶಶಿ ಕುಮಾರ್ ಅವರ ಕಾರು ಅಪಘಾತವಾಗುತ್ತೆ. ಈ ಆಕ್ಸಿಡೆಂಟ್ ನಲ್ಲಿ ಶಶಿ ಕುಮಾರ್ ಅವರ ಮುಖಕ್ಕೆ ಗಂಭೀರ ಗಾಯಗಳಾಗಿ ಮೂಗಿಗೆ ಹೆಚ್ಚು ಡ್ಯಾಮೇಜ್ ಆಗುತ್ತೆ.

ಸತತ 8 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನೀಡಿದ ಬಳಿಕ ಒಂದು ಹಂತಕ್ಕೆ ಶಶಿ ಕುಮಾರ್ ಅವರ ಮುಖ ಚೇತರಿಕೆಯಾಗುತ್ತೆ. ಈ ಅಪಘಾತ ಸುಪ್ರೀಂ ಹೀರೋ ಬದುಕಿನಲ್ಲಿ ಆಟವಾಡಿತು. ಈ ಘಟನೆ ಬಳಿಕ ಶಶಿ ಕುಮಾರ್ ಡ್ಯಾನ್ಸ್ ಮಾಡೋಕೆ ಆಗಲ್ಲ, ಫೈಟ್ ಮಾಡೋಕೆ ಆಗಲ್ಲ ಅದೂ ಇದೂ ಎಂದು ಪತ್ರಿಕೆಗಳಲ್ಲಿ ವರದಿಯಾದ ಪರಿಣಾಮ ಯಾವ ಸಿನಿಮಾನೂ ಸಿಗಲ್ಲ.

ಶಶಿಕುಮಾರ್ ಬದುಕಿನಲ್ಲೇ ಬಿರುಗಾಳಿ ಎಬ್ಬಿಸಿತ್ತು ಆ ದುರ್ಘಟನೆ!

ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಶಿ ಕುಮಾರ್ ಗೆ ಆಗ ಮದುವೆ ಆಗಿ ಇಬ್ಬರು ಮಕ್ಕಳು ಕೂಡ ಇದ್ದರು. ಎಲ್ಲವೂ ಮುಗಿಯಿತು ಎಂದು ಯೋಚನೆ ಮಾಡುತ್ತಿದ್ದ ಸಮಯದಲ್ಲಿ ಆ ಒಬ್ಬ ವ್ಯಕ್ತಿ ಶಶಿ ಕುಮಾರ್ ಜೀವನವನ್ನ ಬದಲಿಸಿದ್ರು. ಸ್ವತಃ ಶಶಿ ಅವರೇ ಇವರ ಬಗ್ಗೆ ಹೆಚ್ಚು ಗೌರವ ಹೊಂದಿದ್ದಾರೆ. ಯಾರದು? ಮುಂದೆ ಓದಿ....

ನಿರ್ಮಾಪಕಿ ಜಯಶ್ರೀ

ಶಶಿ ಕುಮಾರ್ ಗೆ ಯಾವ ಸಿನಿಮಾನೂ ಸಿಕ್ಕಿರಲಿಲ್ಲ. ಇದೇ ಬೇಸರದಲ್ಲಿ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದ ಸಮಯದಲ್ಲಿ ನಿರ್ದೇಶಕ ಡಿ ರಾಜೇಂದ್ರ ಬಾಬು ಅವರ ಜೊತೆಯಲ್ಲಿ ನಿರ್ಮಾಪಕಿ ಜಯಶ್ರೀ ಅವರು ಮನೆಗೆ ಬಂದರಂತೆ. ಒಂದು ಸಿನಿಮಾ ಮಾಡ್ತಿದ್ದೀನಿ, ಐದು ಜನ ಹೀರೋ. ಅದರಲ್ಲಿ ನೀವು ಒಬ್ಬರು ಆಕ್ಟ್ ಮಾಡಿ ಎಂದು ಅವಕಾಶ ಮಾಡಿಕೊಟ್ಟರಂತೆ.

