»   » ವಿವಾದದ ಬಗ್ಗೆ ಸ್ಪಷ್ಟನೆ ಕೊಟ್ಟ 'ಹರಹರ ಮಹಾದೇವ'ನ 'ಪಾರ್ವತಿ' ಪ್ರಿಯಾಂಕಾ

ವಿವಾದದ ಬಗ್ಗೆ ಸ್ಪಷ್ಟನೆ ಕೊಟ್ಟ 'ಹರಹರ ಮಹಾದೇವ'ನ 'ಪಾರ್ವತಿ' ಪ್ರಿಯಾಂಕಾ

Posted By:
Subscribe to Filmibeat Kannada

'ಸ್ಟಾರ್ ಸುವರ್ಣ' ವಾಹಿನಿಯ 'ಹರ ಹರ ಮಹದೇವ' ಧಾರಾವಾಹಿಯಲ್ಲಿ ಪಾರ್ವತಿ ಪಾತ್ರವನ್ನ ನಿಭಾಯಿಸುತ್ತಿದ್ದ ನಟಿ ಪ್ರಿಯಾಂಕಗೆ ಟ್ರೈ ಆಂಗಲ್ ಫಿಲ್ಮ್ ಕಂಪನಿಯಿಂದ ನೋಟೀಸ್ ಕಳುಹಿಸಲಾಗಿದೆ ಎಂಬ ಸುದ್ದಿ ಇಂದು ಬೆಳಗ್ಗೆಯಿಂದ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಅಷ್ಟಕ್ಕೂ ನಟಿ ಪ್ರಿಯಾಂಕಗೆ ನೋಟೀಸ್ ಬಂದಿರುವುದು ಯಾಕೆ.? ಏನಿದು ವಿವಾದ.? ಎಂಬುದರ ಬಗ್ಗೆ ಸ್ವತಃ ನಟಿ ಪ್ರಿಯಾಂಕ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಗೆ ಸ್ಪಷ್ಟನೆ ನೀಡಿದ್ದಾರೆ.

Hara Hara Mahadeva Actress Priyanka clarifies about controversy

* 'ಹರ ಹರ ಮಹಾದೇವ' ಧಾರಾವಾಹಿ ತಂಡ ನಿಮ್ಮನ್ನು ಹೊರ ಹಾಕಿದ್ದ ಸುದ್ದಿ ನಿಜವೇ..?

- ''ಇಲ್ಲ ಇದು ಸುಳ್ಳು ಸುದ್ದಿ. ಅವರು ನನ್ನನ್ನು ಹೊರ ಹಾಕಿಲ್ಲ. ನಾನೇ ಧಾರಾವಾಹಿಯಿಂದ ಹೊರ ಬಂದಿದ್ದೇನೆ. ಸೀರಿಯಲ್ ಶುರುವಾದಾಗ ಮಾಡಿದ ಕಾಂಟ್ರ್ಯಾಕ್ಟ್ ಪ್ರಕಾರ ನಾನು 260 ಎಪಿಸೋಡ್ ಮಾಡಬೇಕಿತ್ತು. ಆದರೆ ನಾನು 380 ಎಪಿಸೋಡ್ ಗಳಲ್ಲಿ ನಟನೆ ಮಾಡಿದ್ದೇನೆ''

* ಹಾಗಾದರೆ ಏನಿದು ವಿವಾದ.?

- ''ನಾನು ಕಾಂಟ್ರ್ಯಾಕ್ಟ್ ಗಿಂತ ಹೆಚ್ಚು ದಿನವೇ ಕೆಲಸ ಮಾಡಿದ್ದೇನೆ. ಆದರೆ ಅವರು ಇನ್ನೂ ಮೂರು ತಿಂಗಳು ಮುಂದುವರೆಸುವಂತೆ ಕೇಳಿದ್ದರು. ಆದರೆ ನಾನು ನನ್ನ ಬೇರೆ ಸಿನಿಮಾದಲ್ಲಿ ಬಿಜಿ ಇದ್ದ ಕಾರಣ ಅದನ್ನು ನಿರಾಕರಿಸಿದೆ. ಆಗ ಅವರು ಕಂಪನಿ ಕಡೆಯಿಂದ ನೋಟೀಸ್ ಕಳುಹಿಸಿದ್ದಾರೆ''

* ಧಾರಾವಾಹಿ ತಂಡ ಹಾಗೂ ನಿಮ್ಮ ನಡುವೆ ಭಿನ್ನಾಭಿಪ್ರಾಯ ಇತ್ತಾ.?

- ''ಇಲ್ಲ. ನನಗೆ ಸಿನಿಮಾ ಕೆಲಸ ಇರುವ ಕಾರಣ ಟೈಂ ಆಗುತ್ತಿರಲಿಲ್ಲ. ಅದಕ್ಕೆ ನಾನು ಮೂರು ತಿಂಗಳು ಮುಂದುವರೆಸಲು ಸಾಧ್ಯ ಇಲ್ಲ ಅಂದೆ. ಅವರು ನೋಟೀಸ್ ನೀಡಿದ್ದು ಎರಡು ತಿಂಗಳು ಹಿಂದೆ. ಆ ಸಮಸ್ಯೆ ಈಗ ಬಗೆಹರಿದಿದೆ''

* ನಿಮಗೆ ನೋಟೀಸ್ ಬಂದಿದೆ. ನಿಮ್ಮ ಮುಂದಿನ ನಡೆ ಏನು.?

- ಏನೂ ಇಲ್ಲ. ಸಮಸ್ಯೆ ಬಗೆಹರಿದಿದೆ. ನಾನು ನನ್ನ ಸಿನಿಮಾಗಳಲ್ಲಿ ಬಿಜಿ ಇದ್ದೇನೆ. ವಾಹಿನಿ ಕಡೆಯಿಂದ ನನಗೆ ಯಾವುದೇ ತೊಂದರೆ ಇಲ್ಲ.

English summary
Hara Hara Mahadeva Actress Priyanka clarifies about the notice which was issued by Triangle Film Company.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X