Mother's day: ಅದ್ಭುತ ಸಾಲುಗಳ ಜೊತೆಗೆ ಅಮ್ಮಂದಿರ ಫೋಟೋ ಹಾಕಿ ಸಂಭ್ರಮಿಸಿದ ಕಿರುತೆರೆ ತಾರೆಯರು
ಇಂದು ವಿಶ್ವ ತಾಯಂದಿರ ದಿನ. ತಾಯಿ ಎಂಬ ದೈವದಿಂದ ನಾವೂ ನೀವೆಲ್ಲಾ ಈ ವಿಶಾಲವಾದ ಭೂಮಿ ಮೇಲಿದ್ದೇವೆ. ತಾಯಿಯ ಋಣವನ್ನ ತೀರಿಸಲು ಸಾಧ್ಯವೇ ಇಲ್ಲ. ಅವಳು ಉಪವಾಸವಿದ್ದರು ಮಕ್ಕಳ ಹೊಟ್ಟೆ ತುಂಬಿಸುವ ಗುಣ. ಅವಳಿಗೆ ಕಷ್ಟವಾದರೂ ಮಕ್ಕಳ ಸುಖವನ್ನೇ ಬಯಸುವ ಹೃದಯ. ಜಗತ್ತಿನಲ್ಲಿ ಏನೇ ಕಷ್ಟವಿದ್ದರು ಅದು ನನಗೆ ಮಾತ್ರ ಬರಲಿ ಎಂಬ ದೊಡ್ಡ ಮನಸ್ಸು ತಾಯಿಗೆ ಮಾತ್ರ ಇರುವುದು.
ಈ ದಿನ ಆಕೆಗೆ ಅಂಕಿತ. ಪ್ರತಿದಿನವು ಅಮ್ಮನನ್ನು ಸಂಭ್ರಮಿಸಲೇ ಬೇಕು. ಯಾಕಂದ್ರೆ ನಮಗಾಗಿ ಅವಳ ತ್ಯಾಗ ಅಷ್ಟರಮಟ್ಟಿಗೆ ಇರುತ್ತೆ. ಆದರೆ ಇಂದು ವಿಶ್ವ ತಾಯಂದಿರ ದಿನಕ್ಕೆ ಕಿರುತೆರೆ ನಟಿಯರು ತಮ್ಮ ತಾಯಂದಿರ ಫೋಟೋ ಹಾಕಿ, ಅದ್ಭುತ ಸಾಲುಗಳನ್ನ ಬರೆದಿದ್ದಾರೆ.

