twitter
    For Quick Alerts
    ALLOW NOTIFICATIONS  
    For Daily Alerts

    ಡಿ.ಕೆ.ಶಿವಕುಮಾರ್‌ ಜೊತೆ ಹೆಜ್ಜೆ ಹಾಕಲಿದ್ದಾರೆ ಹಂಸಲೇಖ

    |

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಯೋಜನೆಗಾಗಿ ಪಾದಾಯಾತ್ರೆ ಮಾಡಲಿದ್ದು, ಇದಕ್ಕಾಗಿ ಜನ ಬೆಂಬಲ, ಸೆಲೆಬ್ರಿಟಿ ಬೆಂಬಲವನ್ನು ಪಡೆಯುವ ಕಾಯಕದಲ್ಲಿ ತೊಡಗಿದ್ದಾರೆ.

    ಮೇಕೆದಾಟು ಪಾದಯಾತ್ರೆಗೆ ಹಲವು ಸಂಘಟನೆಗಳ ಬೆಂಬಲ ಕೋರಿರುವ ಡಿ.ಕೆ.ಶಿವಕುಮಾರ್, ಎರಡು ದಿನದ ಹಿಂದಷ್ಟೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ಚಿತ್ರರಂಗದ ಬೆಂಬಲವನ್ನು ಕೋರಿದ್ದರು. ಇದೀಗ ರಿಯಾಲಿಟಿ ಶೋಗೆ ಭೇಟಿ ನೀಡಿ ಅಲ್ಲಿಯೂ ಮೇಕೆದಾಟು ಯೋಜನೆಯ ಮಹತ್ವ, ಅನುಕೂಲ, ಪಾದಯಾತ್ರೆಯ ರೂಪುರೇಷೆ ಇತರೆ ವಿಚಾರಗಳ ಬಗ್ಗೆ ಮಾತನಾಡಿ, ಬೆಂಬಲಕ್ಕೆ ಮನವಿ ಮಾಡಿದ್ದಾರೆ.

    ಕನ್ನಡದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ 'ಸರಿಗಮಪ' ವೇದಿಕೆಗೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್, ಹಂಸಲೇಖ, ವಿಜಯ ಪ್ರಕಾಶ್, ಅರ್ಜುನ್ ಜನ್ಯ ಅವರುಗಳ ಮೂಲಕ ರಾಜ್ಯದ ಬೆಂಬಲವನ್ನು ಪಾದಯಾತ್ರೆಗಾಗಿ ಕೇಳಿದರು.

     Hamsalekha Extend His Support To DK Shivakumars Padayathra For Mekedatu
    ಪಾದಯಾತ್ರೆಗೆ ಸಂಗೀತ ನಿರ್ದೇಶಕ ಹಂಸಲೇಖ ಬೆಂಬಲ ಸೂಚಿಸಿದ್ದು, ಪಾದಯಾತ್ರೆಗಾಗಿ ವಿಶೇಷವಾಗಿ ಎರಡು ಹಾಡುಗಳನ್ನು ರಚಿಸಿಕೊಡುವುದಾಗಿಯೂ ಹೇಳಿದ್ದಾರಂತೆ. ಹಂಸಲೇಖ ರಚಿಸಲಿರುವ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಹಾಡುಗಳು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

    ಇತ್ತೀಚೆಗಷ್ಟೆ ಸಾಹಿತಿ ಎಸ್.ಜಿ ಸಿದ್ದರಾಮಯ್ಯ ಅವರ 'ಯರೆಬೇವು' ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೊಡನೆ ವೇದಿಕೆ ಹಂಚಿಕೊಂಡಿದ್ದ ಹಂಸಲೇಖ, ವಚನ ಸಾಹಿತ್ಯ, ಡೆಮೊಕ್ರಸಿ ಹಾಗೂ ಸಿದ್ದರಾಮಯ್ಯ ಅವರ ಬಗ್ಗೆ ಮಾತಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕಾರ್ಯಗಳನ್ನು ಮನಸಾರೆ ಹೊಗಳಿದ ಹಂಸಲೇಖ. ಕರ್ನಾಟಕಕ್ಕೆ ಸಿದ್ಧರಾಮಯ್ಯ ನೀಡಿದ ಕೊಡುಗೆಗಳ ಬಗ್ಗೆ ವೇದಿಕೆ ಮೇಲೆ ಮಾತಾಡಿದರು. ಮತ್ತೆ ಈ ರಾಜ್ಯಕ್ಕೆ ಸಿದ್ದರಾಮ್ಯ ಮುಖ್ಯಮಂತ್ರಿ ಆಗಬೇಕು ಅಂತ ಹಂಸಲೇಖ ಹೇಳಿದರು. ''ಈ ಧರ್ಮೋಕ್ರಸಿಯನ್ನು ಪಕ್ಕಕ್ಕೆ ಸರಿಸಿ, ಡೆಮೊಕ್ರಸಿಯನ್ನು ತಂದುಕೊಡಲಿ. ಹಾಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಾಡನ್ನು ಮತ್ತೆ ಹಾಲಾಗಿಸಲಿ'' ಎಂದು ಹಂಸಲೇಖ ಅಂದು ಹೇಳಿದ್ದರು.

    ಅದೇ ವೇದಿಕೆಯಲ್ಲಿ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಹಂಸಲೇಖ ಅವರು ಜಾತಿವಾದ, ಧರ್ಮಾಂದತೆ ಬಗ್ಗೆ ಈ ಹಿಂದೆ ಆಡಿದ್ದ ಮಾತುಗಳಿಗೆ ಬೆಂಬಲ ಸೂಚಿಸಿದರು. ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಆಡಿದ್ದ ಮಾತು ಸರಿಯಾಗಿಯೇ ಇದೆ ಎಂದು ಸಹ ಸಿದ್ದರಾಮಯ್ಯ ಹೇಳಿದರು.

    English summary
    Music director, writer Hamsalekha extended his support to Congress leader DK Shivakumar for his Padayatra for Mekedatu. He writing two songs for Mekedatu padayatra.
    Saturday, January 1, 2022, 9:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X