»   » ಪಾರ್ವತಿ ಅವತಾರದ ಕಥೆ ಕಣ್ತುಂಬಿಕೊಳ್ಳಿ, ಪುಣ್ಯ ಕಟ್ಟಿಕೊಳ್ಳಿ.!

ಪಾರ್ವತಿ ಅವತಾರದ ಕಥೆ ಕಣ್ತುಂಬಿಕೊಳ್ಳಿ, ಪುಣ್ಯ ಕಟ್ಟಿಕೊಳ್ಳಿ.!

Posted By:
Subscribe to Filmibeat Kannada

ಸತಿ ದಹನದ ನಂತರ ಕೋಪೋದ್ರಿಕ್ತ ವೀರಭದ್ರನ ಅವತಾರ ತಾಳಿ, ದಕ್ಷನನ್ನು ಸಂಹರಿಸಿ, ನಂತರ ಶಕ್ತಿ ಪೀಠದ ಸ್ಥಾಪನೆ ಮಾಡಿ, ಕಾಲಭೈರವನನ್ನು ಅದರ ಕಾವಲಿಗೆ ನೇಮಿಸಿ, ಮತ್ತೆ ವೈರಾಗ್ಯದತ್ತ ಮನಸ್ಸು ಮಾಡಿದ ಮಹಾದೇವನನ್ನು ಸೇರಲು ಆದಿಶಕ್ತಿಯು ಪಾರ್ವತಿಯ ಅವತಾರ ತಾಳುತ್ತಾಳೆ.

ಬ್ರಹ್ಮನ ವರಪ್ರಸಾದದಿಂದ ಆದಿಶಕ್ತಿಯು ಹಿಮವಂತನ ಮಗಳಾಗಿ ಜನಿಸುವ ಪುಣ್ಯ ಕಥೆ ಬರುವ ಸೋಮವಾರದಿಂದ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಪ್ರಸಾರವಾಗಲಿದೆ.

ಪಾರ್ವತಿ ಅವತಾರ ತಾಳುವ ಆದಿಶಕ್ತಿ

ಲೋಕ ಕಲ್ಯಾಣಕ್ಕಾಗಿ ವಿರಾಗಿ ಮಹಾದೇವನ ಜೀವನದಲ್ಲಿ ಅನುರಾಗದ ಅಲೆಗಳನ್ನು ಎಬ್ಬಿಸಿ ಮಹಾದೇವನನ್ನು ಮತ್ತೊಮ್ಮೆ ಸಂಸಾರಿಯಾಗಿಸಲು ಆದಿಶಕ್ತಿಯು ಪಾರ್ವತಿ ಅವತಾರ ತಾಳಲು ಸಜ್ಜಾಗುತ್ತಾಳೆ. [ಈ ವಾರದ 'ಹರ ಹರ ಮಹಾದೇವ' ಸಂಚಿಕೆಗಳ ವಿಶೇಷತೆ ಏನು?]

ಪಾರ್ವತಿ-ಪರಮೇಶ್ವರ ಪ್ರೇಮ ಪ್ರಸಂಗ

ಜನುಮಾಂತರದ ಪ್ರೇಮಕಥೆಯಲ್ಲಿ ವಿಶೇಷ ಪರ್ವ ಇದಾಗಿದ್ದು, ಪಾರ್ವತಿ ಪರಮೇಶ್ವರರ ಪ್ರೇಮ ಪ್ರಸಂಗಗಳು ಮತ್ತು ಮಹಾದೇವನನ್ನು ಪಾರ್ವತಿ ಸಂಸಾರಿಯಾಗಿಸಿದ ಸನ್ನಿವೇಶಗಳನ್ನೊಳಗೊಂಡ ಅದ್ಭುತ ಸಂಚಿಕೆಗಳು 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಮೂಡಿಬರಲಿದೆ.

50 ಕಂತು ಪೂರೈಸಿದೆ

50 ಕಂತುಳನ್ನು ಯಶಸ್ವಿಯಾಗಿ ಪೂರೈಸಿರುವ 'ಹರ ಹರ ಮಹಾದೇವ' ಧಾರಾವಾಹಿ ನೋಡುಗರಲ್ಲಿ ಭಕ್ತಿ ಸುಧೆಯನ್ನು ಹರಿಸುತ್ತಾ ಜನ ಮನ್ನಣೆಗೆ ಪಾತ್ರವಾಗಿದ್ದು ಮುಂದಿನ ಸಂಚಿಕೆಗಳು ಶಿವನ ಮಹಿಮೆಯನ್ನು ಪಸರಿಸುತ್ತಾ ಭಕ್ತರಿಗೆ ಮತ್ತಷ್ಟು ಆಪ್ತವಾಗಲಿದೆ.

ಪಾರ್ವತಿ ಪಾತ್ರಧಾರಿ ಯಾರು?

'ಪಾರ್ವತಿ' ಪಾತ್ರದಲ್ಲಿ ಗುಲ್ಬರ್ಗದ ಪ್ರಿಯಾಂಕ ಚಿಂಚೋಲಿ ಅಭಿನಯಿಸುತ್ತಿದ್ದಾರೆ. ಮಾಡೆಲ್ ಕೂಡ ಆಗಿರುವ ಪ್ರಿಯಾಂಕ, ರಾಜ್ಯಮಟ್ಟದ ಟೆನ್ನಿಸ್ ಪಟು ಕೂಡ ಹೌದು. 'ಮಿಸ್ ಗುಲ್ಬರ್ಗ 2011', 'ಮಿಸ್ ವಿವೆಲ್ ಸೌತ್ ಇಂಡಿಯಾ 2013' ಮತ್ತು 'ಮಿಸ್ ಕರ್ನಾಟಕ 2014' ಕಿರೀಟಗಳನ್ನ ಮುಡಿಗೇರಿಸಿಕೊಂಡವರು ಪ್ರಿಯಾಂಕ ಚಿಂಚೋಲಿ.

ಪ್ರಸಾರ ಯಾವಾಗ?

'ಹರ ಹರ ಮಹಾದೇವ' ಧಾರಾವಾಹಿಯಲ್ಲಿ 'ಪಾರ್ವತಿ ಅವತಾರದ ಕಥೆ' ಸೋಮವಾರದಿಂದ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

English summary
After the episodes of Sati Dahan and Veerabhadra avatar, Star Suvarna is all set to introduce Adi Shakti's Parvathy Avatar in its pride serial 'Hara Hara Mahadeva'. Watch 'Hara Hara Mahadeva' from Monday to Friday at 7.30 PM in Star Suvarna.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more