ಅಮ್ಮನ ಬಗ್ಗೆ ಹೊಗಳಿದ ಕಾರ್ತಿಕ್ ಮಹೇಶ್
ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಟ್ರೋಫಿ ಗೆದ್ದುಕೊಂಡು ಬಂದ ಕಾರ್ತಿಕ್ ಮಹೇಶ್ ತಾಯಂದಿರ ದಿನಕ್ಕೆ ಅದ್ಭುತ ಫೋಟೋಗಳನ್ನು ಹಾಕಿದ್ದಾರೆ. ಅಮ್ಮನೊಂದಿಗಿನ ಪೋಟೋ, ಅಮ್ಮ ಯುವತಿಯಾಗಿದ್ದಾಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಫೋಟೋಗೆ 'ಕೋಟಿ ದೇವರ ಕಾಣುವ ದೇವತೆ. ತನ್ನ ಕರುಳ ಕತ್ತರಿಸಿ ಜನ್ಮವಿತ್ತ ಜನ್ಮದಾತೆ. ನಿನ್ನ ಮಡಿಲಿಗೆ ಆ ಸ್ವರ್ಗವೂ ಸಮನಾದಿತೆ. ನಿನ್ನ ಋಣವು ತೀರಿಸಲು ಈ ಜನ್ಮವೂ ಸಾಕಾದಿತೆ' ಎಂಬ ಹಾಡಿನ ಸಾಲುಗಳನ್ನು ಹಾಕಿದ್ದಾರೆ.
ಅಮ್ಮನ ಬಗ್ಗೆ ರಾಧಾ ಟೀಚರ್ ಏನಂದ್ರು?
ರಾಧಾ ರಮಣ ಧಾರಾವಾಹಿ ಮೂಲಕ ಟೀಚರ್ ಆಗಿ ಎಲ್ಲರ ಮನ ಗೆದ್ದವರು ಶ್ವೇತಾ ಪ್ರಸಾದ್. ಫಿಟ್ನೆಸ್ ಕಡೆಗೆ ಹೆಚ್ಚು ಒಲವು ಹೊಂದಿರುವ ಶ್ವೇತಾ ಅವರು, ಇತ್ತಿಚೆಗೆ ಸಿನಿಮಾಗಳಲ್ಲಿಯೇ ಬ್ಯುಸಿಯಾಗಿದ್ದಾರೆ. ಇಂದು ಅಮ್ಮನ ದಿನಕ್ಕಾಗಿ ಸ್ಪೆಷಲ್ ಫೋಟೋ ಹಾಕಿ ವಿಶ್ ಮಾಡಿದ್ದಾರೆ. 'ನಾನು ಗಟ್ಟಿ ಮಹಿಳೆ. ಯಾಕಂದ್ರೆ ನನ್ನನ್ನು ಬೆಳೆಸಿದಾಕೆ ಕೂಡ ಗಟ್ಟಿ ಮಹಿಳೆ. ನನ್ನ ಸ್ಪೂರ್ತಿ. ನನ್ನಲ್ಲಿರುವ ಎಲ್ಲಾ ಒಳ್ಳೆಯತನ ಅವಳು. ನೀವೂ ಈಗಾಗಲೇ ಎಲ್ಲವನ್ನು ಹೆಚ್ಚಾಗಿಯೇ ಮಾಡಿದ್ದೀರಿ. ಮಗನ ಮದುವೆ ಮಾಡಿ ಚಿಲ್ ಆಗಿರಿ' ಎಂದು ಹಾರೈಸಿದ್ದಾರೆ.

ಮಾನಸ ಈ ಮೊದಲು 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸಖತ್ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಪಕ್ಕಾ ತದ್ವಿರುದ್ಧವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ದೇಗೌಡನಿಗೆ ಅತ್ತಿಗೆಯಾಗಿ. ಇದೀಗ ಅಮ್ಮನ ಫೋಟೋ ಹಂಚಿಕೊಂಡಿರುವ ಮಾನಸ, ನನ್ನ ಬಿಗ್ಗೆಸ್ಟ್ ಸ್ಟ್ರೆಂತ್ ಅಂತ ಹಾಕಿದ್ದಾರೆ.
ಅಮ್ಮನ ಜೊತೆಗೆ ಪಾರು ಫೋಟೋಶೂಟ್
'ಪಾರು' ಧಾರಾವಾಹಿ ಹಲವು ವರ್ಷಗಳ ಕಾಲ ಜನರನ್ನು ರಂಜಿಸಿತ್ತು. ಅಖಿಲಾಂಡೇಶ್ವರಿಗೆ ಸೊಸೆಯಾಗಿ ಪಾರು ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ಈಗ ಪಾರು ಧಾರಾವಾಹಿ ನಿಂತಿದೆ. ಪಾರು ತನ್ನ ಅಮ್ಮನ ಜೊತೆಗೆ ವಿಡಿಯೋವೊಂದನ್ನು ಹಾಕಿ, ಅದ್ಭುತ ಸಾಲುಗಳನ್ನು ಬರೆಯುವ ಮೂಲಕ ತಾಯಂದಿರ ದಿನಕ್ಕೆ ವಿಶ್ ಮಾಡಿದ್ದಾರೆ. 'ಜಗತ್ತಿನ ಪರಿಶುದ್ಧ ಪ್ರೀತಿ ಎಲ್ಲಿದೆ ಎಂದು ಯಾರಾದ್ರೂ ಕೇಳಿದ್ರೆ ನಾನು ತೋರಿಸುವುದು ನಿನ್ನ ಮಡಿಲನ್ನು. ನಿನ್ನ ಮಡಿಲು ನನಗೆ ಯಾವಾಗಲೂ ಆಸರೆಯಾಗಿರಲಿ' ಎಂದು ಕ್ಯಾಪ್ಷನ್ ಹಾಕಿದ್ದಾರೆ.


Click it and Unblock the Notifications











