ಹಳ್ಳಿ ಹೈದರ ಜೊತೆ ಮಾಲಾಶ್ರೀ, ಹರಿಪ್ರಿಯಾ, ಐಂದ್ರಿತಾ ರೇ ಎಂಟ್ರಿ

ಸ್ಟಾರ್ ಸುವರ್ಣ ವಾಹಿನಿಯ 'ಹಳ್ಳಿ ಹೈದ ಪ್ಯಾಟೇಗ್ ಬಂದ' ಕಾರ್ಯಕ್ರಮ ಸೆಪ್ಟೆಂಬರ್ 24 ರಿಂದ ಆರಂಭವಾಗಲಿದ್ದು, ಈ ಬಾರಿ ವಿಶಿಷ್ಟ ರೀತಿಯಲ್ಲಿ ಮೂಡಿಬರಲಿದೆ. ಈ ಬಾರಿ 12 ಹಳ್ಳಿ ಹುಡುಗರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬರ್ತಿದ್ದಾರೆ.

ಸೆಪ್ಟೆಂಬರ್ 23ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕನಸುಗಳನ್ನು ಹೊತ್ತು ಪ್ಯಾಟೇಗೆ ಬಂದಿರುವ 12 ಹುಡುಗರನ್ನು ಕನಸಿನ ರಾಣಿ ಮಾಲಾಶ್ರೀ, ನಟಿ ಹರಿಪ್ರಿಯಾ ಮತ್ತು ಐಂದ್ರಿತಾ ರೇ ಬರಮಾಡಿಕೊಳ್ಳಲ್ಲಿದ್ದಾರೆ.

halli haida pyatege banda starts from september 24th

ಕರ್ನಾಟಕದ ಮೂಲೆ ಮೂಲೆಯಿಂದ ಬಂದಿರುವ 12 ಹಳ್ಳಿ ಹುಡುಗರು ಬೆಂಗಳೂರಿಗೆ ಬರುವಾಗ ಅವರವರ ಊರಿನ ನೂರಾರು ಜನ ಒಟ್ಟಾಗಿ ಮೆರೆವಣಿಗೆ ಮಾಡಿ, ಆಶಿರ್ವದಿಸಿ ಈ ಹಳ್ಳಿ ಹುಡುಗರನ್ನು ಬೀಳ್ಕೊಟ್ಟಿದ್ದಾರೆ.

halli haida pyatege banda starts from september 24th

ಈ ಬಾರಿಯ ಕಾರ್ಯಕ್ರಮ ಬಹಳ ಭಿನ್ನವಾಗಿದೆ. ತಂತ್ರಙ್ಞಾನದ ಬಳಕೆಯಿಂದಾಗಿ ಹಳ್ಳಿ ಮತ್ತು ಪಟ್ಟಣದ ನಡುವಿನ ಅಂತರ ಮೊದಲಿನಂತಿಲ್ಲ. ಈ ಬಾರಿ ಹಳ್ಳಿ ಹುಡುಗರನ್ನ ಪ್ಯಾಟೆ ಹುಡುಗರನ್ನಾಗಿಸುವ ಬದಲು, ಅವರ ಕನಸುಗಳನ್ನು ಪೋಷಿಸಲು ಸ್ಟಾರ್ ಸುವರ್ಣ ವಾಹಿನಿ ಮುಂದಾಗಿದೆ.

halli haida pyatege banda starts from september 24th

ಈ ನಿಟ್ಟಿನಲ್ಲಿ ಹಳ್ಳಿ ಹುಡುಗರು ಪ್ಯಾಟೆಗೆ ಬರಲಿದ್ದು, ಇಲ್ಲಿನ ಸವಾಲುಗಳನ್ನು ಎದುರಿಸಲಿದ್ದಾರೆ. ಅವರಿಗೆ ಸಹಾಯ ಮಾಡಲು 12 ಹುಡುಗಿಯರು ಮೆಂಟರ್ಸ್ ಆಗಿರಲಿದ್ದಾರೆ. ಈ ಬಾರಿಯ ಸ್ಪರ್ಧಿಗಳು ಸಹ ಒಬ್ಬರಿಗಿಂತ ಮತ್ತೊಬ್ಬರು ವಿಶೇಷ ವ್ಯಕ್ತಿತ್ವ ಮತ್ತು ಹಿನ್ನಲೆಯುಳ್ಳವರಾಗಿದ್ದಾರೆ.

halli haida pyatege banda starts from september 24th

ಕಿತ್ತೂರಿನ ರೈತ ದೇವೇಂದ್ರ, ಚಾಮರಾಜನಗರದ ರಂಗಕಲಾವಿದ ಮನೋಜ್, ಹೊನ್ನವಾರದ ಕಬ್ಬಿನ ಹಾಲಿನ ವ್ಯಾಪಾರಿ ಶ್ರೀರಾಮ, ತುಮಕೂರಿನ ಹಾಲಿನ ವ್ಯಾಪಾರಿ ಮಂಜುನಾಥ, ಕಾರವಾರದ ಕೂಲಿ ಕಾರ್ಮಿಕ ಸಂತೋಷ, ಬಾಗಲಕೋಟೆ ಮೀನುಗಾರ ರಮೇಶ, ದಾವಣಗೆರೆಯ ಟ್ರ್ಯಾಕ್ಟರ್ ಚಾಲಕ ನಾಗರಾಜ, ಹಾಸನದ ನಿರುದ್ಯೋಗಿ ಯುವಕ ಪ್ರಮೋದ್ ಮತ್ತು ಕೂಲಿ ಕೆಲಸ ಮಾಡುವ ವರಪ್ರಸಾದ್, ಪಿರಿಯಾಪಟ್ಟಣದ ಕಾಫಿ ತೋಟದ ಕೆಲಸಗಾರ ಐಯ್ಯಪ್ಪ, ವಿಜಯಪುರದ ಕುಸ್ತಿಪಟು ಅಮಗೊಂಡ ಈ ಬಾರಿ ಪ್ಯಾಟೆಗೆ ಬರುತ್ತಿರುವ ಹಳ್ಳಿ ಹುಡುಗರು.

More from Filmibeat

English summary
Star Suvarna popular reality show 'Halli Hyda Pyateg Banda' will be telecasting from next monday .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X