twitter
    For Quick Alerts
    ALLOW NOTIFICATIONS  
    For Daily Alerts

    ''ಕನ್ನಡದ ಸುದ್ದಿಗೆ ಯಾರು ಬರಬೇಡಿ, ಅದರ ಪಾಡಿಗೆ ಬಿಡಿ'' ನಾದಬ್ರಹ್ಮನ ಅಭಿಮಾನದ ನುಡಿ

    |

    Recommended Video

    Sa Ri Ga Ma Pa 16 : ಕನ್ನಡದ ತಂಟೆಗೆ ಬರಬೇಡಿ..! | FILMIBEAT KANNADA

    ಇಡೀ ದೇಶದಲ್ಲಿ ಒಂದೇ ಭಾಷೆ ಇರಬೇಕು, ಎಲ್ಲರೂ ಇಂಗ್ಲೀಷ್ ಕಲಿಯಬೇಕು, ಹಿಂದಿ ಏರಿಕೆ ಆಗುತ್ತಿದೆ, ಕನ್ನಡಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಈ ವಿಷಯಗಳ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ.

    ಇಡೀ ದೇಶದಲ್ಲಿ ಒಂದೇ ಭಾಷೆ ಇರಬೇಕು ಎನ್ನುವ ವಿಷಯದ ಬಗ್ಗೆ ಈಗ ನಾದಬ್ರಹ್ಮ ಹಂಸಲೇಖ ವಿರೋಧ ವ್ಯಕ್ತಪಡಿಸಿದ್ದಾರೆ. ಸರಿಗಮಪ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡುತ್ತ ಅವರು ಭಾವುಕವಾಗಿದ್ದಾರೆ.

    ವಿ ಮನೋಹರ್ ವಿವರಿಸಿದ ಹಂಸಲೇಖ ಜೊತೆಗಿನ ಅನುಬಂಧ ವಿ ಮನೋಹರ್ ವಿವರಿಸಿದ ಹಂಸಲೇಖ ಜೊತೆಗಿನ ಅನುಬಂಧ

    ''ಒಂದೇ ಭಾಷೆ ಮಾಡುತ್ತೇನೆ ಎನ್ನುವುದು ಮೂರ್ಕತನ. ನಿಸರ್ಗದಲ್ಲಿ ಹೇಗೆ ವೈವಿದ್ಯತೆ ಇದೆಯೋ ಹಾಗೆಯೇ ಭಾಷೆಯಲ್ಲಿ ಕೂಡ ವೈವಿದ್ಯತೆ ಇದೆ.'' ಎಂದು ಹೇಳಿದರು.

    ಕನ್ನಡದ ಶ್ರೇಷ್ಟತೆ ಬಗ್ಗೆ ಮಾತನಾಡಿದ ಹಂಸಲೇಖ ಕೊಂಚ ಖರವಾಗಿಯೇ ಕನ್ನಡದ ಸುದ್ದಿಗೆ ಯಾರು ಬರಬೇಡಿ ಎಂದು ಹೇಳಿದರು. ಮುಂದೆ ಓದಿ...

    ಜಗತ್ತಿಗೆ ಹೊಸ ಸಾಹಿತ್ಯ ಪ್ರಕಾರ ತೋರಿಸಿದ್ದು ಕನ್ನಡ

    ಜಗತ್ತಿಗೆ ಹೊಸ ಸಾಹಿತ್ಯ ಪ್ರಕಾರ ತೋರಿಸಿದ್ದು ಕನ್ನಡ

    ''ನವೋದಯ ಸಾಹಿತ್ಯ ಕರ್ನಾಟಕದಲ್ಲಿ ಜರುಗದೆ ಇದ್ದಿದ್ದರೆ ಇಡೀ ಜಗತ್ತಿಗೆ ಒಂದು ಹೊಸ ಸಾಹಿತ್ಯ ಪ್ರಕಾರವೇ ತಿಳಿಯುತ್ತಿರಲಿಲ್ಲ. ಕುವೆಂಪು, ಮಾಸ್ತಿ, ದರಾ ಬೇಂದ್ರೆ ಎಲ್ಲ ದೊಡ್ಡ ದೊಡ್ಡ ಕವಿಗಳು ಹುಟ್ಟಿದ್ದು ಆ ಮೂವತ್ತು ವರ್ಷಗಳಲ್ಲಿ. ಇವತ್ತು ಇಂಗ್ಲೀಷ್ ಅನ್ನು ಕಟ್ಟಿಕೊಂಡಿರುವ ಇಲ್ಲಿ ಯಾವ ಕವಿ ಹುಟ್ಟುತ್ತಾನೆ. ಬರೀ ಕಪಿಗಳು ಹುಟ್ಟುತ್ತವೆ ಅಷ್ಟೇ.''

    ಇದು ದೊಡ್ಡ ದುಃಖದ ವಿಷಯ

    ಇದು ದೊಡ್ಡ ದುಃಖದ ವಿಷಯ

    ''ಕನ್ನಡವನ್ನು ಕಾಪಾಡಬೇಕು. ಕನ್ನಡವನ್ನು ಗಾಡವಾಗಿ ಪ್ರೀತಿಸುವವರು ಈ ರಾಜ್ಯದಲ್ಲಿ ಕೋಟಿಗಟ್ಟಲೆ ಜನ ಇದ್ದಾರೆ. ಇಂಗ್ಲೀಷ್ ಭಾಷೆ, ವ್ಯಾಪಾರ ಈ ಲವ್ಕಿಕ ವಿಷವನ್ನು ಸಂಸ್ಕೃತಿ ಜೊತೆಗೆ ಸೇರಿಸುತ್ತಾರೆ. ಅದೇ ದೊಡ್ಡ ದುಃಖದ ವಿಷಯ. ಇಂಗ್ಲೀಷ್ ಅನ್ನು ಯಾರ್ ಕಲಿಬೇಡ ಅಂತ ಹೇಳುತ್ತಾರೆ.''

