»   »  ಸೋಮೇಶ್ವರ್ ಗೆ ಅರುವತ್ತು, ಥಟ್ ಅಂತ ವಿಶ್ ಮಾಡಿ

ಸೋಮೇಶ್ವರ್ ಗೆ ಅರುವತ್ತು, ಥಟ್ ಅಂತ ವಿಶ್ ಮಾಡಿ

By Rajendra
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಚಾನಲ್ ಗಳನ್ನು ಸರ್ಫ್ ಮಾಡುತ್ತಾ ಮುಂದಕ್ಕೆ ಸಾಗುತ್ತಿರುವವರನ್ನು ಥಟ್ ಅಂತ ತಡೆದು ನಿಲ್ಲಿಸುವ ಕಾರ್ಯಕ್ರಮ ಎಂದರೆ ಚಂದನ ವಾಹಿನಿಯ 'ಥಟ್ ಅಂತ ಹೇಳಿ'. ಈ ಕ್ವಿಜ್ ಕಾರ್ಯಕ್ರಮ ಕಾಣಿಸಿಕೊಂಡರೆ ಸಾಕು ಜಪ್ಪಯ್ಯ ಅಂದ್ರು ವೀಕ್ಷಕರು ಆಚೆಈಚೆ ಕದಲಾಡಿದರೆ ಕೇಳಿ!

  ಈ ಕಾರ್ಯಕ್ರಮದ ರೂವಾರಿ ಡಾ.ನಾ. ಸೋಮೇಶ್ವರ ಅವರು ಅಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಸತತ 13 ವರ್ಷಗಳಿಂದ ಥಟ್ ಅಂತ ಹೇಳಿ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು ತನ್ನ ಜನಪ್ರಿಯತೆಯನ್ನು ಕಾಯ್ದಿಸಿಕೊಂಡು ಬಂದಿರುವುದು ವಿಶೇಷ. ಯಾವುದೇ ಸ್ಪಾನ್ಸರ್ ಶಿಪ್ ಇಲ್ಲದಂತೆ ಮುನ್ನುಗ್ಗುತ್ತಿರುವುದು ಈ ಶೋ ಸ್ಪೆಷಾಲಿಟಿ. [ನಾ.ಸೋಮೇಶ್ವರ ಸಂದರ್ಶನ]

  ಜನವರಿ 4ರ 2002ರಂದು ಆರಂಭವಾದ ಈ ಕಾರ್ಯಕ್ರಮ ಕೋಟ್ಯಾಂತರ ಕನ್ನಡಿಗರನ್ನು ರಂಜಿಸುವುದರ ಜೊತೆಗೆ ಅವರ ಜ್ಞಾನದಾಹವನ್ನೂ ಇಂಗಿಸುತ್ತಿದೆ. ಈ ಕಾರ್ಯಕ್ರಮದ ನಿರೂಪಕರಾದ ಸೋಮೇಶ್ವರ ನಾರಪ್ಪ ಅವರಿಗೆ ಇಂದು (ಮೇ.14) ಜನುಮದಿನ.

  ತಮ್ಮ ಫೇಸ್ ಬುಕ್ ಟೈಮ್ ಲೈನ್ ನಲ್ಲಿ ಸೋಮೇಶ್ವರ್ ಅವರು ತಮ್ಮ ಹುಟ್ಟುಹಬ್ಬದ ಬಗ್ಗೆ ಸ್ವಲ್ಪ ತಮಾಷೆಯಾಗಿ, ಒಂಚೂರು ಗಂಭೀರವಾಗಿ ಬರೆದುಕೊಂಡಿದ್ದಾರೆ. "ಇಂದಿಗೆ ನಾಲ್ಕು ಕತ್ತೆಗಳ ವರ್ಷಗಳಾದವು! (14-05-1955 - 14.05.2015) ನಿಮಗೆ ಶಿರಬಾಗಿ ವಂದಿಸುವೆ!

  "I'm Not Really 60! That's not my age, it's just not true, My heart is young, the time just flew. To age too fast would be a crime. Every morning I look in the mirror and staring at this strange old face, and someone else is in my place! Any way I say, "I don't know who you are, stranger, but I'm gonna shave you anyway! I'm just not 60 in my head & Heart, It's still so long...............till I am dead!"

  ಅವರ ಈ ಮಾತುಗಳಿಗೆ ಅಭಿಮಾನಿಗಳ ಲಕ್ಷಾಂತರ ಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ. ಯಾವುದೇ ಒಬ್ಬ ಸ್ಟಾರ್ ನಟನಿಗೆ ಸಿಗುವಷ್ಟೇ ಶುಭಾಶಯಗಳ ಸುರಿಮಳೆ! ಇನ್ನೇಕೆ ತಡ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ನೀವೂ ಥಟ್ ಅಂತ ವಿಶ್ ಮಾಡಿ. [ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಥಟ್ ಅಂತ ಹೇಳಿ]

  ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ರಿಂದ 10 ಗಂಟೆಯವರೆಗೆ ಪ್ರಸಾರವಾಗುವ ಥಟ್ ಅಂತ ಹೇಳಿ ಕಾರ್ಯಕ್ರಮ ಈಗಾಗಲೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದೆ. ಕನ್ನಡ ನಾಡು, ನುಡಿಯ ಬಗ್ಗೆ ಜ್ಞಾನದಾಹ ಹೆಚ್ಚಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಕನ್ನಡ ಪುಸ್ತಕ ಓದುವ ಅಭಿರುಚಿ ಇದ್ದರೆ ಈ ರಸಪ್ರಶ್ನೆಯಲ್ಲಿ ಭಾಗವಹಿಸಿ ಮತ್ತು ನಾನಾ ಲೇಖಕರು ಬರೆದಿರುವ ನಾನಾ ಬಗೆಯ ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ಗೆಲ್ಲಿರಿ. (ಫಿಲ್ಮಿಬೀಟ್ ಕನ್ನಡ)

  English summary
  Chandana TV game show 'That Antha Heli' host Dr. Naa Someswara, popularly known as Naa Someswara celebrating 60th birthday on 14th May. Wish him a very happy birthday.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more