ಈ ಎರಡು ವಿಷ್ಯಕ್ಕೆ ಶಶಿ ಕುಮಾರ್ ಬಗ್ಗೆ ಪತ್ನಿಗೆ ಬೇಸರ ಇದ್ಯಂತೆ.!

ಸುಪ್ರೀಂ ಹೀರೋ ಜೀವನ ಬದಲಿಸಿದ 'ಹಬ್ಬ'

ಹೀಗೆ ನಿರ್ಮಾಪಕಿ ಜಯಶ್ರೀ ಕೊಟ್ಟ ಅವಕಾಶದ ಪ್ರತಿಫಲವೇ ಹಬ್ಬ ಸಿನಿಮಾ. ಈ ಚಿತ್ರ ಸುಪ್ರೀಂ ಹೀರೋ ಜೀವನ ಬದಲಿಸುತ್ತೆ. ಡಾ ವಿಷ್ಣುವರ್ಧನ್, ಅಂಬರೀಶ್, ದೇವರಾಜ್, ರಾಮ್ ಕುಮಾರ್ ಮತ್ತು ಶಶಿ ಕುಮಾರ್ ನಟಿಸಿದ ಚಿತ್ರ. ಈ ಸಿನಿಮಾ ಸೂಪರ್ ಹಿಟ್ ಆಗುತ್ತೆ. ಇಲ್ಲಿಂದ ಮತ್ತೆ ಶಶಿ ಕುಮಾರ್ ಇಂಡಸ್ಟ್ರಿಯಲ್ಲಿ ಬ್ಯುಸಿ ಆಗ್ತಾರಂತೆ.

ಈ ಸಿನಿಮಾ ಬಗ್ಗೆ ಪತ್ನಿಗೂ ಖುಷಿ ಇದೆ

ಈ ಸಿನಿಮಾ ಮಾಡಿದ್ದು ಶಶಿ ಕುಮಾರ್ ಅವರ ಪತ್ನಿಗೂ ಖುಷಿ ಇತ್ತು. ಯಾಕಂದ್ರೆ, ಈ ಚಿತ್ರದಲ್ಲಿ ಶಶಿ ಕುಮಾರ್ ನಿರ್ವಹಿಸಿದ್ದ ಪಾತ್ರ ಅವರ ನಿಜ ಜೀವನಕ್ಕೆ ಬಹಳ ಹತ್ತಿರವಾಗಿತ್ತಂತೆ. ಸುಳ್ಳನ್ನೇ ಹೇಳದ ವ್ಯಕ್ತಿ ಪಾತ್ರದಲ್ಲಿ ಸುಪ್ರೀಂ ಹೀರೋ ನಟಿಸಿದ್ದರು.

'ಆ ಅಪಘಾತ'ದ ಬಳಿಕ ಶಶಿಕುಮಾರ್ ಎದುರಿಸಿದ ಕಷ್ಟ ಯಾರಿಗೂ ಬೇಡ

ಡಿ ರಾಜೇಂದ್ರ ಬಾಬು ನಿರ್ದೇಶನದ ಚಿತ್ರ

1999 ಏಪ್ರಿಲ್ 16 ರಂದು ಬಿಡುಗಡೆಯಾದ ಈ ಚಿತ್ರವನ್ನ ಡಿ ರಾಜೇಂದ್ರ ಬಾಬು ನಿರ್ದೇಶನ ಮಾಡಿದ್ದರು. ಶಶಿ ಕುಮಾರ್ ಮನೆಗೆ ಜಯಶ್ರೀ ಅವರ ಜೊತೆ ನಿರ್ದೇಶಕ ಡಿ ಬಾಬು ಕೂಡ ಹೋಗಿದ್ದರು. ಐವರು ಸ್ಟಾರ್ ನಟರ ಜೊತೆ ಜಯಪ್ರದಾ, ಊರ್ವಶಿ, ಕಸ್ತೂರಿ, ಚಾರುಲತಾ, ವಿಜಯಲಕ್ಷ್ಮಿ ಕೂಡ ನಟಿಸಿದ್ದರು. ಹಂಸಲೇಖ ಸಂಗೀತವಿತ್ತು.

English summary
Kannada actor Shashi kumar completely struggled after he met accident. on that time producer jayashree has gives second chance to him with habba movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more