    ಹಂಸಲೇಖ ಹುಟ್ಟುಹಬ್ಬಕ್ಕೆ ದೊಡ್ಡ ಸರ್ಪ್ರೈಸ್ ನೀಡಿದ ಸರಿಗಮಪ ತಂಡ ಹಂಸಲೇಖ ಹುಟ್ಟುಹಬ್ಬಕ್ಕೆ ದೊಡ್ಡ ಸರ್ಪ್ರೈಸ್ ನೀಡಿದ ಸರಿಗಮಪ ತಂಡ

    ಕನ್ನಡವೇ ಬೇಡ ಎನ್ನುವುದು ಮೂರ್ಕತನ

    ಕನ್ನಡವೇ ಬೇಡ ಎನ್ನುವುದು ಮೂರ್ಕತನ

    ''ಕನ್ನಡಕ್ಕೆ ಮೊದಲು ಸಂಸ್ಕೃತ, ಹಿಂದಿ, ಆಮೇಲೆ ಅರಬ್, ಪರ್ಸಿ, ಉರ್ದು ಹೀಗೆ ಎಷ್ಟೊ ಭಾಷೆಗಳು ಸ್ಪರ್ಧೆ ನೀಡಿದವು. ಈ ಎಲ್ಲ ಭಾಷೆಯಲ್ಲಿ ಇದ್ದ ಒಳ್ಳೆಯದನ್ನು ಇಟ್ಟುಕೊಂಡು ಕನ್ನಡ ಇನ್ನೂ ದಷ್ಟಪುಷ್ಟವಾಗಿ ಬೆಳೆದಿದೆ. ಈಗ ಇಂಗ್ಲೀಷ್ ಬಂದಿದೆ. ಅದನ್ನು ಸೇರಿಸಿಕೊಳ್ಳುತ್ತದೆ. ಕನ್ನಡವೇ ಬೇಡ ಅದೇ ದೊಡ್ಡದು ಎನ್ನುವುದು ಮೂರ್ಕತನ.

    ನಿಸರ್ಗದ ರೀತಿ ಭಾಷೆಯೂ ವೈವಿದ್ಯವಾಗಿದೆ

    ನಿಸರ್ಗದ ರೀತಿ ಭಾಷೆಯೂ ವೈವಿದ್ಯವಾಗಿದೆ

    ''ಈ ದೇಶ ಒಗ್ಗುಡಿರುವುದು ಭಾಷೆಯಿಂದ. ಇಡೀ ದೇಶದಲ್ಲಿ ಒಂದೇ ಭಾಷೆ ಇದ್ದರೆ, ಒಂದೇ ಮರ ಇರುತ್ತಿತ್ತು. ಆಗಿದ್ದರೆ ಅದನ್ನು ನಿಸರ್ಗ ಒಪ್ಪುತ್ತದೆಯೇ. ನಿಸರ್ಗವೂ ವೈವಿದ್ಯವಾಗಿ ಇರಬೇಕು. ಮನುಷ್ಯ ಜೀವನವೂ ವೈವಿದ್ಯವಾಗಿ ಇರಬೇಕು. ಊಟ ತಿಂಡಿ ವಸತಿ ಎಲ್ಲವೂ ವೈವಿದ್ಯವಾಗಿ ಇರಬೇಕು. ಅದೇ ರೀತಿ ಭಾಷೆ ಕೂಡ ವೈವಿದ್ಯವಾಗಿದೆ.'' - - ಹಂಸಲೇಖ, ಸಂಗೀತ ನಿರ್ದೇಶಕ, ಗೀತರಚನೆಕಾರ

    ಕನ್ನಡದ ಸುದ್ದಿಗೆ ಯಾರು ಬರಬೇಡಿ

    ಕನ್ನಡದ ಸುದ್ದಿಗೆ ಯಾರು ಬರಬೇಡಿ

    ''ಈ ದೇಶದ ಸಂವಿಧಾನದ ಒಕ್ಕೂಟ ವ್ಯವಸ್ಠೆ ಭಾಷೆಯಿಂದ ನಿರ್ಮಿತವಾಗಿದೆ. ಆ ಭಾಷೆಯ ಗೌರವವನ್ನು ಕಿತ್ತು ಹಾಕಿ, ನಾನು ಅದು ಮಾಡುತ್ತೇನೆ.. ಇದು ಮಾಡುತ್ತೇನೆ.. ಒಂದು ಮಾಡುತ್ತೇನೆ.. ಅದೆಲ್ಲ ಮೂರ್ಕತನ. ನಾವು ಯಾರು ಅದನು ಒಂದೇ ಮಾಡುವುದಕ್ಕೆ. ಕನ್ನಡದ ಸುದ್ದಿಗೆ ಯಾರು ಬರಬೇಡಿ. ನಿಮ್ಮ ನಿಮ್ಮ ಬುದ್ದಿ ಉಪಯೋಗಿಸಿಕೊಂಡು ಈ ದೇಶ ಹಾಳಿಕೊಂಡು ಸುಖವಾಗಿ ಇರೀ. ಕನ್ನಡವನ್ನು ಅದರ ಪಾಡಿಗೆ ಬಿಡಿ.'' - ಹಂಸಲೇಖ, ಸಂಗೀತ ನಿರ್ದೇಶಕ, ಗೀತರಚನೆಕಾರ

    English summary
    Nadabrahma Hamsalekha become emotional while speaking about kannada language in Saregamapa 16 program.
    Tuesday, June 25, 2019, 16:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X